ಸಿನೆಮಾಗೆ ಹತ್ತಾರು ಕೋಟಿ ಪಡೆಯುವ ಅಲ್ಲು ಅರ್ಜುನ್, ಜಾಹಿರಾತಿಗೆ ಪಡೆಯುವ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಇಷ್ಟೇನಾ??
ಪುಷ್ಪ ಸಿನಿಮಾ ಬಳಿಕ ನಟ ಅಲ್ಲು ಅರ್ಜುನ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಸ್ಟೇಟಸ್ ಹೊಂದಿದ್ದಾರೆ. ಪುಷ್ಪ ಸಿನಿಮಾ ಅವರಿಗೆ ಅಷ್ಟು ದೊಡ್ಡ ಮಟ್ಟದ ಹಿಟ್ ನೀಡಿದೆ. ತೆಲುಗು ಚಿತ್ರರಂಗದ ಅತಿಹೆಚ್ಚು ಹಿಟ್ ಪಡೆದ ನಟರಲ್ಲಿ ಅಲ್ಲು ಅರ್ಜುನ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಅಲ್ಲು ಅರ್ಜುನ್ ಅವರ ಸಿನಿಮಾ ಮಾಡಿದರೆ ಯಾವ ನಿರ್ಮಾಪಕನಿಗೂ ಲಾಸ್ ಅಂತೂ ಆಗುವುದಿಲ್ಲ.. ಸಿನಿಪ್ರಿಯರಿಗೂ ಇವರ ಸಿನಿಮಾ ನೋಡಿದರೆ ಕೊಟ್ಟ ಹಣಕ್ಕೆ ಮನರಂಜನೆ ಸಿಗುವುದು ಗ್ಯಾರಂಟಿ.
ಅಲ್ಲು ಅರ್ಜುನ್ ಅವರು ಸಿನಿಮಾ ಮಾತ್ರವಲ್ಲದೆ ಹಲವು ಜಾಹೀರಾತುಗಳಲ್ಲಿ ಸಹ ನಟಿಸುತ್ತಾರೆ. ಇದೀಗ ಜಾಹೀರಾತುಗಳಿಗೆ ಇವರು ಪಡೆಯುವ ಸಂಭಾವನೆಯ ವಿಷಯ ಚರ್ಚೆಯಾಗುತ್ತಿದೆ ಅಲ್ಲು ಅರ್ಜುನ್ ಅವರು ಒಂದು ಜಾಹೀರಾತಿನ ಸಮಯ ಎಷ್ಟಿರುತ್ತಾರೆ, ಹಾಗೆಯೇ ಆ ಜಾಹೀರಾತಿಗೆ ಅವರು ಎಷ್ಟು ಶ್ರಮ ಹಾಕಬೇಕಾಗುತ್ತದೆ ಎನ್ನುವುದರ ಮೇಲೆ ಸಂಭಾವನೆ ನಿಗದಿ ಮಾಡುತ್ತಾರಂತೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಈಗ ಅಲ್ಲು ಅರ್ಜುನ್ ಅವರು ಒಂದು ಸಿನಿಮಾಗೆ 80 ರಿಂದ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ, ಕೆಲವು ಸಿನಿಮಾಗಳಲ್ಲಿ ಶೇರ್ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ..
ಅಲ್ಲು ಅರ್ಜುನ್ ಅವರು ಒಂದು ಜಾಹೀರಾತಿಗೆ ಸುಮಾರು 7 ರಿಂದ 8 ಕೋಟಿ ಸಂಭಾವನೆ ಪಡೆಯುತ್ತಾರಂತೆ. ಸಿನಿಮಾಗೆ ಅಷ್ಟು ದೊಡ್ಡ ಮೊತ್ತ ಪಡೆಯುವ ನಟ ಜಾಹೀರಾತಿಗೆ ಪಡೆಯುವ ಸಂಭಾವನೆ ಇಷ್ಟು ಕಡಿಮೆನಾ ಎನ್ನುತ್ತಿದ್ದಾರೆ ನೆಟ್ಟಿಗರು. ಅಲ್ಲು ಅರ್ಜುನ್ ಅವರು ಹಲವು ಬ್ರ್ಯಾಂಡ್ ಗಳಿಗೆ ರಾಯಭಾರಿ ಆಗಿದ್ದಾರೆ, ರೆಡ್ ಬಸ್, ಜೋಮ್ಯಾಟೋ, ರಾಪಿಡೋ, ಕೋಲ್ಗೇಟ್ ಮ್ಯಾಕ್ಸ್ ಫ್ರೆಶ್, 7ಅಪ್, ಫ್ರೂತಿ, ಓ.ಎಲ್.ಎಕ್ಸ್, ಹೀರೋ ಹೋಂಡಾ ಹಾಗೂ ಇನ್ನಿತರ ಹಲವು ಬ್ರ್ಯಾಂಡ್ ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ, ತಮ್ಮದೇ ಆಗಿರುವ ಆಹಾ ಆಪ್ ನ ಜಾಹೀರಾತಿನಲ್ಲೂ ಕಾಣಿಸಿಕೊಳ್ಳುತ್ತಾರೆ.. ಪುಷ್ಪ ಸಿನಿಮಾ ಬಳಿಕ ಇವರಿಗೆ ಇರುವ ಬೇಡಿಕೆ ಇನ್ನು ಹೆಚ್ಚಾಗಿದೆ.