ಬಿಗ್ ನ್ಯೂಸ್: ಕೊಹ್ಲಿ ಜೀವನ ಚರಿತ್ರೆಯ ಸಿನಿಮಾದಲ್ಲಿ ಅರ್ಜುನ್ ರೆಡ್ಡಿ ರೌಡಿ: ಮನಬಿಚ್ಚಿ ಮಾತನಾಡಿದ ವಿಜಯ್ ಹೇಳಿದ್ದೇನು ಗೊತ್ತೇ??
ಟಾಲಿವುಡ್ ನ ಸ್ಟಾರ್ ಹೀರೋ ವಿಜಯ್ ದೇವರಕೊಂಡ ನಟಿಸಿ ಟಾಲಿವುಡ್ ನ ಖ್ಯಾತ ನಿರ್ದೇಶಕ ಪೂರಿ ಜಗನಾಥ್ ಅವರು ನಿರ್ದೇಶನ ಮಾಡಿದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ, ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ನೆಗಟಿವ್ ಟಾಕ್ಸ್ ಹೆಚ್ಚಾಗಿ, ಲೈಗರ್ ಸಿನಿಮಾ ಸದ್ದು ಮಾಡುತ್ತಿಲ್ಲ. ಆದರೆ ವಿಜಯ್ ದೇವರಕೊಂಡ ಅವರಿಗೆ ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುವ ಹಾಗೆ ಮಾಡಿರುವುದು ಮಾತ್ರ ನಿಜ. ಬಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಎಲ್ಲರ ಫೇವರೆಟ್ ಆಗಿದ್ದಾರೆ.
ದುಬೈನಲ್ಲಿ ಏಷ್ಯಾಕಪ್ 2022 ಪಂದ್ಯಗಳು ನಡೆಯುತ್ತಿರುವ ವಿಷಯ ನಮಗೆಲ್ಲ ಗೊತ್ತಿದೆ. ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯವನ್ನು ನೋಡಲು ವಿಜಯ್ ದೇವರಕೊಂಡ ದುಬೈಗೆ ತೆರಳಿದ್ದರು, ಪಂದ್ಯ ವೀಕ್ಷಿಸಿ ಸಂತೋಷ ಪಟ್ಟಿರುವ ವಿಜಯ್, ಸ್ಪೋರ್ಟ್ಸ್ ವಾಹಿನಿಯ ಸಂದರ್ಶನದಲ್ಲಿ ಪಾಲ್ಗೊಂಡು, ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದು, ವಾಹಿನಿಯವರು, ಭಾರತದ ಯಾವ ಕ್ರಿಕೆಟಿಗನ ಬಯೋಪಿಕ್ ನಲ್ಲಿ ನಟಿಸಲು ಇಷ್ಟಪಡುತ್ತೀರಿ ಎಂದು ಪ್ರಶ್ನೆ ಕೇಳಿದ್ದು, ವಿಜಯ್ ಅವರು ವಿರಾಟ್ ಕೋಹ್ಲಿ ಅವರ ಹೆಸರು ಹೇಳಿದ್ದಾರೆ. ವಿಜಯ್ ದೇವರಕೊಂಡ ವಿರಾಟ್ ಕೋಹ್ಲಿ ಅವರ ದೊಡ್ಡ ಫ್ಯಾನ್ ಆಗಿದ್ದಾರೆ.
“ಧೋನಿ ಭಾಯ್ ಅವರ ಬಯೋಪಿಕ್ ಅನ್ನು ಸುಶಾಂತ್ ಸಿಂಗ್ ರಜಪೂತ್ ಈಗಾಗಲೇ ಮಾಡಿದ್ದಾರೆ. ಈಗ ನಾನು ವಿರಾಟ್ ಕೋಹ್ಲಿ ಅವರ ಬಯೋಪಿಕ್ ಮಾಡಬೇಕು ಎಂದುಕೊಂಡಿದ್ದೇನೆ..” ಎಂದು ಉತ್ತರ ನೀಡಿದ್ದಾರೆ ವಿಜಯ್ ದೇವರಕೊಂಡ. ಈ ಉತ್ತರದ ಬಳಿಕ ಇವರಿಬ್ಬರ ಅಭಿಮಾನಿ ಬಳಗದಲ್ಲೂ ಸಹ ವಿರಾಟ್ ಕೋಹ್ಲಿ ಅವರ ಬಯೋಪಿಕ್ ಬಗ್ಗೆ ಚರ್ಚೆ ಶುರುವಾಗಿದೆ. ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಬಹಳ ಜನಪ್ರಿಯತೆ ಗಳಿಸಿದ ವಿಜಯ್ ದೇವರಕೊಂಡ ಇದೀಗ ಲೈಗರ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.