ಗಂಧದ ಗುಡಿ, ಜೇಮ್ಸ್, ಲಕ್ಕಿ ಮ್ಯಾನ್ ಇವ್ಯಾವು ಅಲ್ಲ, ಅಪ್ಪು ರವರ ದೊಡ್ಡ ಸಿನಿಮಾ ಕನಸ್ಸು ಏನಾಗಿತ್ತು ಗೊತ್ತೇ?? ತಿಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪ್ರೀತಿಯ ಅಪ್ಪು ಅವರು ಇನ್ನಿಲ್ಲವಾಗಿ ಇನ್ನೇನು ಒಂದು ವರ್ಷ ಕಳೆಯುತ್ತಿದೆ. ಆದರೆ ಅಪ್ಪು ಅವರು ಇಲ್ಲ ಎಂದು ನಂಬಲು ಇಂದಿಗೂ ಸಂಪೂರ್ಣವಾಗಿ ಸಾಧ್ಯವಿಲ್ಲ. ಅಪ್ಪು ಅವರು ಇದ್ದಾಗ ಅವರು ಸಾಕಷ್ಟು ಕನಸುಗಳನ್ನು ಕಂಡಿದ್ದರು. ಅಪ್ಪು ಅವರ ದೊಡ್ಡ ಕನಸುಗಳಲ್ಲಿ ಒಂದು ಗಂಧದ ಗುಡಿ ಸಿನಿಮಾ, ಕರ್ನಾಟಕದ ಅರಣ್ಯ ಪ್ರದೇಶವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ, ಇದು ಅಪ್ಪು ಅವರು ಬಹಳ ಪ್ರೀತಿಯಿಂದ ಮಾಡಿರುವ ಡಾಕ್ಯುಮೆಂಟರಿ ಸಿನಿಮಾ. ಇದೊಂದೇ ಅಲ್ಲದೆ ಅಪ್ಪು ಅವರ ಮತ್ತೊಂದು ಕನಸಿತ್ತು..
ಅಪ್ಪು ಅವರ ಅದೊಂದು ಕನಸು ನನಸಾಗಲಿಲ್ಲ. ಅಪ್ಪು ಅವರ ಆ ಕನಸಿನ ಬಗ್ಗೆ ಡಾರ್ಲಿಂಗ್ ಕೃಷ್ಣ ಅವರು ಮಾತನಾಡಿದ್ದಾರೆ. ಅಪ್ಪು ಅವರು ಅಣ್ಣಾವ್ರು ಹಾಗೂ ನಟಿ ಲಕ್ಷ್ಮಿ ಅವರು ಅಭಿನಯಿಸಿದ್ದ ಎವರ್ ಗ್ರೀನ್ ಕ್ಲಾಸಿಕಲ್ ಸಿನಿಮಾ ನಾ ನಿನ್ನ ಮರೆಯಲಾರೆ ಸಿನಿಮಾವನ್ನು ರೀಕ್ರಿಯೇಟ್ ಮಾಡಬೇಕು ಎಂದುಕೊಂಡಿದ್ದರು. ಆ ಸಿನಿಮಾಗೆ ರಮ್ಯಾ ಅವರು ನಾಯಕಿ ಆಗಬೇಕು ಎಂದು ಸಹ ಅಂದುಕೊಂಡಿದ್ದರು. ಅಪ್ಪು ಅವರಿಗೆ ಈ ಸಿನಿಮಾ ಮಾಡಬೇಕು ಎಂದು ಬಹಳ ಆಸೆ ಇದ್ದು, ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ಈ ಬಗ್ಗೆ ಮಾತನಾಡಿದ್ದಾರಂತೆ, ಈ ವಿಚಾರವನ್ನು ಲಕ್ಕಿ ಮ್ಯಾನ್ ಸಿನಿಮಾ ಕುರಿತ ಸಂದರ್ಶನದಲ್ಲಿ ಕೃಷ್ಣ ತಿಳಿಸಿದ್ದಾರೆ.
ರಮ್ಯಾ ಅವರು ಸಹ ಈ ಕನಸಿನ ಬಗ್ಗೆ ಟ್ವೀಟ್ ಮಾಡಿದ್ದು, “ಹೌದು..ಇದು ನಿಜ.. ಅಪ್ಪು ನನ್ನ ಜೊತೆ ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದರು. ಇಂದು ಅಪ್ಪು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ..” ಎಂದು ರಮ್ಯಾ ಅವರು ಟ್ವೀಟ್ ಮಾಡಿದ್ದಾರೆ. ಅಪ್ಪು ಹಾಗೂ ರಮ್ಯಾ ಕನ್ನಡ ಚಿತ್ರರಂಗದಲ್ಲಿ ಬಹಳ ಇಷ್ಟಪಡುವ ಆನ್ ಸ್ಕ್ರೀನ್ ಜೋಡಿ, ಇವರಿಬ್ಬರು ಜೊತೆಯಾಗಿ ಮತ್ತೊಂದು ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ ಸಹ ಆಗಿತ್ತು, ನಟಿ ರಮ್ಯಾ ಅವರು ಸಹ ನಟನೆಗೆ ಕಂಬ್ಯಾಕ್ ಮಾಡಿದರೆ, ಅಪ್ಪು ಅವರ ಜೊತೆಗೆ ಎಂದು ಅಂದುಕೊಂಡಿದ್ದರು. ಆದರೆ ಇನ್ನುಮುಂದೆ ಅದು ಸಾಧ್ಯವಿಲ್ಲ ಎನ್ನುವುದು ಬಹಳ ದುಃಖದ ವಿಚಾರ ಆಗಿದೆ.