ಮೊದಲ ಬಾರಿಗೆ ತನ್ನ ಮುದ್ದಾದ ಮಗುವಿನ ಫೋಟೋವನ್ನು ತೋರಿಸಿದ ನಟಿ ಪ್ರಣೀತಾ. ಮನಸೋತ ನೆಟ್ಟಿಗರು
ನಯವಾದ ಕೆನ್ನೆಯ ಸುಂದರಿ ನಟಿ ಪ್ರಣೀತಾ ಅವರ ಬಗ್ಗೆ ಇಂದು ಮಾತನಾಡೋಣ.. ಕಣ್ಣಲ್ಲೇ ಹುಡುಗರನ್ನು ಕೊಲ್ಲುವ ಸುಂದರಿ.. ಸೌತ್ ಚಿತ್ರರಂಗದಲ್ಲಿ ಈ ಚೆಲುವೆಗೆ ಒಳ್ಳೆಯ ಇಮೇಜ್ ಇದೆ. ಯುವಜನತೆಯಲ್ಲಿ ಆಕೆಗೆ ಪ್ರತ್ಯೇಕ ಅಭಿಮಾನಿ ಬಳಗವೂ ಇದೆ. ಈ ನಟಿ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ತನ್ನ ಸೌಂದರ್ಯದಿಂದ ಚಮತ್ಕಾರ ಮಾಡಿದ್ದಾರೆ.ಗ ಸುಮಾರು ಒಂದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗಿನ ಅತ್ತಾರಿಂಟಿಕಿ ದಾರೇದಿ, ಕನ್ನಡದ ಪೋಕಿರಿ ಸಿನಿಮಾದಲ್ಲಿ ಈಕೆಯ ಎಕ್ಸ್‌ಪ್ರೆಶನ್‌ಗೆ ಇಡೀ ಯುವಜನತೆ ಮನಸೋತಿದ್ದರು.
ನಾಯಕಿಯಾಗಿ ವೃತ್ತಿ ಜೀವನ ನಡೆಸುತ್ತಿರುವಾಗಲೇ ಮದುವೆಯಾದರು. ನಟಿ ಪ್ರಣೀತಾ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರೊಂದಿಗೆ ಏಳು ಹೆಜ್ಜೆ ಇಟ್ಟರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಸಹ ಹಂಚಿಕೊಂಡರು. ಇತ್ತೀಚೆಗಷ್ಟೇ ಇವರು ಹೆಣ್ಣು ಮಗಳಿಗೆ ಜನ್ಮ ನೀಡಿದ ವಿಷಯ ಗೊತ್ತೇ ಇದೆ. ಆದರೆ ಮಗಳ ಫೋಟೋಗಳನ್ನು ಶೇರ್ ಮಾಡುತ್ತಿರುವ ಪ್ರಣೀತಾ ಇದುವರೆಗೂ ಮುಖ ತೋರಿಸಿರಲಿಲ್ಲ. ಇದೀಗ ಮೊದಲ ಬಾರಿಗೆ ಪ್ರಣೀತಾ ಅವರು ತಮ್ಮ ಮುದ್ದು ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ..

ಇನ್ಸ್ಟಾಗ್ರಾಮ್ ನಲ್ಲಿ ಗಂಡ ಮತ್ತು ಮಗುವಿನ ಜೊತೆಗೆ ಇರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ..ಇದನ್ನು ನೋಡಿದ ನೆಟ್ಟಿಗರು ವಾವ್ ಹೌ ಕ್ಯೂಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಪ್ರಣೀತಾ ಅವರ ಹಾಗೆ ಮಗು ತುಂಬಾ ಸುಂದರವಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಇವರ ಫ್ಯಾಮಿಲಿ ಸಂಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.