ಸುಮ್ಮನೆ ಇದ್ದ ಎನ್ಟಿಆರ್ ಅನ್ನು ಕೆಣಕಿದ ತೆಲಂಗಾಣ ಸಿಎಂ: ಅದೊಂದು ಕಾರಣಕ್ಕೆ ಕೋಟಿ ಕೋಟಿ ನಷ್ಟ: ಏನಾಗಿದೆ ಗೊತ್ತೇ ತೆಲಂಗಾಣದಲ್ಲಿ??
ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ತಿಂಗಳು ತೆರೆಗೆ ಬರಲಿದೆ. ಸಿನಿಮಾದ ಪ್ರಚಾರ ಕಾರ್ಯಗಳು ಜೋರಾಗಿಯೇ ನಡೆಯುತ್ತಿದೆ. ಈ ಸಿನಿಮಾ 450 ಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಗೆ ಬರಲು ಸಿದ್ಧವಾಗಿದೆ. ತೆಲುಗಿನಲ್ಲಿ ಈ ಸಿನಿಮಾವನ್ನು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಪ್ರಸ್ತುತ ಪಡಿಸುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಅನ್ನು ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಅದ್ಧೂರಿಯಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಇವೆಂಟ್ ಗೆ ಮುಖ್ಯ ಅತಿಥಿಗಳಾಗಿ ನಟ ಜ್ಯೂನಿಯರ್ ಎನ್.ಟಿ.ಆರ್ ಹಾಗೂ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದೆ. ಹೈದರಾಬಾದ್ ನಲ್ಲಿ ನಡೆಯುತ್ತಿರುವ ಸಾಮೂಹಿಕ ಗಣೇಶ್ ವಿಸರ್ಜನೆಗೆ ಪೊಲೀಸರು ಭದ್ರತೆ ನೀಡಬೇಕಿರುವ ಕಾರಣ, ಪ್ರೀ ರಿಲೀಸ್ ಇವೆಂಟ್ ಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಕೊನೆಯ ಕ್ಷಣದಲ್ಲಿ ಪೊಲೀಸರು ಮನವಿ ಮಾಡಿದ ಕಾರಣ ಇವೆಂಟ್ ಗೆ ಬ್ರೇಕ್ ಬಿದ್ದಿದೆ. ಆದರೆ ನಟ ಜ್ಯೂನಿಯರ್ ಎನ್.ಟಿ.ಆರ್ ಅಭಿಮಾನಿಗಳು ಬೇರೆ ಮಾತನ್ನೇ ಹೇಳುತ್ತಿದ್ದಾರೆ. ಈ ಹಿಂದೆ ಸಹ ಹೈದರಾಬಾದ್ ನಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ, ಅದಕ್ಕೆಲ್ಲಾ ಪೊಲೀಸರು ಭದ್ರತೆ ನೀಡಿದ್ದಾರೆ, ಈ ಕಾರ್ಯಕ್ರಮ ಕ್ಯಾನ್ಸಲ್ ಆಗಲು ಕಾರಣ ಜ್ಯೂನಿಯರ್ ಎನ್.ಟಿ.ಆರ್ ಅವರನ್ನು ಅತಿಥಿಯಾಗಿ ಕರೆಸುತ್ತಿರುವುದು ಎನ್ನುಟ್ಟಿದ್ದಾರೆ..
ಕೆಲ ದಿನಗಳ ಹಿಂದೆ ಜ್ಯೂನಿಯರ್ ಎನ್.ಟಿ.ಆರ್ ಅವರು ಬಿಜಿಪಿ ಪಕ್ಷದ ಅಮಿತ್ ಶಾ ಅವರನ್ನು ಭೇಟಿ ಆಗಿದ್ದರು, ಮುಂದಿನ ದಿನಗಳಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ಅವರಿಗೆ ಬಿಜೆಪಿ ಪಕ್ಷವನ್ನು ಕಂಡರೆ ಆಗುತ್ತಿಲ್ಲ, ಹಾಗಾಗಿ ಅವರು ಕೊನೆಯ ಕ್ಷಣದಲ್ಲಿ ಈ ರೀತಿ ಪರ್ಮಿಶನ್ ಕಿತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ಜ್ಯೂನಿಯರ್ ಎನ್.ಟಿ.ಆರ್ ಇವೆಂಟ್ ಕ್ಯಾನ್ಸಲ್ ಆಗಿದ್ದಕ್ಕೆ ಎಲ್ಲಾ ಅಭಿಮಾನಿಗಳ ಬಳಿ ಕ್ಷಮೆ ಕೇಳಿ, ಪೊಲೀಸರ ಕೆಲಸಕ್ಕೆ ಗೌರವ ಕೊಡಬೇಕು ಎಂದು ಹೇಳಿದ್ದಾರೆ..
ಇತ್ತ ಇವೆಂಟ್ ಆಯೋಜಿಸಿದ್ದ ಸಂಸ್ಥೆ ಹೇಳಿರುವ ಪ್ರಕಾರ, ಈಗಾಗಲೇ ಪೊಲೀಸರಿಂದ ಅನುಮತಿ ಪಡೆದುಕೊಳ್ಳಲಾಗಿತ್ತು. ಎಸ್.ಪಿ ಅವರು ಬಂದು ಎಲ್ಲವನ್ನು ಪರಿಶೀಲಿಸಿ, ಸಿಸಿಟಿವಿ ಹಾಕಿಸಿಕೊಳ್ಳಲು ಹೇಳಿದ್ದರು, ಈಗಾಗಲೇ ಕಾರ್ಯಕ್ರಮಕ್ಕಾಗಿ 2.5ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಇವೆಂಟ್ ಗಾಗಿ ಸಾಕಷ್ಟು ಬಾಡಿಗಾರ್ಡ್ ಗಳನ್ನು ಕರೆಸಾಲಗಿತ್ತು, ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು, ಎಲ್ಲಾ ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಆದರೆ ಕೊನೆಯ ಕ್ಷಣದಲ್ಲಿ ಈ ರೀತಿ ಆಗಿದೆ ಎಂದು ತಿಳಿಸಿದ್ದಾರೆ.