ಯಾವುದೇ ಮುಚ್ಚು ಮರೆ ಇಲ್ಲದೆ, ನೇರವಾಗಿ ಸಿನೆಮಾಗೆ ಹಾಗೂ ಟಿವಿ ಕಾರ್ಯಕ್ರಮಗಳಿಗೆ ಪಡೆಯುವ ಸಂಭಾವನೆ ಬಗ್ಗೆ ಹೇಳಿದ ಜಗ್ಗೇಶ್. ಎಷ್ಟು ಕಡಿಮೆ ಗೊತ್ತೇ??

58

Get real time updates directly on you device, subscribe now.

ನಟ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ನವರಸನಾಯಕ ಎಂದೇ ಹೆಸರುವಾಸಿ ಆಗಿದ್ದಾರೆ. 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಜಗ್ಗೇಶ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೊದಲು ಹಾಸ್ಯನಟನಾಗಿ ಹಾಗೂ ಖಳನಟನಾಗಿ ವೃತ್ತಿ ಜೀವನ ಶುರು ಮಾಡಿ, ನಂತರ ಜಗ್ಗೇಶ್ ಅವರು ನಾಯಕನಾಗಿ ಕಾಣಿಸಿಕೊಂಡರು. ಇದುವರೆಗೂ ಜಗ್ಗೇಶ್ ಅವರು ನೂರಾರು ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಜಗ್ಗೇಶ್ ಅವರು ತೋತಾಪುರಿ ಎನ್ನುವ ಸಿನಿಮಾ ಒಂದರಲ್ಲಿ ನಟಿಸಿದ್ದು, ಈ ಸಿನಿಮಾ ಇನ್ನೇನು ಬಿಡುಗಡೆ ಆಗಲು ಸಜ್ಜಾಗಿದೆ.

ತೋತಾಪುರಿ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ, ನಟಿ ಸುಮನ್ ರಂಗನಾಥ್, ಡಾಲಿ ಧನಂಜಯ್ ಸೇರಿದಂತೆ ಒಳ್ಳೆಯ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗಿಂತ ಮೊದಲು ಒಂದು ಪ್ರೆಸ್ ಮೀಟ್ ಮಾಡಿದ್ದು, ಅದರಲ್ಲಿ ಇಡೀ ಚಿತ್ರತಂಡ ಪಾಲ್ಗೊಂಡಿತ್ತು. ಆ ಸಂದರ್ಭದಲ್ಲಿ ನಟ ಜಗ್ಗೇಶ್ ಅವರು ತಮ್ಮ ಸಂಭಾವನೆಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. “ಒಂದು ಸಿನಿಮಾ ಮಾಡಿದರೆ ಜೀವನ ನಡೆಸಬಹುದು. ಒಂದು ಸಿನಿಮಾಗೆ 2 ಕೋಟಿ ಸಂಬಳ ಕೊಡ್ತಾರೆ, ಟಿವಿಯಲ್ಲಿ ಕಾಣಿಸಿಕೊಂಡರೆ 3 ಕೋಟಿ ಸಂಬಳ ಕೊಡ್ತಾರೆ. ಅದನ್ನ ಹೇಳಿಕೊಳ್ಳೋದಕ್ಕೆ ಏನು ಭಯ ಇಲ್ಲ.” ಎಂದು ಹೇಳಿದ್ದಾರೆ ನಟ ಜಗ್ಗೇಶ್.

“ನನಗೆ ಒಬ್ಬ ಹೆಂಡತಿ ಮತ್ತು ಇಬ್ಬರು ಮಕ್ಕಳು, ಅವರನ್ನು ಸಾಕುವುದಕ್ಕೆ ಅಷ್ಟು ಹಣ ಸಾಕು. ನನ್ನ ಮಕ್ಕಳು ತುಂಬಾ ಒಳ್ಳೆಯವರು ನನ್ನ ಹೆಸರನ್ನ ಎಲ್ಲಿಯೂ ಬಳಸಿಕೊಳ್ಳುವುದಿಲ್ಲ. ನನಗೆ ಅರ್ಧ ಡಜನ್ ಹೆಂಡತಿ, ಒಂದು ಡಜನ್ ಮಕ್ಕಳಿಲ್ಲ, ಇಷ್ಟು ಹಣ ನನ್ನ ಜೀವನ ನಡೆಸಲು ಸಾಕು” ಎಂದಿದ್ದಾರೆ ಜಗ್ಗೇಶ್ ಅವರು. ಈಗಲೂ ಸಹ ಜಗ್ಗೇಶ್ ಅವರಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಅವರ ಸಿನಿಮಾಗಳು ಬಿಡುಗಡೆ ಆಗುತ್ತವೆ ಎಂದರೆ ಥಿಯೇಟರ್ ನಲ್ಲಿ ನೋಡಲು ಕಾಯುವ ಅಭಿಮಾನಿ ಬಳಗ ಸಹ ಇದೆ. ಹಾಗಾಗಿಯೇ ಜಗ್ಗೇಶ್ ಅವರಿಗಾಗಿ ವಿಶೇಷವಾದ ಪಾತ್ರಗಳನ್ನು ಸಹ ನಿರ್ದೇಶಕರು ಬರೆಯುತ್ತಾರೆ.

Get real time updates directly on you device, subscribe now.