ನೋಡಲು ಸಾಮಾನ್ಯವಾಗಿರುವ ಬಟ್ಟೆ ಧರಿಸಿ ಪ್ರಚಾರಕ್ಕೆ ಬಂದ ಆಲಿಯಾ : ಆದರೆ ಈ ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು. ಎಷ್ಟು ಅಂತೇ ಗೊತ್ತೇ?

64

Get real time updates directly on you device, subscribe now.

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅದೇ ರೀತಿ, ನಟನೆಯಿಂದಲು ಎಲ್ಲರ ಗಮನ ಸೆಳೆಯುವ ನಟಿ ಆಲಿಯಾ ಭಟ್. ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಆಲಿಯಾ ಭಟ್, ಈಗ ತಾಯಿ ಆಗುತ್ತಿದ್ದಾರೆ. ಈ ವರ್ಷ ಆಲಿಯಾ ಭಟ್ ನಟಿಸಿದ ಗಂಗೂಬಾಯಿ ಕಾಟಿಯಾವಾಡಿ ಸಿನಿಮಾ ದೊಡ್ಡ ಮಟ್ಟದಲ್ಲಿ ಆಲಿಯಾ ಭಟ್ ಅವರಿಗೆ ಹೆಸರು ತಂದುಕೊಟ್ಟಿತು. ಅದೇ ರೀತಿ, ಆರ್.ಆರ್.ಆರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ಆಲಿಯಾ ಭಟ್.

ಅಷ್ಟೇ ಅಲ್ಲದೆ ಆಲಿಯಾ ಭಟ್ ಅವರು ಡಾರ್ಲಿಂಗ್ಸ್ ಸಿನಿಮಾವನ್ನು ನಿರ್ಮಾಣ ಮಾಡಿ, ಆ ಸಿನಿಮಾದಲ್ಲಿ ನಟಿಸಿದ್ದಾರೆ. ಇದಕ್ಕಾಗಿ ಈ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಆಲಿಯಾ ಭಟ್ ಅವರು ಬ್ರಹ್ಮಾಸ್ತ್ರ ಸಿನಿಮಾದ ಪ್ರೊಮೋಷನ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 9ರಂದು ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ಆಗುತ್ತಿದ್ದು, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರಿಬ್ಬರು ಜೊತೆಯಾಗಿ ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಆಲಿಯಾ ಭಟ್ ಅವರು ಪಿಂಕ್ ಕಲರ್ ಡ್ರೆಸ್ ಒಂದನ್ನು ಧರಿಸಿ ಬಂದಿದ್ದರು.

ಆ ಕ್ಯೂಟ್ ಆದ ಡ್ರೆಸ್ ನಲ್ಲಿ ಆಲಿಯಾ ಭಟ್ ಅವರ ಬೇಬಿ ಬಂಪ್ ಹೈಲೈಟ್ ಆಗಿತ್ತು. ನೋಡಲು ಸಾಧಾರಣವಾಗಿ ಕಾಣುವ ಈ ಡ್ರೆಸ್ ನ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಆಲಿಯಾ ಭಟ್ ಅವರು ಪ್ರಚಾರಕ್ಕಾಗಿ ಧರಿಸಿದ್ದ ಪಿಂಕ್ ಡ್ರೆಸ್ ನ ಬೆಲೆ $4,100 ಡಾಲರ್ ಗಳಾಗಿದೆ. ಇದನ್ನು ರೂಪಾಯಿಯಲ್ಲಿ ಹೇಳುವುದಾದರೆ, ₹3,87,833 ರೂಪಾಯಿ ಆಗಿದೆ. ಇಷ್ಟು ಸಿಂಪಲ್ ಆಗಿ ಕಾಣುವ ಡ್ರೆಸ್ ಬೆಲೆ ಇಷ್ಟೊಂದ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಪ್ರೊಮೋಷನ್ ಗಿಂತ ಹೆಚ್ಚಾಗಿ, ಆಲಿಯಾ ಅವರ ಡ್ರೆಸ್ ಹೈಲೈಟ್ ಆಗಿತ್ತು ಎಂದರೆ ತಪ್ಪಾಗುವುದಿಲ್ಲ.

Get real time updates directly on you device, subscribe now.