ಬಾಲಿವುಡ್ ಸ್ಟಾರ್ ಇಂದಲೂ ಮುರಿಯಲಾಗಲಿಲ್ಲ ಕೆಜಿಎಫ್2 ಅಡ್ವಾನ್ಸ್ ಬುಕಿಂಗ್ ದಾಖಲೆ.. ಬ್ರಹ್ಮಾಸ್ತ್ರ ಕಥೆ ಏನಾಗಿದೆ ಗೊತ್ತಾ? ಎಲ್ಲೆಲ್ಲೂ ರಾಕಿ ಭಾಯ್ ಕಿಂಗ್ ಅಂತಿದ್ದಾರೆ ಅಭಿಮಾನಿಗಳು
ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಬ್ರಹ್ಮಾಸ್ತ್ರ. ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಜೊತೆಯಾಗಿ ನಟಿಸಿರುವ ಸಿನಿಮಾ ಇದಾಗಿದ್ದು, ಮದುವೆಯ ಬಳಿಕ ತೆರೆಕಾಣುತ್ತಿರುವ ಇವರಿಬ್ಬರ ಮೊದಲ ಸಿನಿಮಾ ಆಗಿದೆ. ಬ್ರಹ್ಮಾಸ್ತ್ರ ಸಿನಿಮಾದ ಗ್ರಾಫಿಕ್ಸ್ ಗಳನ್ನು ನೋಡಿ, ಜನರು ಸಿನಿಮಾ ಚೆನ್ನಾಗಿಲ್ಲ, ನಿರೀಕ್ಷೆಯ ಮಟ್ಟ ತಲುಪುವುದು ಕಷ್ಟವೇ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.
ಸೆಪ್ಟೆಂಬರ್ 9ರಂದು, ಅಂದರೆ ನಾಳೆ ಸಿನಿಮಾ ವಿಶ್ವಾದ್ಯಂತ ತೆರೆಕಾಣುತ್ತಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಾಣುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ನೆಗಟಿವ್ ಟಾಕ್ ಕೇಳಿ ಬರುತ್ತಿದ್ದರು ಸಹ, ಅಡ್ವಾನ್ಸ್ ಟಿಕೆಟ್ ಬುಕಿಂಗ್ ನಲ್ಲಿ ಮುಂದಿದೆ. ಸೆಪ್ಟೆಂಬರ್ 7 ರ ರಾತ್ರಿ ವೇಳೆಗೆ ಅಡ್ವಾನ್ಸ್ ಬುಕಿಂಗ್ ಇಂದಲೇ 23 ಕೋಟಿ ಗಳಿಸಿದೆ. ಮೊದಲ ದಿನದ ಟಿಕೆಟ್ ಬುಕಿಂಗ್ ನಲ್ಲಿ 11 ಕೋಟಿ, ವೀಕೆಂಡ್ ಟಿಕೆಟ್ ಬುಕಿಂಗ್ ನಲ್ಲಿ 10 ಗಳಿಕೆ ಮಾಡಿದೆ ಎನ್ನುವುದು ವರದಿಗಳ ಪ್ರಕಾರ ತಿಳಿದುಬಂದಿದೆ.
ಬ್ರಹ್ಮಾಸ್ತ್ರ ಸಿನಿಮಾ ಅಡ್ವಾನ್ಸ್ ಬುಕಿಂಗ್ ನಲ್ಲಿ ಮುಂದಿದ್ದರು ಸಹ, ಕೆಜಿಎಫ್ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಕೆಜಿಎಫ್2 ಹಿಂದಿ ವರ್ಷನ್ ಬುಕಿಂಗ್ ನಲ್ಲಿ ಮೊದಲ ದಿನವೇ, 40 ಕೋಟಿ ರೂಪಾಯಿಗಳಷ್ಟು ಟಿಕೆಟ್ ಬುಕಿಂಗ್ ಆಗಿತ್ತು. ನಮ್ಮ ಕನ್ನಡ ಸಿನಿಮಾ ಕೆಜಿಎಫ್2 ಬಾಲಿವುಡ್ ನಲ್ಲಿ ಮಾಡಿರುವ ದಾಖಲೆಯನ್ನು ಹಿಂದಿ ಸಿನಿಮಾ ಕೂಡ ಮುರಿಯಲು ಸಾಧ್ಯವಾಗಿಲ್ಲ ಎನ್ನುವುದು ಸಂತೋಷದ ವಿಚಾರದ. ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ನೆಗಟಿವ್ ಟಾಕ್ ಇದ್ದರೂ, ಪ್ರಚಾರ ಕಾರ್ಯ ಚೆನ್ನಾಗಿ ನಡೆದಿದೆ, ಹಾಗೂ ಸಿನಿಮಾ ಮೇಲಿನ ಕುತೂಹಲದಿಂದ ಜನರು ಟಿಕೆಟ್ ಬುಕ್ ಮಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.