ಮದುವೆಯಾಗಿ ಹಲವಾರು ವರ್ಷಗಳು ಒಟ್ಟಿಗೆ ಇದ್ದರೂ ಈ ವಯಸಿನಲ್ಲಿ ರಮ್ಯಾ ಕೃಷ್ಣ ಹಾಗೂ ಕೃಷ್ಣವಂಶಿ ದೂರವಿರಲು ಕಾರಣವೇನು ಗೊತ್ತೇ??
ನಟಿ ರಮ್ಯಕೃಷ್ಣ 80 ಮತ್ತು 90ರ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸ್ಟಾರ್ ನಟಿ. ಆಗಿನ ಕಾಲದ ಅತ್ಯಂತ ಸುಂದರವಾದ, ಹಾಗೂ ದೊಡ್ಡ ಫ್ಯಾನ್ ಬೇಸ್ ಇರುವ ಸಕ್ಸಸ್ ಫುಲ್ ನಟಿ ಇವರು. ಆಗಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ಹೀರೋಯಿನ್ ಆಗಿ ತೆರೆಹಂಚಿಕೊಂಡಿದ್ದ ನಟಿ ರಮ್ಯಾ ಕೃಷ್ಣ. ಬಾಹುಬಲಿ ಸಿನಿಮಾ ಇಂದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿ, ತಾಯಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಈಗಲೂ ಸಹ ಇವರಿಗೆ ಭಾರಿ ಬೇಡಿಕೆ ಇದೆ. ಯಾವುದೇ ಸ್ಟಾರ್ ಹೀರೋಯಿನ್ ಗಳಿಗೂ ಕಡಿಮೆ ಇಲ್ಲ ಎನ್ನುವ ಹಾಗೆ ಸಂಭಾವನೆ ಪಡೆಯುತ್ತಾರೆ..
ನಟಿ ರಮ್ಯಕೃಷ್ಣ ಅವರು ತೆಲುಗಿನ ಖ್ಯಾತ ನಿರ್ದೇಶಕ ಕೃಷ್ಣ ವಂಶಿ ಅವರನ್ನು ಪ್ರೀತಿಸಿ ಮದುವೆಯಾದರು. ಇವರಿಬ್ಬರು ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದರು, ಅದ್ಧೂರಿಯಾಗಿ ಈ ಜೋಡಿಯ ಮದುವೆ ಸಹ ನಡೆಯಿತು. ಕೃಷ್ಣ ವಂಶಿ ಅವರು ತೆಲುಗಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಡೈರೆಕ್ಟ್ ಮಾಡಿದ್ದಾರೆ, ಈಗಲೂ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಸಂಸಾರ ನಡೆಸಿದ ಈ ಜೋಡಿಯ ಬಗ್ಗೆ ಇತ್ತೀಚೆಗೆ ಕೆಲಸಮಯದಿಂದ ಇವರಿಬ್ಬರು ಬೇರೆ ಆಗಿದ್ದಾರೆ ಎನ್ನುವ ಗಾಸಿಪ್ ಒಂದು ಜೋರಾಗಿಯೇ ಸದ್ದು ಮಾಡಿತ್ತು. ಇದರ ಬಗ್ಗೆ ಇದೀಗ ಕೃಷ್ಣ ವಂಶಿ ಅವರು ಕ್ಲಾರಿಟಿ ನೀಡಿದ್ದಾರೆ..
ಕೃಷ್ಣವಂಶಿ ಅವರು ರಂಗಮಾರ್ತಾಂಡ ಎನ್ನುವ ಸಿನಿಮಾ ಒಂದನ್ನು ನಿರ್ದೇಶನ ಮಾಡುತ್ತಿದ್ದಾರೆ, ಈ ಸಿನಿಮಾದಲ್ಲಿ ಪ್ರಕಾಶ್ ರಾಜ್, ರಮ್ಯಕೃಷ್ಣ ಹಾಗೂ ಬ್ರಹ್ಮಾನಂದಮ್ ಅವರು ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಪ್ರೊಮೋಷನ್ ಸಮಯದಲ್ಲಿ ಮಾತನಾಡಿದ ಕೃಷ್ಣವಂಶಿ ಅವರು, ರಮ್ಯಾ ಚೆನ್ನೈನಲ್ಲಿದ್ದಾರೆ, ನಾನು ಹೈದರಾಬಾದ್ ನಲ್ಲಿದ್ದೇನೆ ಕೆಲ ಕಾಲದಿಂದ ನಾವು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ, ನಾವು ಬೇರೆ ಆಗಿದ್ದೇವೆ ಎಂದು ಕೆಲವು ಗಾಸಿಪ್ ಗಳು ಕೇಳಿ ಬಂದಿವೆ, ಆದರೆ ಅದು ನಿಜವಲ್ಲ, ಎಲ್ಲರಿಗೂ ಅಂತಹ ಗಾಸಿಪ್ ಗಳ ಮೇಲೆ ಕುತೂಹಲ ಹೆಚ್ಚು. ಮಗ ರಿತ್ವಿಕ್ ರಮ್ಯಾ ಅವರ ಜೊತೆ ಇದ್ದಾನೆ, ನನಗೆ ಬಿಡುವಾದಾಗ ಚೆನ್ನೈಗೆ ಹೋಗುತ್ತೇನೆ, ರಮ್ಯಾ ಅವರಿಗೆ ಫ್ರೀ ಆದಾಗ ಹೈದರಾಬಾದ್ ಗೆ ಬರುತ್ತಾರೆ..ಎಂದು ಹೇಳುವ ಮೂಲಕ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ ಸ್ಟಾರ್ ಡೈರೆಕ್ಟರ್ ಕೃಷ್ಣ ವಂಶಿ.