ಯಾರಿಗೂ ಕಾಣಿಸದಂತೆ ಪುಟ್ಟ ಮಗುವಿಗೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರವರ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತೇ??

26

Get real time updates directly on you device, subscribe now.

ನಮ್ಮ ಚಿತ್ರರಂಗದಲ್ಲಿ ದೊಡ್ಮನೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಈ ಮನೆಯವರ ದೊಡ್ಡ ಗುಣ, ದೊಡ್ಡತನ ಎಲ್ಲರಿಗೂ ಗೊತ್ತಿರುವ ವಿಚಾರ. ಅಣ್ಣಾವ್ರು, ಪಾರ್ವತಮ್ಮನವರು, ಅಣ್ಣಾವ್ರ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸಹ ಅಣ್ಣಾವ್ರ ಹಾಗೆಯೇ ಸರಳ ಸ್ವಭಾವ, ಸಹಾಯದ ಮನೋಭಾವ ಬೆಳೆಸಿಕೊಂಡು ಬಂದಿರುವವರು. ಅದರಲ್ಲೂ ಅಪ್ಪು ಅವರ ಬಗ್ಗೆ ಹೇಳುವುದೇ ಬೇಡ. ಅಪ್ಪು ಅವರು ಇಲ್ಲವಾದ ಬಳಿಕ ನೂರಾರು ಜನರು ಬಂದು ಯಾರಿಗೂ ಗೊತ್ತಾಗದ ಹಾಗೆ ಅಪ್ಪು ಅವರು ತಮಗೆ ಮಾಡಿದ ಸಹಾಯವನ್ನು ಹೇಳಿಕೊಂಡರು. ಈಗ ಅಪ್ಪು ಅವರು ಇಲ್ಲದೆ ಹೋದರು, ಅವರು ಮಾಡಿರುವ ಕೆಲಸಗಳು ಅವರ ಬಗ್ಗೆ ಹೇಳುತ್ತಿವೆ.

ಇಂದಿಗೂ ಸಹ ಅಪ್ಪು ಅವರನ್ನು ನೋಡಲು ಬರುವ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಅಪ್ಪು ಅವರ ಪತ್ನಿ ಅಶ್ವಿನಿ ಅವರು ಅಪ್ಪು ಅವರು ಮಾಡುತ್ತಿದ್ದ ಎಲ್ಲಾ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಪ್ಪು ಅವರ ಕನಸು ಪಿ.ಆರ್.ಕೆ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಅಪ್ಪು ಅವರ ಹಾಗೆ ಚಿತ್ರರಂಗಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ಅಪ್ಪು ಅವರು ಇದ್ದಾಗ ಮಾಧ್ಯಮದ ಎದುರು ಹೆಚ್ಚು ಬರದೆ ಇದ್ದ ಅಶ್ವಿನಿ ಅವರು, ಈಗ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ಪು ಅವರ ಅಭಿಮಾನಿಗಳನ್ನು ಸಹ ಆಗಾಗ ಭೇಟಿ ಮಾಡುತ್ತಿದ್ದಾರೆ. ಅಪ್ಪು ಅವರು ಇದ್ದಾಗ, ಅಭಿಮಾನಿಗಳು ಬಂದು ಅವರನ್ನು ಭೇಟಿ ಮಾಡುತ್ತಿದ್ದರು. ಈಗ ಅಭಿಮಾನಿಗಳು ಕೆಲವೊಮ್ಮೆ ಅಶ್ವಿನಿ ಅವರನ್ನು ಭೇಟಿ ಮಾಡಲು ದೊಡ್ಮನೆಗೆ ಬರುತ್ತಿದ್ದಾರೆ.

