ನಲವತ್ತು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ಸಮಂತಾ ಇದ್ದಕ್ಕಿದ್ದ ಹಾಗೆ ವಾಪಸ್ಸು ಬಂದು ಹೇಳಿದ್ದೇನು ಗೊತ್ತೆ??
ನಟಿ ಸಮಂತಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚಿನ ಬೇಡಿಕೆ ಹೊಂದಿರುವ ನಟಯರಲ್ಲಿ ಒಬ್ಬರು. ಫ್ಯಾಮಿಲಿ ಮ್ಯಾನ್ 2 ಸಿನಿಮಾ ಮೂಲಕ ಬಾಲಿವುಡ್ ಗು ಕಾಲಿಟ್ಟ ಸಮಂತಾ ಅವರಿಗೆ ಅಲ್ಲಿ ಭಾರಿ ಬೇಡಿಕೆ, ಸಾಲು ಸಾಲು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ. ಚಿತ್ರರಂಗದಲ್ಲಿ ಮಾತ್ರವಲ್ಲದೆ, ಸಮಂತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಹ ಬಹಳ ಆಕ್ಟಿವ್. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರವನ್ನು ಶೇರ್ ಮಾಡಿಕೊಳ್ಳುತ್ತಿದ್ದರು.
ಆದರೆ ಇದೀಗ 41 ದಿನಗಳ ಕಾಲ ಸಮಂತಾ ಅವರು ಇನ್ಸ್ಟಾಗ್ರಾಮ್ ಇಂದ ದೂರ ಉಳಿದಿದ್ದ ಸಮಂತಾ, 41 ದಿನಗಳ ಹಿಂದೆ ಪೀನಟ್ ಮಸಾಲ ಬಟರ್ ಜಾಹೀರಾತಿನ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದರು. ಅದಾದ ಬಳಿಕ ಸಮಂತಾ ಅವರು ಇನ್ಯಾವುದೇ ಪೋಸ್ಟ್ ಶೇರ್ ಮಾಡಿರಲಿಲ್ಲ. ಇದೀಗ ಸಮಂತಾ ಅವರು, ತಮ್ಮ ಯಶೋದ ಸಿನಿಮಾದ ಹೊಸ ಪೋಸ್ಟರ್ ಶೇರ್ ಮಾಡಿ ಗುಡ್ ನ್ಯೂಸ್ ನೀಡಿದ್ದಾರೆ. ಸಮಂತಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಯಶೋದ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಆಗಿದೆ.
ಈ ಸಿನಿಮಾದ ಟೀಸರ್ ಸೆಪ್ಟೆಂಬರ್ 9ರಂದು ಬಿಡುಗಡೆ ಆಗುತ್ತಿದ್ದು, ಈ ವಿಚಾರವನ್ನು ಸಮಂತಾ ಶೇರ್ ಮಾಡಿಕೊಂಡಿದ್ದಾರೆ. ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗದೆ ಇದ್ದಾಗ, ಕಾಫಿ ವಿತ್ ಕರಣ್ ಸಮಂತಾ ಅವರ ಸಂಚಿಕೆ ಸಹ ಪ್ರಸಾರವಾಗಿತ್ತು, ಆದರೆ ಸಮಂತಾ ಅವರು ಅದರ ಬಗ್ಗೆ ಸಹ ಯಾವುದೇ ಪೋಸ್ಟ್ ಶೇರ್ ಮಾಡಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಮಂತಾ, ಒಂದು ಪೋಸ್ಟ್ ಗೆ 30 ರಿಂದ 40 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ಸಿನಿಮಾ ಬಗ್ಗೆ ಪೋಸ್ಟ್ ಮಾಡಿದರು ಸಹ, ಹಣ ಪಡೆಯುತ್ತಾರೆ, ಸಮಂತಾ ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಸಂಸ್ಥೆಯೊಂದು ನಡೆಸುತ್ತಿದ್ದು, ಅದನ್ನು ಹ್ಯಾಂಡಲ್ ಮಾಡಲು ಮೂವರು ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದಾರಂತೆ ಸ್ಯಾಮ್.