ಪುಟ್ಟಕ್ಕನ್ನ ಮಕ್ಕಳು ಧಾರಾವಾಹಿಯಲ್ಲಿ ಕಾದಿದೆಯೇ ಟ್ವಿಸ್ಟ್? ಗಿಫ್ಟ್ ಕೊಟ್ಟು ಸಹನಾ ಬಳಿ ಕ್ಷಮೆ ಕೇಳಿದ ಮೇಸ್ಟ್ರು. ಯಾವ ಹಾದಿಯಲ್ಲಿ ಸ್ಟೋರಿ ನಡೆಯುತ್ತಿದೆ ಗೊತ್ತೇ??
ಪುಟ್ಟಕ್ಕನ ಮಕ್ಕಳು ಧಾರವಾಹಿ ಜೀಕನ್ನಡ ವಾಹಿನಿಯ ಟಾಪ್ 1 ಧಾರವಾಹಿ ಎಂದರೆ ತಪ್ಪಾಗುವುದಿಲ್ಲ. ವೀಕ್ಷಕರು ಬಹಳ ಇಷ್ಟಪಟ್ಟು ನೋಡುತ್ತಿರುವ ಧಾರವಾಹಿ ಇದು. ಇದೀಗ ಪುಟ್ಟಕ್ಕನ ಮಕ್ಕಳು ಧಾರವಾಹಿ ಒಳ್ಳೆಯ ಕಥೆ ಜೊತೆಗೆ ಸಾಗುತ್ತಿದೆ. ಬಹಳಷ್ಟು ಟ್ವಿಸ್ಟ್ ಗಳು ಧಾರವಾಹಿಯಲ್ಲಿ ಮೂಡಿಬರುತ್ತಿದೆ. ಪುಟ್ಟಕ್ಕನ ಮಕ್ಕಳೇ ಈಗ ತಾಯಿಯ ಮೇಲೆ ಮುನಿಸಿಕೊಂಡಿದ್ದು, ಸುಮ ತನ್ನ ತಾಯಿಯನ್ನು ಕೋಚ್ ಆಗಿ ಒಪ್ಪಿಕೊಳ್ಳದೆ ಕೋಪ ಮಾಡಿಕೊಂಡಿದ್ದಾಳೆ. ಇದರಿಂದ ರಾಜೇಶ್ವರಿಗೆ ಬಹಳ ಸಂತೋಷವಾಗಿ ಗೋಪಾಲನ ಬಳಿ ಬಂದು ಈ ವಿಚಾರ ಹೇಳಿ ಸಂತೋಷ ಪಡುತ್ತಾಳೆ.
ಇತ್ತ ಪುಟ್ಟಕ್ಕನ ಮನೆಯಲ್ಲಿ ಸುಮ ಕಾಲಜಿಗೆ ಹೋದ ನಂತರ ಸ್ನೇಹ ಮತ್ತು ಸಹನಾ, ಸುಮ ಆ ರೀತಿ ಮಾಡಿದ್ದು ಇಷ್ಟವಾಗಲಿಲ್ಲ, ರಾಜೇಶ್ವರಿ ಮುಂದೆ ಅಮ್ಮಾನೆ ನನ್ನ ಕೋಚ್ ಅಂತ ಒಪ್ಪಿಕೊಳ್ಳಬೇಕಿತ್ತು ಎಂದು ಹೇಳುತ್ತಾರೆ. ಅದಕ್ಕೆ ಪುಟ್ಟಕ್ಕ, ಅವಳಿಗೆ ನನ್ನ ಮೇಲೆ ಕೋಪ ಸರಿ ಹೋಗುತ್ತೆ ಬಿಡು ಎಂದು ಹೇಳುತ್ತಾರೆ. ಬಳಿಕ ಮೆಸ್ ಕಡೆಗೆ ಹೋಗುತ್ತಾರೆ. ಅಲ್ಲಿಗೆ ಮೇಷ್ಟ್ರು ಕೂಡ ಬರುತ್ತಾರೆ, ಆ ಸಮಯಕ್ಕೆ ಪುಟ್ಟಕ್ಕನ ಮಕ್ಕಳು ಅಲ್ಲಿ ಇರುವುದಿಲ್ಲ, ಮಂಜುಳಾ ಅವರನ್ನು ನೋಡಿ, ಮೇಷ್ಟ್ರೇ ಏನು ಬೇಕು ಎಂದು ಕೇಳಿದಾಗ, ಇಡ್ಲಿ ಕೇಳುತ್ತಾರೆ. ಆ ಸಮಯಕ್ಕೆ ಪುಟ್ಟಕ್ಕ ಕೂಡ ಬಂದು, ಮೇಷ್ಟ್ರೇ ಸುಮ ಏನು ಬರೆಯದೆ ಹೋಗಿದ್ದಾಳೆ, ನೀವೇ ಬೋರ್ಡ್ ಮೇಲೆ ಏನಾದರೂ ಬರೆದು ಬಿಡಿ ಎಂದು ಹೇಳುತ್ತಾರೆ.
ಆಗ ಮೇಷ್ಟ್ರು ಬೋರ್ಡ್ ಮೇಲೆ ಸುಭಾಷಿತ ಬರೆಯುತ್ತಾರೆ, ಅದನ್ನು ನೋಡಿ ಸ್ನೇಹಾ ಕೂಡ ತುಂಬಾ ಚೆನ್ನಾಗಿ ಬರೆದಿದ್ದೀರಾ ಮೇಷ್ಟ್ರೇ ಎಂದು ಹೇಳಿ, ಅಕ್ಕ ನಾನು ಬರುತ್ತೇನೆ ಎಂದು ಹೇಳಿ ಹೋಗುತ್ತಾಳೆ, ಆಗ ಮೇಷ್ಟ್ರು ಸಹನಾಳನ್ನು ನೋಡಿ, ಸನ್ನೆ ಮಾಡಿ ಕರೆಯುತ್ತಾರೆ, ಸಹನಾ ಬರಲು ನಿರಾಕರಿಸಿದಾಗ, ಪ್ಲೀಸ್ ಬಾ ಎಂದು ಕರೆಯುತ್ತಾರೆ. ಆಗ ಸಹನಾ ಬಾವಿಯ ಬಳಿಗೆ ಬರುತ್ತಾಳೆ, ಸಹನಾ ಬಳಿ ಹೋದ ಮೇಷ್ಟ್ರು ಗಿಫ್ಟ್ ಅನ್ನು ಕೊಡುತ್ತಾರೆ, ಆದರೆ ಸಹನಾ ಯಾರಾದರೂ ನೋಡಿದರೆ ಎಂದು ಭಯ ಪಡುತ್ತಾಳೆ, ಆಗ ಮೇಷ್ಟ್ರು ನಾನು ತಪ್ಪು ಮಾಡಿದ್ದೀನಿ ಪ್ಲೀಸ್ ಇದನ್ನ ತಗೋ ನನ್ನ ಕ್ಷಮಿಸು ಎಂದು ಹೇಳುತ್ತಾರೆ. ಆಗ ಸಹನಾ ಆ ಗಿಫ್ಟ್ ತೆಗೆದುಕೊಳ್ಳುತ್ತಾಳೆ. ಸಧ್ಯಕ್ಕೆ ಧಾರವಾಹಿಯಲ್ಲಿ ಈ ರೀತಿ ನಡೆದಿದ್ದು ಮುಂದೆ ಯಾವ ಹೊಸ ಟ್ವಿಸ್ಟ್ ಇರುತ್ತದೆ ಎಂದು ಕಾದು ನೋಡಬೇಕಿದೆ.