ಅದು ಇಲ್ಲದೆ ಇದ್ದರೇ ನಟಿಯಾಗಿ ಬೆಳೆಯುವುದು ಸುಲಭವಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳಿದ ಪೂಜಾ ಹೆಗ್ಡೆ.
ತೆಲುಗು, ತಮಿಳು, ಮಲಯಾಳಂ, ಕನ್ನಡ ಹೀಗೆ ಯಾವುದೇ ಇಂಡಸ್ಟ್ರಿಯಲ್ಲಾದರೂ ಒಳ್ಳೆಯ ನಾಯಕಿಯಾಗಿ ಗುರುತಿಸಿಕೊಳ್ಳಬೇಕಾದರೆ, ಒಂದಷ್ಟು ಕಾಲ ನಾಯಕಿಯಾಗಿ ಉತ್ತಮ ಸ್ಥಾನದಲ್ಲಿ ಉಳಿಯಬೇಕಾದರೆ, ಅದೊಂದು ಕ್ವಾಲಿಟಿ ಇರಲೇಬೇಕು ಎನ್ನುತ್ತಾರೆ ಬುಟ್ಟಬೊಮ್ಮ ನಟಿ ಪೂಜಾ ಹೆಗ್ಡೆ. ಸಿನಿಮಾದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಮಂದಿ ಬರುತ್ತಾರೆ. ಅವಕಾಶ ಬಂದರೆ ಮಾತ್ರ ಹೀರೋಯಿನ್ ಆಗುತ್ತಾರೋ ಇಲ್ಲವೋ, ಆದರೆ ಇಲ್ಲಿ ಹೀರೋಯಿನ್ ಆಗೋದು ಮಾತ್ರ ಮುಖ್ಯವಲ್ಲ, ಮೇಲಕ್ಕೆ ಹೋಗುವುದು ಮುಖ್ಯ. ಇಲ್ಲಿ ಒಂದಷ್ಟು ದಿನ ನಮ್ಮ ಹೆಸರು ಕೇಳಿ ಬರಬೇಕು ಅಂತಾರೆ ಈ ಕನ್ನಡದ ಹುಡುಗಿ ಪೂಜಾ. ಪೂಜಾ ಹೆಗ್ಡೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಬಹಳ ದಿನಗಳೇ ಕಳೆದಿವೆ.
ಆದರೆ ಇದುವರೆಗೂ ಅವರು ಯಾರ ಮೇಲೂ ಕೆಟ್ಟ ಕಾಮೆಂಟ್ ಮಾಡಿಲ್ಲ. ಆಕೆ ತನ್ನ ಕೆಲಸವನ್ನು ತಾನೇ ಮಾಡುತ್ತಿದ್ದರು. ಯಾವುದನ್ನು ಲೆಕ್ಕಿಸದೆ ಚಿತ್ರ ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ ಪೂಜಾ ಹೆಗ್ಡೆ. ಆದರೆ, ಇದುವರೆಗೂ ಸತತವಾಗಿ ಹಿಟ್ ಆಗಿದ್ದ ಇವರ ಸಿನಿಮಾಗಳು ಸಿನಿಮಾಗಳು ಈಗ ಮತ್ತೆ ಸೋಲು ಕಾಣುತ್ತಿವೆ. ಕೆರಿಯರ್ ಆರಂಭದಲ್ಲಿ ಎಂತಹ ಕಷ್ಟಗಳನ್ನು ಎದುರಿಸಿದ್ದರು ಪೂಜಾ, ಈಗಲು ಇಂತಹ ಸಂಕಷ್ಟದ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಆದರೆ, ವರ್ಷಾನುಗಟ್ಟಲೆ ಮೌನವಾಗಿದ್ದ ಪೂಜಾ ದಿಢೀರ್ ಬಾಯಿ ತೆರೆದು ಹಲವು ಕಮೆಂಟ್ ಮಾಡಿದ್ದಾರೆ. ಇವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಪೂಜಾ ಕೆರಿಯರ್ ಮತ್ತೆ ನೆಗೆಟಿವ್ ಸ್ಟೇಜ್ ಗೆ ಹೋಗುತ್ತಿರುವಾಗ, ಆಕೆ ಇಂಡಸ್ಟ್ರಿಯ ಬಗ್ಗೆ ಕಮೆಂಟ್ ಮಾಡುವುದರಲ್ಲಿ ಅರ್ಥವೇನು ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಯಶಸ್ವಿಯಾದಾಗ ಈ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಕೇಳುವವರೂ ಇದ್ದಾರೆ. ಸದ್ಯ ಪೂಜಾ ಬಾಲಿವುಡ್ ನಲ್ಲಿ 3 ಸಿನಿಮಾ, ಟಾಲಿವುಡ್ ನಲ್ಲಿ ಒಂದು ಸಿನಿಮಾ ಹಾಗೂ ಕಾಲಿವುಡ್ ನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ.. ಇತ್ತೀಚೆಗೆ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೂಜಾ ಹೆಗ್ಡೆ, ಯಶಸ್ಸಿನ ಜೊತೆಗೆ ದುಡಿಯುವ ಮನೋಭಾವನೆಯೂ ಇರಬೇಕು. ಇದಕ್ಕೆಲ್ಲ ತಾಳ್ಮೆ ಬೇಕು. ಇಲ್ಲದಿದ್ದರೆ ಚಿತ್ರರಂಗದಲ್ಲಿ ಹೆಚ್ಚು ಕಾಲ ಯಶಸ್ವಿಯಾಗುವುದು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.