ಇಂಟರ್ನೆಟ್ ಅನ್ನು ಶೇಕ್ ಮಾಡಿದ ಸ್ಟಾರ್ ನಟನ ಪತ್ನಿ: ಟ್ರೆಡಿಷನಲ್ ಲುಕ್ಸ್ ನೋಡಿ ನೆಟ್ಟಿಗರು ಫಿದಾ. ಈಕೆ ಯಾರು ಗೊತ್ತೇ??
ಈಗೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರು ಮಾತ್ರವಲ್ಲದೆ ಅವರ ಪತ್ನಿಯರಿಗೂ ಒಳ್ಳೆಯ ಕ್ರೇಜ್ ಇದೆ. ನಟ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ, ರಾಮ್ ಚರಣ್ ಅವರ ಪತ್ನಿ ಉಪಾಸನಾ ಇವರು ಶೇರ್ ಮಾಡಿಕೊಳ್ಳುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದನ್ನು ನೋಡಬಹುದು. ಇದೀಗ ಜ್ಯೂನಿಯರ್ ಎನ್.ಟಿ.ಆರ್ ಅವರ ಪತ್ನಿ ಲಕ್ಷ್ಮಿ ಪ್ರಣತಿ ಅವರ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲಕ್ಷ್ಮಿ ಪ್ರಣತಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಲ್ಲ, ಅವರು ಫೋಟೋಗಳನ್ನು ಸಹ ಶೇರ್ ಮಾಡಿಕೊಳ್ಳುವುದಿಲ್ಲ. ಬಹಳ ಪ್ರೈವೇಟ್ ಆಗಿ ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಹಾಗೆ ಕ್ಯಾಮೆರಾ ಹಿಂದೆಯೇ ಇದ್ದಾರೆ. ಆದರೆ ಅವರಿಗೆ ತಿಳಿಯದ ಹಾಗೆ ಲಕ್ಷ್ಮಿಪ್ರಣತಿ ಅವರ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಅದೇ ರೀತಿ ಲಕ್ಷ್ಮಿ ಪ್ರಣತಿ ಅವರ ಟ್ರೆಡಿಷನಲ್ ಲುಕ್ಸ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದರಲ್ಲಿ ಪ್ರಣತಿ ಅವರು ಸಾಕಷ್ಟು ಆಭರಣಗಳನ್ನು ಧರಿಸಿ ಕಂಗೊಳಿಸುತ್ತಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಪ್ರಣತಿ ಅವರು ಕಾಣಿಸಿಕೊಂಡಿದ್ದು ಅವರಿಗೆ ಗೊತ್ತಿಲ್ಲದ ಹಾಗೆ ಫೋಟೋ ಕ್ಲಿಕ್ ಮಾಡಿ, ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಅದನ್ನು ನೋಡಿದ ನೆಟ್ಟಿಗರು ಫಿದಾ ಆಗಿ ವಾವ್ ಎನ್ನುತ್ತಿದ್ದಾರೆ. ಪ್ರಸ್ತುತ ಲಕ್ಷ್ಮಿ ಅವರ ಈ ಫೋಟೋಗೆ ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಲೈಕ್ಸ್ ಮತ್ತು ಕಮೆಂಟ್ಸ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.