ಅದೇ ರೀತಿ ಲೋಕೇಶ್ ಎನ್ನುವ ಅಭಿಮಾನಿಯೊಬ್ಬರು ತಮ್ಮ ಪುಟ್ಟ ಮಗುವಿನ ಜೊತೆಗೆ ಅಶ್ವಿನಿ ಅವರನ್ನು ಭೇಟಿ ಮಾಡಲು ದೊಡ್ಮನೆಗೆ ಬಂದಿದ್ದಾರೆ. ಬಹಳ ಹಿಂದಿನಿಂದ ಲೋಕೇಶ್ ಅಪ್ಪು ಅವರ ಅಭಿಮಾನಿ ಆಗಿದ್ದು, ಬಿಡದಿಯಲ್ಲಿರುವ ಇವರು ಹಲವು ಬಾರಿ ಅಪ್ಪು ಅವರನ್ನು ಭೇಟಿ ಮಾಡಿದ್ದರು. ಅಪ್ಪು ಅವರು ತಟ್ಟೆ ಇಡ್ಲಿ ಅಂಗಡಿ ಇಟ್ಟುಕೊಳ್ಳಲು ಇವರಿಗೆ ಸಹಾಯ ಮಾಡಿದ್ದರು. ಅಪ್ಪು ಅವರ ಸಹಾಯವನ್ನು ಇಂದಿಗೂ ಮರೆತಿಲ್ಲ ಲೋಕೇಶ್. ಕಳೆದ ವರ್ಷ ಲೋಕೇಶ್ ಅವರಿಗೆ ಮುದ್ದಾದ ಹೆಣ್ಣುಮಗು ಜನಿಸಿತು. ಮಗು ಜೊತೆ ಅಪ್ಪು ಅವರನ್ನು ನೋಡಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಅಪ್ಪು ಅವರು ಇಲ್ಲದ ನೋವು ಇದ್ದ ಕಾರಣ, ಬರಲು ಆಗಿರಲಿಲ್ಲ.

ಇದೀಗ ಮಗುವಿಗೆ ಒಂದು ವರ್ಷ ತುಂಬಿರುವ ಕಾರಣ, ಅಶ್ವಿನಿ ಅವರನ್ನು ಭೇಟಿ ಮಾಡಲು ಬಂದಿದ್ದು, ಮುದ್ದು ಮಗುವನ್ನು ನೋಡಿದ ಅಶ್ವಿನಿ ಅವರು ಮಗುವನ್ನು ಮುದ್ದಾಡಿದ್ದಾರೆ. ಅಷ್ಟೇ ಅಲ್ಲದೆ ಮಗುವಿಗೆ ಬೆಲೆಬಾಳುವ ಚಿನ್ನದ ಉಡುಗೊರೆ ನೀಡಿದ್ದಾರೆ. ಅಪ್ಪು ಅವರು ಇದ್ದಾಗ, ಚಿನ್ನದ ಲಾಕೆಟ್ ಗಳನ್ನು ಖರೀದಿ ಮಾಡಿ, ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಮನೆಗೆ ಅಭಿಮಾನಿಗಳು ಅದರಲ್ಲು ಮಕ್ಕಳ ಜೊತೆಗೆ ಬಂದಾಗ, ಅವರಿಗೆ ಗೊತ್ತಾಗದ ಹಾಕೆ ಕವರ್ ನಲ್ಲಿ ಚಿನ್ನದ ಲಾಕೆಟ್ ಹಾಕಿ ಗಿಫ್ಟ್ ಆಗಿ ನೀಡುತ್ತಿದ್ದರು. ಇದೀಗ ಅಶ್ವಿನಿ ಅವರು ಅದೇ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಬಹಳ ಸಂತೋಷದ ವಿಷಯ. ಮುದ್ದು ಮಗುವಿಗೆ ಕವರ್ ಒಂದರಲ್ಲಿ ಚಿನ್ನದ ಉಡುಗೊರೆ ಮತ್ತು ಹಣವನ್ನು ಗಿಫ್ಟ್ ಆಗಿ ನೀಡಿದ್ದಾರೆ. ದೊಡ್ಮನೆ ಸೊಸೆಯ ಗುಣ ನಿಜಕ್ಕೂ ಮೆಚ್ಚುವಂಥದ್ದು.

Get real time updates directly on you device, subscribe now.