ಬಹಳ ಅಪರೂಪ ಬ್ಲ್ಯಾಕ್ ಬಾಡಿಕಾನ್ ಡ್ರೆಸ್ ನಲ್ಲಿ ಥೇಟ್ ಅಪ್ಸರೆಯಂತ ಕಂಡ ಅರ್ಜುನ್ ಸರ್ಜಾ ಮಗಳು. ನೋಡಲು ಎರಡು ಕಣ್ಣು ಸಾಲದು.
ದಕ್ಷಿಣ ಭಾರತ ಚಿತ್ರರಂಗದ ಆಕ್ಷನ್ ಕಿಂಗ್ ಎಂದೇ ಖ್ಯಾತಿ ಪಡೆದಿರುವವರು ನಟ ಅರ್ಜುನ್ ಸರ್ಜಾ. ಇವರು ಸರ್ಜಾ ಕುಟುಂಬದ ಗೌರವವನ್ನು ಎತ್ತಿ ಹಿಡಿಯುತ್ತಿರುವ ಮಗ. ಅರ್ಜುನ್ ಸರ್ಜಾ ಅವರು ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿದ್ದಾರೆ. ಅರ್ಜುನ್ ಸರ್ಜಾ ಅವರು ಬಾಲನಟನಾಗಿ ಹಲವು ಸಿನಿಮಾಗಳಲ್ಲಿ ನಟಿಸಿ, ನಂತರ ಹೀರೋ ಆದರು. ಕನ್ನಡ ಚಿತ್ರರಂಗದ ಮೂಲಕ ನಟನೆ ಶುರು ಮಾಡಿ, ನಂತರ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದರು. ಅರ್ಜುನ್ ಸರ್ಜಾ ಅವರು ಕನ್ನಡದ ಹಿರಿಯನಟ ರಾಜೇಶ್ ಅವರ ಮಗಳು ರಥಸಪ್ತಮಿ ಸಿನಿಮಾದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿದ್ದ ನಿವೇದಿತಾ ಅವರ ಜೊತೆ ಮದುವೆಯಾದರು.
ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಮೊದಲ ಮಗಳು ಐಶ್ವರ್ಯ, ಎರಡನೇ ಮಗಳು ಅಂಜನ. ಐಶ್ವರ್ಯ ಪ್ರೇಮ ಬರಹ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಮತ್ತು ಕಾಲಿವುಡ್ ಎರಡು ಕಡೆಗೂ ಎಂಟ್ರಿ ಕೊಟ್ಟರು. ಇತ್ತೀಚೆಗೆ ಐಶ್ವರ್ಯ ಅವರನ್ನು ಅರ್ಜುನ್ ಸರ್ಜಾ ಅವರು ತೆಲುಗು ಚಿತ್ರರಂಗಕ್ಕೆ ಲಾಂಚ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಐಶ್ವರ್ಯ ಅರ್ಜುನ್ ಆಗಾಗ ಹೊಸ ಫೋಟೋಶೂಟ್ ಗಳಿಗೆ ಪೋಸ್ ನೀಡಿ, ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಐಶ್ವರ್ಯ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ..

ಬ್ಲ್ಯಾಕ್ ಕಲರ್ ಬಾಡಿ ಕಾನ್ ಡ್ರೆಸ್ ಧರಿಸಿ ಮಿಂಚಿದ್ದಾರೆ ಐಶ್ವರ್ಯ. ಈ ಡ್ರೆಸ್ ಗೆ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು, ಸುಂದರವಾದ ಓಲೆ ಹಾಕಿದ್ದಾರೆ. ಕಪ್ಪು ಬಣ್ಣದ ಈ ಡ್ರೆಸ್ ನಲ್ಲಿ ಐಶ್ವರ್ಯ ಅವರು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಫೋಟೋಗಳಿಗೆ ಈಗಾಗಲೇ 52 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಗಳು ಬಂದಿದೆ. 200ಕ್ಕಿಂತ ಹೆಚ್ಚು ಕಮೆಂಟ್ಸ್ ಗಳು ಸಹ ಬಂದಿದೆ. ಇದಕ್ಕಿಂತ ಮೊದಲು ಐಶ್ವರ್ಯಾ ಅವರು ಬಿಳಿ ಬಣ್ಣದ ಡ್ರೆಸ್ ನಲ್ಲಿ ಮತ್ತೊಂದು ಫೋಟೋಶೂಟ್ ವೈರಲ್ ಆಗಿತ್ತು, ಈ ಫೋಟೋಗಳು ಸಹ ವೈರಲ್ ಆಗಿದೆ.