ಕೊನೆಗೂ ಸಿಹಿ ಸುದ್ದಿ ಕೊಟ್ಟ ಧ್ರುವ ಸರ್ಜಾ ದಂಪತಿಗಳು: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡೆಲ್ವುಡ್ ಪ್ರಿನ್ಸ್.
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿಯಾಗಿರುವ ನಟ ಧ್ರುವ ಸರ್ಜಾ. ಸರ್ಜಾ ಕುಟುಂಬದ ಕುಡಿ ಆದರು ಸೋದರಮಾವ ಅರ್ಜುನ್ ಸರ್ಜಾ ಅವರ ಸಹಾಯ ಪಡೆಯದೆ ತಮ್ಮ ಪ್ರತಿಭೆ ಇಂದ ಸ್ಯಾಂಡಲ್ ವುಡ್ ನಲ್ಲಿ ನಟನೆಗೆ ಅವಕಾಶ ಪಡೆದು ಹೀರೋ ಆದ ಸೆಲ್ಫ್ ಮೇಡ್ ಸ್ಟಾರ್ ಧ್ರುವ. ಧ್ರುವ ನಟಿಸಿರುವುದು ನಾಲ್ಕೇ ಸಿನಿಮಾ ಆದರೂ ಕರ್ನಾಟಕದಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಗಳಿಸಿದ್ದಾರೆ. ತಂದೆ ತಾಯಿ ಕುಟುಂಬ ಅಂದ್ರೆ ಧ್ರುವಗೆ ಬಹಳ ಪ್ರೀತಿ. ಬಿಡುವಿನ ಸಮಯವನ್ನು ಹೆಚ್ಚಾಗಿ ಕುಟುಂಬದ ಜೊತೆಗೆ ಕಳೆಯುತ್ತಾರೆ.
ಧ್ರುವ ಸರ್ಜಾ ಅವರಿಗೆ ಬಹಳ ದೊಡ್ಡ ಮಾಸ್ ಫ್ಯಾನ್ ಫಾಲೋಯಿಂಗ್ ಇದೆ. ನಮಗೆಲ್ಲ ತಿಳಿದಿರುವ ಹಾಗೆ ಕಳೆದ ವರ್ಷಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಪಾತ್ರಗಳಲ್ಲಿ ನಟಿಸಿ, ನಂದ ಕಿಶೋರ್ ನಿರ್ದೇಶಿಸಿದ ಪೊಗರು ಸಿನಿಮಾ ತೆರೆಕಂಡಿತು. ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಯಲ್ಲು ತೆರೆಕಂಡ ಪೊಗರು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಭರ್ಜರಿಯಾಗಿ ಕಲೆಕ್ಷನ್ ಕೂಡ ಮಾಡಿತು. ಪೊಗರು ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡ ಬೆನ್ನಲ್ಲೇ ಮುಂದಿನ ಮಾರ್ಟಿನ್ ಹಾಗೂ ದುಬಾರಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಧ್ರುವ ಸರ್ಜಾ.
ಇದೀಗ ಧ್ರುವ ಸರ್ಜಾ ಅವರು ವೈಯಕ್ತಿಕ ಜೀವನದಲ್ಲಿ ಬಹಳ ಸಂತೋಷದ ವಿಷಯ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣ ಶಂಕರ್ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೇರಣ ಶಂಕರ್ ಅವರು ಗರ್ಭಿಣಿ ಆಗಿರುವ ವಿಚಾರವನ್ನು ಧ್ರುವ ಸರ್ಜಾ ಅವರು ವಿಡಿಯೋ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಪತ್ನಿಯ ಜೊತೆಗೆ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿರುವ ಧ್ರುವ ಸರ್ಜಾ ಅವರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಸಂತೋಷದ ಸುದ್ದಿ ಕೇಳಿ ಅಭಿಮಾನಿಗಳು ಬಹಳ ಸಂತೋಷಪಟ್ಟಿದ್ದಾರೆ. ಎಲ್ಲರೂ ಜ್ಯೂನಿಯರ್ ಧ್ರುವ ಬರಲಿ ಎಂದು ವಿಶ್ ಮಾಡುತ್ತಿದ್ದಾರೆ.