ಅಕ್ಕಿನೇನಿ ಕುಟುಂಬಕ್ಕೆ ಮತ್ತೊಂದು ಸಮಸ್ಯೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ನಾಗ ಚೈತನ್ಯ ತಮ್ಮ: ನೆಟ್ಟಿಗರು ಫುಲ್ ಗರಂ
ತೆಲುಗು ನಟ ಅಕ್ಕಿನೇನಿ ಫ್ಯಾಮಿಲಿ ಎಂದರೆ ಬಹಳ ಗೌರವ ಮತ್ತು ಮರಿಯಾದೆ ಬಿದೆ. ಟಾಲಿವುಡ್‌ನಲ್ಲಿ ದೊಡ್ಡ ಕುಟುಂಬವಾಗಿ ಬೆಳೆದುಜ್ ಈ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ತನ್ನ ತಂದೆಯ ನಂತರ, ನಟ ನಾಗಾರ್ಜುನ ಅವರು ಚಿತ್ರರಂಗದಲ್ಲಿ ಆ ಮಟ್ಟದ ಹೆಸರು ಮತ್ತು ಖ್ಯಾತಿಯನ್ನು ಗಳಿಸಿದರು. ಇಂಡಸ್ಟ್ರಿಗೆ ಏನೇ ಸಮಸ್ಯೆ ಬಂದರೂ ಸರಿ ಅವರ ಪರವಾಗಿ ನಿಲ್ಲುತ್ತಾರೆ. ಆದರೆ ಅವರ ಉತ್ತರಾಧಿಕಾರಿಗಳು ನಾಗಾರ್ಜುನ ಅವರ ಮಟ್ಟದಲ್ಲಿ ಮಿಂಚಲಿಲ್ಲ.
ನಾಗಚೈತನ್ಯ ಅವರು ಉತ್ತಮವಾಗು ನಟಿಸಿ ಒಳ್ಳೆಯ ಸಿನಿಮಾ ಗಳನ್ನು ಆಯ್ಕೆ ಮಾಡಿಕೊಂಡಿದ್ದರು ಸಹ ಇನ್ನೂ ಸ್ಟಾರ್ ಸ್ಥಾನಮಾನ ಪಡೆದಿಲ್ಲ.
ಅಖಿಲ್ ಅಕ್ಕಿನೇನಿ ಸ್ಥಿತಿ ಇನ್ನೂ ಗಂಭೀರವಾಗಿದೆ. ಸಾಕಷ್ಟು ಸಿನಿಮಾ ಮಾಡಿದರೂ ಅಖಿಲ್ ಗೆ ಮನ್ನಣೆ ಸಿಕ್ಕಿರಲಿಲ್ಲ. ಇದುವರೆಗೆ ಒಂದೇ ಒಂದು ಸಿನಿಮಾ ಮಾತ್ರ ಹಿಟ್ ಆಗಿದೆ, ಅದೂ ಕೂಡ ಆವರೇಜ್ ಹಿಟ್ ಆಗಿದೆ. ದೊಡ್ಡ ಹಿಟ್ ಪಡೆಯಲು ಕಷ್ಟಪಡುತ್ತಿದ್ದಾರೆ ಅಖಿಲ್. ನಾಗಾರ್ಜುನ ಅವರು ಕೂಡ ಅಖಿಲ್ ಅವರಿಗಾಗಿ ದೊಡ್ಡ ನಿರ್ದೇಶಕರ ಜೊತೆ ಸಿನಿಮಾ ಮಾಡಿಸುವ ಯೋಜನೆ ಹಾಕಿಕೊಂಡುದ್ದಾರೆ. ಅಖಿಲ್ ರನ್ನು ಸ್ಟಾರ್ ಹೀರೋ ಮಾಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಮಗನ ವಿಷಯದಲ್ಲಿ ನಾಗಾರ್ಜುನ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ.
ಆದರೆ ಅಖಿಲ್ ಕೆರಿಯರ್ ಜೊತಗೆ ಈಗ ನಾಗಾರ್ಜುನ ಅವರಿಗೆಮತ್ತೊಂದು ತಲೆನೋವು ಬಂದಿದೆ. ಅಖಿಲ್ ಮಾಡಿರುವ ಈ ಕಾರ್ಯಕ್ಕೆ ತೀವ್ರ ಟೀಕೆಗಳು ಬರುತ್ತಿವೆ. ಇತ್ತೀಚೆಗಷ್ಟೇ ಅಖಿಲ್ ಪಬ್ ಒಂದಕ್ಕೆ ಕುಡಿದು ಬಂದಿದ್ದು, ಕುಡಿದ ಬಳಿಕ ವ್ಯಕ್ತಿಯೊಬ್ಬನೊಂದಿಗೆ ಜಗಳವಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಬಗ್ಗೆ ತೀವ್ರ ಟೀಕೆಗಳೂ ಬರುತ್ತಿವೆ. ಇಷ್ಟು ದೊಡ್ಡ ಮಟ್ಟದಲ್ಲಿ ಇಂತಹ ಕೆಲಸಗಳನ್ನು ಮಾಡಬಲ್ಲರು ಎಂದು ನೆಟ್ಟಿಗರು ತೀವ್ರವಾಗಿ ಟೀಕಿಸುತ್ತಿದ್ದಾರೆ.