ಇರಲಾರದೆ ಇರುವೆ ಬಿಟ್ಟುಕೊಂಡು ಲೈಗರ್ ಸಿನಿಮಾದಲ್ಲಿ ಸೋಲನ್ನು ಕಂಡ ವಿಜಯ್ ಈಗ ಕೊನೆಗೂ ತಲೆಬಾಗಿ ತೆಗೆದುಕೊಂಡ ಕಠಿಣ ನಿರ್ಧಾರ ಏನು ಗೊತ್ತೆ? ಭೇಷ್ ಎಂದ ನೆಟ್ಟಿಗರು.
ವಿಜಯ್ ದೇವರಕೊಂಡ ನಾಯಕನಾಗಿ, ಅನನ್ಯ ಪಾಂಡೆ ನಾಯಕಿಯಾಗಿ, ಪೂರಿ ಜಗನ್ನಾಧ್ ಅವರ ನಿರ್ದೇಶನದಲ್ಲಿ, ಚಾರ್ಮಿ ಕೌರ್ ಅವರು ನಿರ್ಮಾಣ ಮಾಡಿದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋತಿದೆ. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು ತಂಡ, ಅದರಲ್ಲೂ ವಿಜಯ್ ದೇವರಕೊಂಡ ಲೈಗರ್ ಸಿನಿಮಾ ದೊಡ್ಡ ಹಿಟ್ ಆಗುತ್ತದೆ, 200ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡುತ್ತದೆ ಎನ್ನುವ ಹೇಳಿಕೆ ನೀಡಿದ್ದರು.
ಆದರೆ ಈಗ ವಿಜಯ್ ದೇವರಕೊಂಡ ಅವರಿಂದಲೇ ಸಿನಿಮಾ ಸೋತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ವಿಜಯ್ ಅವರ ದರ್ಪವೇ ಈಗ ಸಿನಿಮಾದ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ. ಬಾಲಿವುಡ್ ನಲ್ಲಿ ವಿಜಯ್ ಧೂಳೆಬ್ಬಿಸುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು, ಆದರೆ ಈಗ ಅದೆಲ್ಲವೂ ಉಲ್ಟಾ ಹೊಡೆದಿದೆ. ವಿಜಯ್ ದೇವರಕೊಂಡ ಅವರಿಗೂ ತಾವು ಮಾಡಿದ ತಪ್ಪಿನ ಅರಿವಾಗಿದ್ದು, ಸಿನಿಮಾ ಸೋಲು ಕಾಣಲು ಅವರೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ.
ಹಾಗಾಗಿ ವಿಜಯ್ ದೇವರಕೊಂಡ ಅವರು ತಾವು ಸಿನಿಮಾಗಾಗಿ ತೆಗೆದುಕೊಂಡಿದ್ದ ಕೋಟಿಗಟ್ಟಲೆ ಸಂಭಾವನೆಯನ್ನು ನಿರ್ಮಾಪಕರಿಗೆ ವಾಪಸ್ ಕೊಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಲೈಗರ್ ಸಿನಿಮಾಗೆ ವಿಜಯ್ ದೇವರಕೊಂಡ ಅವರು ₹25ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದರು ಎನ್ನಲಾಗಿದ್ದ, ಚಾರ್ಮಿ ಕೌರ್ ಅವರು ಹಾಗೂ ಪೂರಿ ಜಗನ್ನಾಧ್ ಅವರಿಗೆ ತಾವು ತೆಗೆದುಕೊಂಡಿದ್ದ 25ಕೋಟಿ ರೂಪಾಯಿಯನ್ನು ಸಹ ಹಿಂದಿರುಗಿಸಿ ಕೊಟ್ಟಿದ್ದಾರೆ ಎನ್ನಲಾಗಿದೆ.