ಕೊನೆಗೂ ಕಠಿಣ ನಿರ್ಧಾರ ತೆಗೆದುಕೊಂಡು ಬಿಟ್ಟ ಸಮಂತಾ: ಈ ನಿರ್ಧಾರ ಮೊದಲೇ ತೆಗೆದುಕೊಂಡಿದ್ದಾರೆ ಡೈವೋರ್ಸ್ ಆಗ್ತಾ ಇರ್ಲಿಲ್ಲ. ಏನಂತೆ ಗೊತ್ತೇ?
ನಟಿ ಸಮಂತಾ ಇಂದಿಗೂ ಸಹ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯಾಗಿ ಹೆಸರು ಪಡೆದಿದ್ದಾರೆ. ಸಮಂತಾ ಅವರು ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿದ್ದಾರೆ. ಗ್ಲಾಮರ್ ಶೋ, ಬೋಲ್ಡ್ ಪಾತ್ರಗಳು, ಬೋಲ್ಡ್ ಫೋಟೋಶೂಟ್ ಗಳಿಂದ ಸಮಂತಾ ಸುದ್ದಿಯಾಗುತ್ತಾರೆ. ಅದರಲ್ಲೂ ವಿಚ್ಛೇದನ ಪಡೆದ ಬಳಿಕ ಹೆಚ್ಚು ಫೋಟೋಶೂಟ್ ಗಳು ಹಾಗೂ ಜಾಹಿರಾತುಗಳಲ್ಲಿ ಬ್ಯುಸಿ ಇದ್ದ ಸಮಂತಾ, ಇದ್ದಕ್ಕಿದ್ದ ಹಾಗೆ ಬರೋಬ್ಬರಿ 40 ದಿನಗಳು ಸೋಷಿಯಲ್ ಮೀಡಿಯಾ ಇಂದ ದೂರ ಉಳಿದಿದ್ದರು. ಸಮಂತಾ ಸೈಲೆಂಟ್ ಆಗಿರಲು ಕಾರಣ ಏನು ಎಂದು ಅಭಿಮಾನಿಗಳು ಸಹ ತಲೆಕೆಡಿಸಿಕೊಂಡಿದ್ದರು, ಇದೀಗ ಆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.
ನಟಿ ಸಮಂತಾ ಅವರಿಗೆ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಬಳಿಕ ಪುಷ್ಪ ಸಿನಿಮಾದ ಸ್ಪೆಶಲ್ ಸಾಂಗ್ ಸಮಂತಾ ಅವರಿಗೆ ಇದ್ದ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿತು ಎಂದರೆ ತಪ್ಪಾಗುವುದಿಲ್ಲ. ಇನ್ನು ವಿಚ್ಛೇದನ ಪಡೆದ ಬಳಿಕ ಸಮಂತಾ ಅವರು ಹೆಚ್ಚಾಗಿ ಕೆರಿಯರ್ ಕಡೆಗೆ ಗಮನ ಹರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಿದ್ದ ಸಮಂತಾ, ಒಂದಲ್ಲಾ ಒಂದು ಫೋಟೋಶೂಟ್ ಗಳ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಕೆಲ ಸಮಯದಿಂದ ಸೈಲೆಂಟ್ ಆಗಿದ್ದಾರೆ.

ಇದಕ್ಕೀಗ ಉತ್ತರ ಸಿಕ್ಕಿದ್ದು, ಸಮಂತಾ ಅವರು ಇನ್ನು ಮುಂದೆ ಸಿನಿಮಾ ಮಾಡುವುದಕ್ಕೆ ಒಂದು ಕಂಡೀಷನ್ ಹಾಕಿದ್ದಾರಂತೆ. ಇನ್ನುಮುಂದೆ ಸಿನಿಮಾಗಳಲ್ಲಿ ಗ್ಲಾಮ್ ಶೋ ಮಾಡುವುದಿಲ್ಲ, ಕಿಸ್ಸಿಂಗ್ ದೃಶ್ಯಗಳು ಇರಬಾರದು, ಅದ್ಯಾವುದು ಇಲ್ಲ ಎಂದರೆ ಮಾತ್ರ ಸಿನಿಮಾಗೆ ಸಹಿ ಹಾಕುತ್ತೇನೆ ಎಂದು ನಿರ್ಧಾರ ಮಾಡಿದ್ದಾರಂತೆ. ಸಮಂತಾ ಅವರ ಈ ನಿರ್ಧಾರ ಅವರ ಅಭಿಮಾನಿಗಳು ಮತ್ತು ಚಿತ್ರರಂಗ ಎರಡಕ್ಕೂ ಶಾಕ್ ನೀಡಿರುವುದಂತೂ ಸತ್ಯ. ಇದ್ದಕ್ಕಿದ್ದ ಹಾಗೆ ಸಮಂತಾ ಈ ರೀತಿಯ ನಿರ್ಧಾರ ಯಾಕೆ ತೆಗೆದುಕೊಂಡರು ಎನ್ನುವ ಪ್ರಶ್ನೆ ಕೂಡ ಈಗ ಶುರುವಾಗಿದೆ.