ಧೈರ್ಯವಾಗಿ ಎಲ್ಲವನ್ನು ಎದುರಿಸಿದ್ದ ಪವಿತ್ರ ರವರಿಗೆ ಕೊನೆ ಕ್ಷಣದಲ್ಲಿ ಶಾಕ್: ಹೇಗಿದ್ದ ಪರಿಸ್ಥಿತಿ, ಏನಾಗಿದೆ ಗೊತ್ತೇ?
ನಟಿ ಪವಿತ್ರಾ ಲೋಕೇಶ್ ಅವರ ಬಗೆಗಿನ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಅವರ ಜೊತೆ ಮದುವೆ ಆಗುತ್ತಾರೆ ಎನ್ನುವ ವಿಚಾರ, ಅವರಿಬ್ಬರ ಬಗೆಗಿನ ವದಂತಿಗಳು ಕೆಲವು ದಿನಗಳಿಂದ ಮಾಧ್ಯಮದಲ್ಲಿ ಸದ್ದು ಮಾಡುತ್ತಲೇ ಇರುವ ವಿಚಾರ ನಮ್ಮೆಲ್ಲರಿಗೂ ಗೊತ್ತೇ ಇದೆ. ಅದೇ ಕಾರಣದಿಂದ ಈಗ ಪವಿತ್ರಾ ಲೋಕೇಶ್ ಅವರ ಕೆರಿಯರ್ ವಿಚಾರದಲ್ಲಿ ದೊಡ್ಡ ಪೆಟ್ಟು ಸಿಕ್ಕಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಷ್ಟಕ್ಕೂ ಆಗಿರುವುದೇನು ಎಂದು ತಿಳಿಸುತ್ತೇವೆ ನೋಡಿ.
ಪವಿತ್ರಾ ಲೋಕೇಶ್ ಅವರು ನರೇಶ್ ಅವರೊಡನೆ ಆತ್ಮೀಯರಾಗಿದ್ದಾರೆ, ಇಬ್ಬರ ನಡುವೆ ಅಫೇರ್ ಇದೆ, ಕೆಲ ವರ್ಷಗಳಿಂದ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದಾರೆ, ಮದುವೆ ಆಗುತ್ತಾರೆ ಎನ್ನುವ ಗಾಸಿಪ್ ಕೆಲ ಸಮಯದಿಂದ ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ಎರಡು ಕಡೆ ಕೇಳಿ ಬರುತ್ತಲಿವೆ. ಇಬ್ಬರು ಕೂಡ ಮೈಸೂರಿನ ಹೋಟೆಲ್ ರೂಮ್ ಒಂದರಲ್ಲಿ ಜೊತೆಯಾಗಿ ಸಿಕ್ಕಿಹಾಕಿಕೊಂಡಿದ್ದರು. ಇಷ್ಟೆಲ್ಲಾ ಆದ ಬಳಿಕ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ರಾಮಾರಾವ್ ಆನ್ ಡ್ಯೂಟಿ ಎನ್ನುವ ತೆಲುಗು ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾದಲ್ಲಿ ಅಕ್ಕ ತಮ್ಮನ ಹಾಗೆ ತೋರಿಸಲಾಗಿತ್ತು. ಅದರಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.

ಇದೀಗ ಪವಿತ್ರಾ ಲೋಕೇಶ್ ಅವರು ತೆಲುಗಿನ ಸ್ಟಾರ್ ನಟನ ಸಿನಿಮಾದಲ್ಲಿ, ನಾಯಕನ ತಾಯಿ ಪಾತ್ರದಲ್ಲಿ ನಟಿಸಬೇಕಿತ್ತು, ಆದರೆ ಪವಿತ್ರಾ ಲೋಕೇಶ್ ಅವರನ್ನು ಸಿನಿಮಾ ಇಂದ ತೆಗೆದುಹಾಕಬೇಕು ಎಂದು ಸ್ವತಃ ನಾಯಕನೆ ಹೇಳಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ನಾಯಕ, ನಿರ್ದೇಶಕ ಮತ್ತು ನಿರ್ಮಾಪಕ ಎಲ್ಲರೂ ಸೇರಿ, ಪವಿತ್ರಾ ಲೋಕೇಶ್ ಅವರನ್ನು ಸಿನಿಮಾ ಇಂದ ಕೈಬಿಟ್ಟಿದ್ದಾರೆ ಎನ್ನಲಾಗಿದ್ದು. ನರೇಶ್ ಅವರ ಜೊತೆಗಿನ ಅಫೇರ್ ವಿಚಾರ ಪವಿತ್ರಾ ಲೋಕೇಶ್ ಅವರ ಸಿನಿಮಾ ಕೆರಿಯರ್ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡ ಆಗಲಿ, ಪವಿತ್ರಾ ಲೋಕೇಶ್ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.