ಷಾಕಿಂಗ್ ವಿಚಾರ ಬಿಚ್ಚಿಟ್ಟ ಸೂರ್ಯವಂಶ ನಾಯಕಿ; ಆ ಸ್ಟಾರ್ ಹೀರೋ ರಾತ್ರಿ ಗೆಸ್ಟ್ ಹೌಸ್ ಗೆ ಕರೆದ ಎಂದು ಹೇಳಿಕೆ; ಏನಾಗಿದೆ ಗೊತ್ತೇ??

30

Get real time updates directly on you device, subscribe now.

ಸಿನಿಮಾ ಕ್ಷೇತ್ರ ಅನೇಕ ಘಟನೆಗಳಿಗೆ ಕೇರಾಫ್ ಅಡ್ರೆಸ್ ಆಗಿದೆ. ಇದರ ಅರ್ಥ, ನಾಯಕಿಯರಿಗೆ ದೊಡ್ಡ ಸಮಸ್ಯೆ ಸೃಷ್ಟಿಸುವ ವೇದಿಕೆ ಆಗಿದೆ ಚಿತ್ರರಂಗ. ಇಲ್ಲಿನ ಅನೇಕ ಸ್ಟಾರ್ ಹೀರೋಯಿನ್ ಗಳು ಈ ಹಿಂದೆ ಕಾಸ್ಟಿಂಗ್ ಕೌಚ್ ನಂತಹ ಘಟನೆಗಳನ್ನು ಎದುರಿಸಿದ್ದಾರೆ. ಕೆಲವರು ಹೊಡೆದಾಡಿಕೊಂಡು ನಿಂತರೆ, ಅದಕ್ಕೆ ಬಲಿಯಾದವರು ಇನ್ನು ಕೆಲವರು. ಈ ಮಧ್ಯೆ, ಅನೇಕ ಜನರು ತಮ್ಮ ಜೀವನದಲ್ಲಿ ನಡೆದ ಇಂತಹ ಘಟನೆಗಳನ್ನು ನಿರ್ಭಯವಾಗಿ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ನಾಗಾರ್ಜುನ ಅವರ ಸಿನಿಮಾ ನಾಯಕಿ ಕೂಡ ಈ ಪಟ್ಟಿಗೆ ಸೇರಿಕೊಂಡಿದ್ದಾರೆ, ಆ ನಟಿ ಮತ್ಯಾರು ಅಲ್ಲ ಈಶಾ ಕೊಪ್ಪಿಕರ್ ಅವರು.

ವೆಂಕಟೇಶ್ ಅಭಿನಯದ ಪ್ರೇಮತೋ ರಾ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಈ ಮುದ್ದಾದ ಹುಡುಗಿ ನಾಗಾರ್ಜುನ ಅವರ ಚಂದ್ರಲೇಖಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.
2009ರಲ್ಲಿ ಮದುವೆಯಾದ ಇಷಾ ಈಗ ಚಿತ್ರರಂಗದಿಂದ ದೂರ ಉಳದಿದ್ದಾರೆ. ಈಗ ಮತ್ತೆ ಎರಡನೇ ಇನ್ನಿಂಗ್ಸ್‌ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ವಿವರಿಸಿದ್ದಾರೆ. ಹೀರೋಯಿನ್ ಆಗುವ ಮುನ್ನ ಮಾಡೆಲ್ ಆಗಿ ಕೆಲಸ ಮಾಡಿದ್ದೆ ಎಂದ ಹೇಳಿದ್ದು, ನಂತರ ನಾಯಕಿಯಾಗಿ ಅವಕಾಶಗಳು ಸಿಕ್ಕಿದ್ದವು.

“ನನ್ನ ವೃತ್ತಿಜೀವನದ ಆರಂಭದಲ್ಲಿ ನಿರ್ಮಾಪಕರೊಬ್ಬರು ನನ್ನನ್ನು ಕರೆದು ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಆದರೆ ಮೊದಲು ಅವರು ತಮ್ಮ ನಾಯಕನನ್ನು ಭೇಟಿಯಾಗಬೇಕೆಂದು ಹೇಳಿದರು. ಸರಿ ಎಂದು ನಾನು ಆ ನಾಯಕನನ್ನು ಭೇಟಿಯಾಗಲು ಒಪ್ಪಿದೆ. ರಾತ್ರಿ ಗೆಸ್ಟ್ ಹೌಸ್ ಗೆ ನೀವೊಬ್ಬರೇ ಬರಬೇಕು ಅಲ್ಲೇ ಮಾತನಾಡುತ್ತೇವೆ ಎಂದರು. ಅವರು ಒಬ್ಬಳೇ ಬರಬೇಕು ಎಂದು ಹೇಳಿದಾಗ ನನಗೆ ವಿಷಯ ಅರ್ಥವಾಯಿತು, ಆಗ ತಕ್ಷಣ ಫೋನ್ ಕಟ್ ಮಾಡಿದೆ. ನಾನು ನಿರ್ಮಾಪಕರಿಗೆ ಕರೆ ಮಾಡಿ ನನ್ನಿಂದ ಆಗಲ್ಲ ಎಂದು ಹೇಳಿ ಓಡಿಹೋದೆ..” ಎಂದು ಇಶಾ ಅಂದಿನ ಘಟನೆಯನ್ನು ವಿವರಿಸಿದ್ದಾರೆ. ಹೀಗೆ ಇಂತಹ ಸಮಸ್ಯೆ ಎಲ್ಲಾ ನಾಯಕಿಯರು ಅನುಭವಿಸಿದ್ದಾರೆ.

Get real time updates directly on you device, subscribe now.