ಲೈಗರ್ ಸಿನಿಮಾ ಸೋಲಿನ ಬೆನ್ನಲ್ಲೇ ಅನನ್ಯ ಪಾಂಡೆ ರವರಿಗೆ ಮತ್ತೊಂದು ಶಾಕ್: ಒಂದು ಕಡೆ ಸೋಲು ಮತ್ತೊಂದು ಕಡೆ ಈಗ ಏನಾಗಿದೆ ಗೊತ್ತೇ??
ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯ ಪಾಂಡೆ ಇಬ್ಬರು ಕಾಂಬಿನೇಷನ್ ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಬಿಡುಗಡೆಯಾದ ಮೊದಲ ದಿನವೇ ನೆಗಟಿವ್ ರಿವ್ಯೂ ಇಂದಾಗಿ ಸೋಲನ್ನು ಕಂಡಿದೆ. ಲೈಗರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ, 200ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡುತ್ತದೆ ಎಂದು ವಿಜಯ್ ದೇವರಕೊಂಡ ಹೇಳಿಕೆ ಸಹ ನೀಡಿದ್ದರು. ಆದರೆ ಅದೆಲ್ಲವೂ ಈಗ ಉಲ್ಟಾ ಆಗಿದೆ.
ವಿಜಯ್ ದೇವರಕೊಂಡ ಅವರು ಈಗ ಲೈಗರ್ ಸಿನಿಮಾಗೆ ತೆಗೆದುಕೊಂಡಿದ್ದ ಸಂಭಾವನೆಯನ್ನು ನಿರ್ಮಾಪಕರಿಗೆ ವಾಪಸ್ ನೀಡಿದ್ದಾರೆ. ಇದರಿಂದ ಸಿನಿಮಾ ಸೋಲು ಖಚಿತವಾಗಿದೆ, ಸಿನಿಮಾ ನೋಡಲು ಜನರು ಥಿಯೇಟರ್ ಗೆ ಬರುತ್ತಿಲ್ಲ, ವಿಜಯ್ ಅಭಿಮಾನಿಗಳಿಗೂ ಸಹ ಸಿನಿಮಾ ಇಷ್ಟವಾಗಿಲ್ಲ ಎನ್ನಲಾಗುತ್ತಿದೆ. ನಟಿ ಅನನ್ಯ ಪಾಂಡೆ ಅವರಿಗೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಮೊದಲ ಸಿನಿಮಾ ಹೀನಾಯವಾಗಿ ಸೋತಿದೆ. ಇದರಿಂದ ಅನನ್ಯ ಪಾಂಡೆ ಅವರಿಗೆ ಮತ್ತೊಂದು ದೊಡ್ಡ ಶಾಕ್ ಸಿಕ್ಕಿದೆ.

ಲೈಗರ್ ಸಿನಿಮಾ ಇಂದ ಒಂದು ಮಟ್ಟಕ್ಕೆ ನಿರೀಕ್ಷೆ ಸೃಷ್ಟಿಸಿದ್ದ ಅನನ್ಯ ಪಾಂಡೆ ಅವರನ್ನು ಜ್ಯೂನಿಯರ್ ಎನ್.ಟಿ.ಆರ್ ಅವರ 30ನೇ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದರು. ಆಫರ್ ಅನ್ನು ಗಣನೆಗೆ ತೆಗೆದುಕೊಂಡಿದ್ದ ಅನನ್ಯ ಪಾಂಡೆ, ಲೈಗರ್ ಸಿನಿಮಾ ಬಿಡುಗಡೆಯಾದ ಬಳಿಕ ಸಿನಿಮಾ ಒಪ್ಪಿಕೊಳ್ಳಬೇಕು ಎಂದುಕೊಂಡಿದ್ದರು, ಆದರೆ ಲೈಗರ್ ಸಿನಿಮಾ ಸೋತ ಬಳಿಕ ಅನನ್ಯ ಪಾಂಡೆ ಅವರನ್ನು ಸಿನಿಮಾಗೆ ತೆಗೆದುಕೊಳ್ಳುವುದು ಬೇಡ ಎನ್ನುವ ನಿರ್ಧಾರ ಮಾಡಿದ್ದಾರಂತೆ. ಇವರು ಮಾತ್ರವಲ್ಲದೆ, ಅನನ್ಯ ಅವರನ್ನು ಸಿನಿಮಾಗೆ ಹಾಕಿಕೊಳ್ಳಬೇಕು ಎಂದುಕೊಂಡಿದ್ದ ಇನ್ನು ಕೆಲವು ನಿರ್ಮಾಪಕರು ಅನನ್ಯ ಅವರನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ.