ಹೆಂಡತಿಯ ಸಂತೃಪ್ಪಿಗಾಗಿ ಒಮ್ಮೆಲೇ 20 ಕೋಟಿ ಖರ್ಚು ಮಾಡಿ ಸಂತೋಷಗೊಳಿಸಿದ ನಟ ರಾಣಾ: ಏನು ಮಾಡಿದ್ದಾರೆ ಗೊತ್ತೇ??

18

Get real time updates directly on you device, subscribe now.

ಟಾಲಿವುಡ್ ನ ಭಲ್ಲಾಳ ದೇವ ನಟ ರಾಣಾ ದಗ್ಗುಬಾಟಿ ಎಲ್ಲರಿಗೂ ಚಿರಪರಿಚಿತ. ಅವರು ವಿಶಿಷ್ಟ ನಟರಾಗಿ ಹೊರಹೊಮ್ಮುತ್ತಿದ್ದಾರೆ. ಇನ್ನು ಕೆಲವರು ಹೀರೋ ಆಗಿ ಮಾತ್ರ ನಟಿಸುತ್ತಿದ್ದರೆ, ನಾಯಕನಾಗಿಯೂ, ಖಳನಾಯಕನಾಗಿಯೂ ಮಿಂಚಿದ್ದಾರೆ ರಾಣಾ. ಅದಕ್ಕೇ ಎಲ್ಲರಿಗಿಂತಲೂ ಇವರಿಗೆ ಹೆಚ್ಚು ಬೇಡಿಕೆ ಎಂದು ಹೇಳಬಹುದು. ದಗ್ಗುಬಾಟಿ ಕುಟುಂಬದ ಎರಡನೇ ನಾಯಕ ಇವರು. ಈಗಿನ ಸರಾಸರಿ ಹೀರೋಗಳಲ್ಲಿ ಅವರು ಮೊದಲ ಸಾಲಿನಲ್ಲಿದ್ದಾರೆ. ಆರು ಅಡಿಯ ಸುಂದರ ವ್ಯಕ್ತಿಯಾಗಿ ಅವರಿಗೆ ಒಳ್ಳೆಯ ಇಮೇಜ್ ಇದೆ.

ಮೇಲಾಗಿ ಯಾವುದೇ ಸಿನಿಮಾ ಮಾಡಿದರೂ ಅದು ಹೊಸದೇ ಹೊರತು ಮಾಮೂಲಿಯಾಗದಂತೆ ನೋಡಿಕೊಳ್ಳುತ್ತಾರೆ. ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಹೊಸತನ್ನು ನೀಡಬೇಕು ಎಂಬುದು ಅವರ ಆಸೆ. ರಾಣಾ ಅವರು ಲಾಕ್‌ಡೌನ್ ಸಮಯದಲ್ಲಿ ಮಿಹಿಕಾ ಅವರನ್ನು ವಿವಾಹವಾದರು. ಅಂದಿನಿಂದ ಅವರು ವೈಯಕ್ತಿಕವಾಗಿ ತುಂಬಾ ಸಂತೋಷವಾಗಿದ್ದಾರೆ. ಈ ನಡುವೆ ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ಮಿಹಿಕಾ ಅದೆಲ್ಲವನ್ನು ಒಂದೇ ಪೋಸ್ಟ್‌ ನಲ್ಲಿ ಸುಳ್ಳು ಎಂದು ಪ್ರೂವ್ ಮಾಡಿದ್ದಾರೆ.

ಈ ನಡುವೆ ರಾಣಾ ಅವರ ಇತ್ತೀಚಿನ ನಿರ್ಧಾರ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಸತತ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ರಾಣಾಜ್ ಹಾಗಾಗಿ ಹೆಂಡತಿಯೊಂದಿಗೆ ಕಳೆಯಲು ಕೂಡ ಸಮಯವಿಲ್ಲ. ಇದರಿಂದ ಆಕೆ ತುಂಬಾ ನೊಂದಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಹೆಂಡತಿಯನ್ನು ಸಂತೋಷಪಡಿಸಲು ರಾಣಾ ಅವರು ಹೆಂಡತಿಯ ಜೊತೆ ಕೆಲವು ದಿನಗಳವರೆಗೆ ಪ್ರವಾಸಕ್ಕೆ ಹೋಗಬೇಕೆಂದು ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಅವರು ದೊಡ್ಡ ಆಫರ್ ನಿರಾಕರಿಸಿದ್ದು, ಅದರಿಂದ 20 ಕೋಟಿ ರೂಪಾಯಿವರೆಗೆ ಸಂಭಾವನೆಯನ್ನು ಬೇಡ ಎಂದಿದ್ದಾರೆ. ಪತ್ನಿಯ ಖುಷಿಗಿಂತ ತನಗೆ ಯಾವುದೂ ಹೆಚ್ಚಲ್ಲ ಎಂಬುದನ್ನು ರಾಣಾ ಸಾಬೀತು ಮಾಡಿದ್ದಾರೆ ಎನ್ನಲಾಗಿದೆ.

Get real time updates directly on you device, subscribe now.