ತನ್ನ ಮಗನ ಪರಿಸ್ಥಿತಿ ನೋಡಿ ಕಣ್ಣೀರಿಟ್ಟ ಖ್ಯಾತ ನಟಿ ಮಾಳವಿಕಾ ಮೇಡಂ: ಇಂತಹ ಪರಿಸ್ಥಿತಿ ಯಾರಿಗೂ ಬೇಡ ಎಂದ ಫ್ಯಾನ್ಸ್.

112

Get real time updates directly on you device, subscribe now.

ನಟಿ ಮಾಳವಿಕಾ ಯಾರಿಗೆ ತಾನೇ ಗೊತ್ತಿಲ್ಲ.. 90ರ ದಶಕದಿಂದ ಈಗಿನವರೆಗೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಹ ಮಾಳವಿಕಾ ಅವರು ಚಿರಪರಿಚಿತ. 90ರ ದಶಕದಲ್ಲಿ ಕಿರುತೆರೆಯಲ್ಲಿ ಸಹ ಸ್ಟಾರ್ ಆಗಿ ಮೆರೆದವರು ಮಾಳವಿಕಾ. ಕೆಜಿಎಫ್ ಸಿನಿಮಾ ನಿರೂಪಕಿ ಪಾತ್ರ ಇವರಿಗೆ ಇನ್ನಷ್ಟು ಜನರ ಮೆಚ್ಚುಗೆ ತಂದುಕೊಟ್ಟಿತು. ಪ್ರಸ್ತುತ ಮಾಳವಿಕಾ ಅವರು, ಜೀವಾಹಿನಿಯ ಜೋಡಿ ನಂಬರ್ 1 ಶೋ ನ ಜಡ್ಜ್ ಆಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ ವಾರ ಜೋಡಿ ನಂಬರ್ 1 ಮತ್ತು ಡಿಕೆಡಿ ಶೋ ಮಹಾಸಂಗಮ ನಡೆದ ಎಪಿಸೋಡ್ ಗಳು ಪ್ರಸಾರವಾಗಿದೆ. ಡಿಕೆಡಿ ಶೋನಲ್ಲಿ ಸಹನಾ ಎನ್ನುವ ಸ್ಫರ್ಧಿ ಇದ್ದು, ಅವರಿಗೆ ಕಿವಿ ಕೇಳುವುದಿಲ್ಲ ಅವರು ಡ್ಯಾನ್ಸ್ ಮಾಡುವುದನ್ನು ನೋಡಿ, ಎಲ್ಲರೂ ಮೆಚ್ಚಿಕೊಂಡರು. ಮಾಳವಿಕಾ ಅವರು ಸಹ ಸಹನಾ ಅವರ ಪರ್ಫಾಮೆನ್ಸ್ ಮೆಚ್ಚಿಕೊಳ್ಳುವುದರ ಜೊತೆಗೆ ತಮ್ಮ ಮಗನನ್ನು ನೆನೆದು ಭಾವುಕರಾಗಿದ್ದಾರೆ. ಕಲಾವಿದರ ಜೀವನ ಹೊರಗಿನಿಂದ ನೋಡಲು ಎಲ್ಲವು ಚೆನ್ನಾಗಿ ಕಾಣಿಸುತ್ತದೆ, ಆದರೆ ಅವರ ವೈಯಕ್ತಿಕ ಜೀವನ ಹೇಗಿರುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ, ಅವರ ನೋವುಗಳು ಅವರಿಗೆ ಮಾತ್ರ ಸ್ವಂತ.

ನಟಿ ಮಾಳವಿಕಾ ಅವರ ವಿಚಾರದಲ್ಲೂ ಇದೇ ರೀತಿ, ಅವರ ಮಗ ಕೂಡ ಬುದ್ಧಿಮಾಂದ್ಯ ಮಗು ಆಗಿತ್ತು ಮಗನ ಸಂಗೀತ ಜ್ಞಾನದ ಬಗ್ಗೆ ಮಾಳವಿಕಾ ಮಾತನಾಡಿದ್ದಾರೆ,. ನನ್ನ ಮಗನಿಗೆ 8 ತಿಂಗಳು ಇರುವಾಗಲೇ ಸಂಗೀತ ಜ್ಞಾನ ಇತ್ತು. ದಿನ ಹೊರಗಡೆ ಕೆಲಸ ಇದ್ದರು, ದಿನದ ಕೊನೆಯ ಸಮಯದಲ್ಲಾದರು ಮಗನ ಜೊತೆಗಿರುತ್ತೇನೆ. ಅವನಿಗೆ ಊಟ ಮಾಡಿಸೋಕೆ ನಮಗೆ ಬೇರೆ ವಿಧಾನ ಗೊತ್ತಿಲ್ಲ, ಟಾಮ್ ಅಂಡ್ ಜೆರ್ರಿ, ಛೋಟಾ ಭೀಮ್ ಇದೆಲ್ಲ ಅವನಿಗೆ ಅರ್ಥವಾಗಲ್ಲ, ಅವನಿಗೆ ಅರ್ಥ ಆಗುವ ಭಾಷೆ ಸಂಗೀತ ಮಾತ್ರ. ಅಪ್ಪಾಜಿ ಹಾಡುಗಳು, ಅರ್ಜುನ್ ಜನ್ಯ ಅವರ ಹಾಡುಗಳು, ಶಿವಣ್ಣ ಅವರ ಓಂ ಸಿನಿಮಾ ಹಾಡುಗಳನ್ನ ನನ್ನ ಮಗ ಕೇಳುತ್ತಾನೆ..ಎಂದು ಸಂಗೀತ ಇಷ್ಟಪಡುವ ತಮ್ಮ ಬುದ್ಧಿಮಾಂದ್ಯ ಮಗನ ಬಗ್ಗೆ ಮಾಳವಿಕಾ ಅವರು ಭಾವುಕರಾಗಿ ಮಾತನಾಡಿದ್ದಾರೆ. ವೇದಿಕೆಯಲ್ಲಿದ್ದವರು ಸಹ ಮಾಳವಿಕಾ ಅವರ ಮಾತಿಗೆ ಕಣ್ಣೀರು ಹಾಕಿದ್ದಾರೆ.

Get real time updates directly on you device, subscribe now.