ಸದಾ ಕಷ್ಟದಲ್ಲಿ ಇರುವವರಿಗೆ ಸಹಾಯಕ್ಕೆ ನಿಲ್ಲುತ್ತಿದ್ದ ದರ್ಶನ್, ಕಷ್ಟ ಎಂದು ಬಂದ ಕಲಾವಿದನಿಗೆ ಏನೆಂದು ಹೇಳಿದ್ದಾರೆ ಗೊತ್ತೇ?? ಫ್ಯಾನ್ಸ್ ಕಣ್ಣೀರಿಟ್ಟಿದ್ದು ಯಾಕೆ ಗೊತ್ತೇ?

24

Get real time updates directly on you device, subscribe now.

ಡಿಬಾಸ್ ದರ್ಶನ್ ಈ ಹೆಸರು ಕೇಳಿದರೆ ಅಭಿಮಾನಿಗಳಲ್ಲಿ ವಿಶೇಷವಾದ ಕ್ರೇಜ್ ಶುರುವಾಗುತ್ತದೆ ಎಂದರೆ ತಪ್ಪಾಗುವುದಿಲ್ಲ. ದರ್ಶನ್ ಅವರು ಚಿತ್ರರಂಗದಲ್ಲಿ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ದರ್ಶನ್ ಅವರು ಸಹ ಬಹಳ ಕಷ್ಟಪಟ್ಟು ಬಂದವರು, ಸ್ಟಾರ್ ನಟನ ಮಗ ಆಗಿದ್ದರು ಸಹ, ದರ್ಶನ್ ಅವರಿಗೆ ಚಿತ್ರರಂಗಕ್ಕೆ ಬರುವ ಹಾದಿ ಸುಲಭವಾಗಿ ಇರಲಿಲ್ಲ, ಸಿಕ್ಕ ಒಂದೊದೆ ಅವಕಾಶಗಳನ್ನು ಉಪಯೋಗಿಸಿಕೊಂಡು ಇಂದು ಡಿಬಾಸ್ ಆಗಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ.

ತಮಗೆ ಕಷ್ಟ ಆದ ರೀತಿಯಲ್ಲಿ ಮತ್ತೊಬ್ಬರಿಗೆ ಕಷ್ಟ ಆಗಬಾರದು ಎಂದು ಭಾವಿಸುವ ದರ್ಶನ್ ಅವರು ಚಿತ್ರರಂಗದ ಹಿರಿಯ ಹಾವು ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾರೆ. ಅವರ ಸಿನಿಮಾಗಳನ್ನು ಪ್ರೊಮೋಟ್ ಮಾಡುತ್ತಾರೆ. ಇದೀಗ ದರ್ಶನ್ ಅವರು ಕನ್ನಡದ ಹಿರಿಯ ಕಲಾವಿದರಿಗೆ ಸಹಾಯ ಮಾಡಿದ್ದಾರೆ. ಆ ಕಲಾವಿದ ಕನ್ನಡದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ 500ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಬಿರಾದಾರ್ ಅವರು. ಬಿರಾದಾರ್ ಅವರು ಅನೇಕ ಕನ್ನಡ ಸಿನಿಮಾಗಳಲ್ಲಿ ನಾವೆಲ್ಲರೂ ನೋಡಿರುತ್ತೇವೆ, ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. 71 ವರ್ಷದ ಬಿರಾದಾರ್ ಅವರು ಈಗ 90ಬಿಡಿ ಮನೆಗ್ ನಡಿ ಹೆಸರಿನ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಇವರ ಸಿನಿಮಾಗೆ ಡಿಬಾಸ್ ಸಪೋರ್ಟ್ ಬೇಕು ಎಂದು ದರ್ಶನ್ ಅವರ ಬಳಿ ಹೋಗಿದ್ದು, ದರ್ಶನ್ ಅವರು ಬಹಳ ಸಂತೋಷದಿಂದ ಸಿನಿಮಾಗೆ ಸಪೋರ್ಟ್ ಮಾಡಿದ್ದಾರೆ. ಬಿರಾದಾರ್ ಅವರ ಬಗ್ಗೆ ಮಾತನಾಡಿರುವ ಡಿಬಾಸ್, ಕನ್ನಡದಲ್ಲಿ 500ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಕಲಾವಿದ, ಇವರಿಗೆ 71 ವರ್ಷ, ಆದರೆ ಅವರ ಡ್ಯಾನ್ಸ್, ಆಕ್ಟಿಂಗ್ ಎಲ್ಲ ನೋಡಿದ್ರೆ ಅಷ್ಟು ವಯಸ್ಸಾಗಿದೆ ಅಂತ ಅನ್ನಿಸೋದೆ ಇಲ್ಲ. ಬಿರಾದಾರ್ ಅವರು ನಾಯಕನಾಗಿ ನಟಿಸಿರುವ 90ಬಿಡಿ ಮನೆಗ್ ನಡಿ ಸಿನಿಮಾಗೆ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ. ಎಲ್ಲರೂ ಸಿನಿಮಾವನ್ನು ಥಿಯೇಟರ್ ನಲ್ಲಿ ತಪ್ಪದೇ ನೋಡಿ ಎಂದು ಹೇಳುವ ಮೂಲಕ, ಹಿರಿಯನಟನ ಸಿನಿಮಾಗೆ ಸಾಥ್ ನೀಡಿದ್ದಾರೆ ಡಿಬಾಸ್. ಡಿಬಾಸ್ ಅವರ ಈ ಗುಣ ನೋಡಿದ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಒಳ್ಳೆಯತನಕ್ಕೆ ಕಣ್ಣೀರು ಹಾಕಿ, ಸಂತೋಷ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.