ತೆಲುಗಿನಲ್ಲಿ ನಟಿಯಾಗಿ ಮಿಂಚುತ್ತಿರುವ ನಟಿ ಪೂಜಾ ಹೆಗ್ಡೆ, ತನ್ನ ಹುಟ್ಟಿ ಬೆಳೆದ ಕರುನಾಡಿನ ಬಗ್ಗೆ ಏನು ಹೇಳಿದ್ದಾರೆ ಗೊತ್ತೇ??
ಫಿಲ್ಮ್ ಫೇರ್ ಅವಾರ್ಡ್ ಇದು ಭಾರತ ಚಿತ್ರರಂಗದಲ್ಲಿ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಕೊಡುವ ಗೌರವಾನ್ವಿತ ಅವಾರ್ಡ್ ಗಳಲ್ಲಿ ಒಂದು. 67 ವರ್ಷಗಳಿಂದ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮ ನಡೆಯುತ್ತಲೇ ಬರುತ್ತಿದೆ. ಪ್ರತಿ ವರ್ಷ ಚಿತ್ರರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದರಿಗೆ ಅವಾರ್ಡ್ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಈ ವರ್ಷ ಕನ್ನಡಿಗರಿಗೆ ಫಿಲ್ಮ್ ಫೇರ್ ಅವಾರ್ಡ್ಸ್ ಬಹಳ ಸ್ಪೆಶಲ್ ಆಗಿತ್ತು. ಏಕೆಂದರೆ 2022ರ ಮಾರ್ಚ್ ತಿಂಗಳಿನಲ್ಲಿ ನಡೆದ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮ ನಡೆದದ್ದು ಬೆಂಗಳೂರಿನಲ್ಲಿ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಫಿಲ್ಮ್ ಫೇರ್ ಕಾರ್ಯಕ್ರಮ ನಡೆಯಿತು.
ಇಡೀ ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು ಬೆಂಗಳೂರಿಗೆ ಆಗಮಿಸಿ ಕಾರ್ಯಕ್ರಮ ಅಟೆಂಡ್ ಮಾಡಿದರು. ದಕ್ಷಿಣ ಭಾರತ ಮತ್ತು ಬಾಲಿವುಡ್ ಎರಡು ಕಡೆ ಬಹಳ ಹೆಸರು ಮಾಡಿರುವವರಲ್ಲಿ ಪೂಜಾ ಹೆಗ್ಡೆ ಸಹ ಒಬ್ಬರು. ಹಿಂದಿ ಮತ್ತು ತೆಲುಗಿನಲ್ಲಿ ಸ್ಟಾರ್ ಕಲಾವಿದರ ಜೊತೆಗೆ ತೆರೆಹಂಚಿಕೊಂಡಿದ್ದಾರೆ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಪೂಜಾ ಹೆಗ್ಡೆ ಸಹ ಒಬ್ಬರು. ಪೂಜಾ ಹೆಗ್ಡೆ ಇಷ್ಟೆಲ್ಲಾ ಹೆಸರು ಮಾಡಿದ್ದಾರೆ, ಇವರು ಮೂಲತಃ ಮಂಗಳೂರಿನವರು ಎನ್ನುವುದು ಗೊತ್ತಿರುವ ವಿಚಾರ. ಪೂಜಾ ಅವರು ಫಿಲ್ಮ್ ಫೇರ್ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಾಗ ಕರ್ನಾಟಕದ ಬಗ್ಗೆ ಹೇಳಿದ್ದೇನು ಗೊತ್ತಾ?
ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದ ಪೂಜಾ ಹೆಗ್ಡೆ ಮಾಧ್ಯಮದ ಎದುರು ಮಾತನಾಡಿ, ನಾನು ಕರ್ನಾಟಕದವಳು ಎಂದು ಹೇಳೋಕೆ ಹೆಮ್ಮೆ ಇದೆ, ಫಿಲ್ಮ್ ಫೇರ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಾ ಇರೋದು ಬಹಳ ಸಂತೋಷ ಇದೆ ಎಂದು ಹೇಳಿದ್ದಾರೆ. ಪೂಜಾ ಹೆಗ್ಡೆ ಅವರು ಬೇರೆ ಭಾಷೆಗಳಲ್ಲಿ ಹೆಸರು ಮಾಡಿದ್ದರು ಕೂಡ, ಇಂದಿಗೂ ತಮ್ಮ ಹುಟ್ಟೂರನ್ನು ಮರೆತಿಲ್ಲ ಎನ್ನುವುದು ಸಂತೋಷದ ವಿಚಾರ. ಪ್ರಸ್ತುತ ಪೂಜಾ ಹೆಗ್ಡೆ ತೆಲುಗು ಮತ್ತು ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ.