ದರ್ಶನ್ ದಾಖಲೆ ಕುಟ್ಟಿ ಪುಡಿ ಪುಡಿ ಮಾಡಿದ ಸುದೀಪ್ : ಇದನ್ನು ಕಂಡ ದರ್ಶನ್ ಫ್ಯಾನ್ಸ್ ಇಷ್ಟೇನಾ ನೋಡಿಯೇ ಬಿಡೋಣ ಅಂದಿದ್ದು ಯಾಕೆ ಗೊತ್ತೆ??

24

Get real time updates directly on you device, subscribe now.

ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹೆಸರಿನಲ್ಲಿ ಹ್ಯಾಶ್ ಟ್ಯಾಗ್ ಮಾಡಿ, ಅವುಗಳನ್ನು ರೀಟ್ವೀಟ್ ಮಾಡಿ, ಟ್ರೆಂಡ್ ಆಗುವ ಮಾಡುವುದು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಅದರಲ್ಲೂ ನಾಯಕರ ಹುಟ್ಟುಹಬ್ಬ ಬಂದಾಗ, ಕಾಮನ್ ಡಿಪಿ ಬಿಡುಗಡೆ ಮಾಡಿ ಸಂಭ್ರಮ ಪಡುವುದು ಇಂತಹ ಹಲವು ವಿಚಾರಗಳು ಅಭಿಮಾನಿಗಳಿಗೆ ಸಂತೋಷ ತರುತ್ತದೆ. ಅದರಲ್ಲೂ ಯಾವ ನಟನ ಹೆಸರಿನ ಹ್ಯಾಶ್ ಟ್ಯಾಗ್ ಅತಿ ಹೆಚ್ಚು ರೀಟ್ವೀಟ್ ಆಗಿದೆ ಎನ್ನುವುದು ಸಹ ಇಲ್ಲಿ ಅಭಿಮಾನಿಗಳಿಗೆ ಮುಖ್ಯ ಆಗುತ್ತದೆ.

ಕನ್ನಡದ ನಾಯಕರಲ್ಲಿ ದರ್ಶನ್ ಅವರ ಅಭಿಮಾನಿಗಳ ಹೆಸರಿನಲ್ಲಿ ಈ ದಾಖಲೆ ಇತ್ತು, ಆದರೆ ಈಗ ಸುದೀಪ್ ಅವರ ಅಭಿಮಾನಿಗಳು ದರ್ಶನ್ ಅಭಿಮಾನಿಗಳ ದಾಖಲೆಯನ್ನು ಮುರಿದಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬ “ಡಿಬಾಸ್ ಬರ್ತ್ ಡೇ ಕಾಮನ್ ಡಿಪಿ” ಹ್ಯಾಶ್ ಟ್ಯಾಗ್ ಅನ್ನು 24 ಗಂಟೆಯ ಒಳಗೆ 42 ಲಕ್ಷ ಜನರು ಬಳಸಿದ್ದರು, ಇದೀಗ ಸುದೀಪ್ ಅವರ ಹುಟ್ಟುಹಬ್ಬಕ್ಕೆ, “ಕಿಂಗ್ ಕಿಚ್ಚ ಬರ್ತ್ ಡೇ ಕಾಮನ್ ಡಿಪಿ” ಹ್ಯಾಶ್ ಟ್ಯಾಗ್ ಅನ್ನು 24 ಗಂಟೆಯ 44ಲಕ್ಷ ಜನರು ಬಳಸಿ, ರೀಟ್ವೀಟ್ ಮಾಡಿ ಟ್ರೆಂಡ್ ಮಾಡಿದ್ದು, ದಾಖಲೆ ಮುರಿದಿರುವುದಕ್ಕಾಗಿ ಸುದೀಪ್ ಅವರ ಅಭಿಮಾನಿಗಳು ಸಂತೋಷದಿಂದ ಕಾಲರ್ ಮೇಲಕ್ಕೆ ಎತ್ತಿದ್ದಾರೆ.

ಇನ್ನೊಂದೆಡೆ ದರ್ಶನ್ ಅವರ ಅಭಿಮಾನಿಗಳು, ನೀವು ದಾಖಲೆ ಮುರಿದಿರುವುದು ಕೇವಲ 2 ಲಕ್ಷಗಳ ಅಂತರದಲ್ಲಿ, ಅದನ್ನು ಮುರಿದು ನಾವು ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ. ಇತ್ತ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಳೆದ ವರ್ಷ ಸುದೀಪ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ, ಈ ವರ್ಷ ಕೂಡ ಅವರು ಇಲ್ಲದಿರುವ ಕಿಚ್ಚ ಸುದೀಪ್ ಅವರು ಬರ್ತ್ ಡೇ ಅನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವುದು ಖಚಿತ ಇಲ್ಲ ಎನ್ನಲಾಗಿದೆ. ಸುದೀಪ್ ಅವರ ಬರ್ತ್ ಡೇ ಸಂಭ್ರಮದಲ್ಲಿ ವಿಕ್ರಾಂತ್ ರೋಣ ಸಿನಿಮಾ ಓಟಿಟಿಗೆ ಬರುತ್ತಿದೆ. ಹಾಗೆ ಸುದೀಪ್ ಅವರ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್ ಆಗುವ ಹಾಗೆ ಕಾಣುತ್ತಿದೆ.

Get real time updates directly on you device, subscribe now.