ದೇವಲೋಕದ ಕನ್ಯೆಯಂತೆ ಮಿಂಚುತ್ತಿರುವ ನಟಿ ಶ್ರೀ ಲೀಲಾ: ವಿವಿಧ ಫೋಟೋಗಳ ಮೂಲಕ ಹಲ್ ಚಲ್ ಸೃಷ್ಟಿ: ಹೇಗಿವೆ ಗೊತ್ತಾ ಫೋಟೋಸ್??
ಟೀನೇಜ್ ಹುಡುಗಿಯ ಹಾಗೆ ಕಾಣುವ ನಟಿ ಶ್ರೀಲೀಲಾ, ಒಂದೇ ಒಂದು ಸಿನಿಮಾದಿಂದ ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದರು. ವಿದೇಶದಲ್ಲಿ ಹುಟ್ಟಿ ಕನ್ನಡ ಚಿತ್ರರಂಗದಿಂದ ನಟನಾ ವೃತ್ತಿ ಆರಂಭಿಸಿದ ಶ್ರೀಲೀಲಾ, ನಿರ್ದೇಶಕ ರಾಘವೇಂದ್ರ ರಾವ್ ಪುಣ್ಯಮಾತೆ ಇಂದ ತೆಲುಗು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಸಿನಿಮಾದ ಬಗ್ಗೆ ಹೇಳುವುದಾದರೆ, ಮೊದಲ ತೆಲುಗು ಸಿನಿಮಾ ಫ್ಲಾಪ್ ಆಗಿದ್ದರೂ ತೆಲುಗು ಪ್ರೇಕ್ಷಕರು ಶ್ರೀಲೀಲಾಗೆ ಫಿದಾ ಆಗಿದ್ದರು. ಈಗ ಇವರ ಕೈತುಂಬ ಸಿನಿಮಾಗಳಿವೆ.
ಪೆಳ್ಳಿಸಂದಡಿ ಸಿನಿಮಾದ ಮೂಲಕ ತೆಲುಗು ತೆರೆಗೆ ಪರಿಚಯವಾದ ಶ್ರೀಲೀಲಾ, ಮಾಸ್ ಮಹಾರಾಜ ರವಿತೇಜ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇದಷ್ಟೇ ಅಲ್ಲದೆ, ನಂದಮೂರಿ ಬಾಲಕೃಷ್ಣ ಅವರ ಮಗಳಾಗಿ ಅನಿಲ್ ರವಿಪುಡಿ ನಿರ್ದೇಶನದ ಸಿನಿಮಾದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಇನ್ನು ಶ್ರೀಲೀಲಾ ಅವರ ಕನ್ನಡ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಕನ್ನಡದಲ್ಲಿ ಕಿಸ್ ಸಿನಿಮಾ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾದ ಶ್ರೀಲೀಲಾ, ಕರ್ನಾಟಕದ ಕ್ರಶ್ ಎಂದೇ ಖ್ಯಾತಿಯಾಗಿದ್ದವರು.
ಬಳಿಕ ಶ್ರೀಮುರಳಿ ಅವರೊಡಬೆ ಭರಾಟೆ ಸಿನಿಮಾದಲ್ಲಿ ನಟಿಸಿದರು, ಇತ್ತೀಚೆಗೆ ಶ್ರೀಲೀಲಾ ಅವರು ಧನವೀರ್ ಅವರೊಡನೆ ಬೈಟು ಲವ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಶ್ರೀಲೀಲಾ ಅವರು ಇತ್ತೀಚೆಗಷ್ಟೇ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಿಳಿ ಬಣ್ಣದ ಡ್ರೆಸ್‌ನಲ್ಲಿ ದೇವತೆಯಂತೆ ಮಿಂಚುತ್ತಿದ್ದಾರೆ ಶ್ರೀಲೀಲಾ. ಇವರ ಸೌಂದರ್ಯ ಅದ್ಭುತವಾಗಿದ್ದು, ಹುಡುಗರು ಇವರ ಫೋಟೋಗಳನ್ನು ನೋಡಿ ಫಿದಾ ಆಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ನೀವು ಸಹ ಶ್ರೀಲೀಲಾ ಅವರ ಸುಂದರವಾದ ಹೊಸ ಫೋಟೋ ಶೂಟ್ ನ ಫೋಟೋಗಳನ್ನು ನೋಡಿ.