ಹೊಸದಾಗಿ ಮದುವೆಯಾಗಿರುವ ನಯನತಾರ ರವರಿಗೆ ಶಾಕ್: ಕಾಡುತ್ತಿದೆ ಗಂಭೀರ ಆರೋಗ್ಯ ಸಮಸ್ಯೆ. ವಿಜ್ಞೇಶ್ ತೆಗೆದುಕೊಂಡು ಷಾಕಿಂಗ್ ನಿರ್ಧಾರ.

68

Get real time updates directly on you device, subscribe now.

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮುಂದುವರೆದಿರುವ ನಟಿ ನಯನತಾರಾ ಇತ್ತೀಚೆಗಷ್ಟೇ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿದ್ದು ಗೊತ್ತೇ ಇದೆ. ಒಂದಷ್ಟು ಚಿತ್ರಗಳಲ್ಲಿ ಬ್ಯುಸಿ ಇರುವ ಈ ಚೆಲುವೆ ಸದ್ಯ ರಜಾ ಕಳೆಯುತ್ತಿದ್ದಾರೆ. ಇದಕ್ಕೂ ಮುನ್ನ ನಯನತಾರಾ ಅವರು ತನ್ನ ಪತಿಯ ಹೆಸರಿನಲ್ಲಿ ₹23 ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿ ಗಿಫ್ಟ್ ನೀಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

ಮೂವತ್ತು ದಾಟಿದ ನಯನತಾರಾ ಜೀವನದಲ್ಲಿ ಹಲವು ಟ್ವಿಸ್ಟ್‌ಗಳಿವೆ ಎನ್ನಬಹುದು. ವೃತ್ತಿಬದುಕಿನ ಆರಂಭದಲ್ಲಿ ನಟ ಸಿಂಬು ಜೊತೆ ರೊಮ್ಯಾನ್ಸ್ ಮಾಡಿದ್ದ ಈ ಬ್ಯೂಟಿ ನಂತರ ಪ್ರಭುದೇವ ಅವರ ಜೊತೆ ರೊಮ್ಯಾನ್ಸ್ ಮಾಡಿದ್ದರು. ಎಲ್ಲರೂ ಪ್ರಭುದೇವ ಹಾಗೂ ನಯನತಾರ ಮದುವೆಯಾಗುತ್ತಾರೆ ಎಂದು ಭಾವಿಸಿದ್ದರು. ಆದರೆ ಈ ವಿಚಾರದಲ್ಲಿ ಪ್ರಭುದೇವರ ಅವರ ಪತ್ನಿ ಎಂಟ್ರಿ ಕೊಟ್ಟು ವಿವಾದಗಳು ಶುರುವಾದ ಕಾರಣ ಮದುವೆ ಹಂತಕ್ಕೆ ಹೋಗಲಿಲ್ಲ. ಇತ್ತೀಚಿಗೆ ನಯನತಾರಾ ಅವರ ಆರೋಗ್ಯದ ಬಗ್ಗೆ ಮತ್ತೊಂದು ವಿಚಾರ ಕೇಳಿಬಂದಿದೆ.

ನಯನತಾರ ಅವರ ಅವರ ಗರ್ಭ ತುಂಬಾ ದುರ್ಬಲವಾಗಿದ್ದು, ಅವರಿಗೆ ಮಕ್ಕಳಾಗುವ ಸಾಧ್ಯತೆ ಇಲ್ಲ ಎಂಬ ಸುದ್ದಿ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ. ನಯನತಾರಾ ಅವರಿಗೆ ಮಕ್ಕಳಾಗಬೇಕೆಂದರೆ ಜೀವಕ್ಕೆ ಅಪಾಯ, ಹಾಗಾಗಿ ನಯನತಾರಾ ಅವರಿಗೆ ಮದುವೆಯ ನಂತರ ಮಕ್ಕಳಾಗುವ ಅವಕಾಶವಿಲ್ಲ ಹಾಗಾಗಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಯೋಚಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಪತಿ ವಿಘ್ನೇಶ್ ಶಿವನ್ ಇದಕ್ಕೆ ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ. ಇಬ್ಬರೂ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವ ಯೋಚನೆಯಲ್ಲಿದ್ದಾರಂತೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಷಯ ವೈರಲ್ ಆಗಿದ್ದು, ನಯನ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ.

Get real time updates directly on you device, subscribe now.