ಖ್ಯಾತ ನಟಿ ಸದಾ ರವರು ಮದುವೆಯಾಗುವ ಹುಡುಗ ಹೇಗಿರಬೇಕು ಗೊತ್ತೇ?? ಏನೆಲ್ಲಾ ಹೇಳಿದ್ದಾರೆ ಗೊತ್ತೇ??
ಜಯಂ, ದೊಂಗ ದೊಂಗಡಿ, ಅಪರಿಚಿತುಡು ಮುಂತಾದ ಹಿಟ್ ಚಿತ್ರಗಳ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದ ಸದಾ, ಬಹಳ ದಿನಗಳಿಂದ ಚಿತ್ರಗಳಿಂದ ದೂರ ಉಳಿದಿದ್ದರು. ತೆಲುಗು ಮಾತ್ರವಲ್ಲದೆ, ತಮಿಳು ಹಾಗೂ ಹಲವು ಕನ್ನಡ ಸಿನಿಮಾಗಳಲ್ಲಿ ಸಹ ಇವರು ನಟಿಸಿದ್ದಾರೆ. ಸಿನಿಮಾಗಳಿಂದ ದೂರವಿದ್ದರು ತಮಿಳು, ತೆಲುಗು ಕಿರುತೆರೆ ಶೋಗಳಲ್ಲಿ ಆಗಾಗ ಕಾಣಿಸಿಕೊಂಡು ಮನರಂಜನೆ ನೀಡುತ್ತಾರೆ. ಇತ್ತೀಚಿಗೆ ಸದಾ ನಟಿಸಿರುವ ಹಲೋ ವರ್ಲ್ಡ್ ವೆಬ್ ಸೀರೀಸ್ Zee5 OTT ನಲ್ಲಿ ಬಿಡುಗಡೆಯಾಗಿ ಯಶಸ್ಸು ಪಡೆಯಿತು. ಈ ನಡುವೆ, ನಟಿ ಸದಾ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸದಾ ಮದುವೆ ವಿಷಯ ಬಂದಾಗ ಅದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನಮ್ಮ ಸುಖಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗಿ ಮದುವೆಯಾದರೆ ಬೇರೆಯವರು ಸುಖವಾಗಿರಲಾರರು..” ಎಂಬುದು ತಮ್ಮ ಅಭಿಪ್ರಾಯ ಎಂದಿದ್ದಾರೆ.. “ಮದುವೆಯ ಹೆಸರಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತವಾದರೆ ತನಗೆ ಇಷ್ಟವಾಗದ ಆ ಒತ್ತಡವನ್ನೆಲ್ಲ ಭರಿಸಬೇಕಾಗುತ್ತದೆ..” ಎಂದು ಹೇಳಿದ್ದಾರೆ ನಟಿ ಸದಾ. “ಯೂಟ್ಯೂಬ್ ಚಾನೆಲ್ ಆರಂಭಿಸಿದ ನಂತರ ಅನೇಕರು ಮದುವೆಯಾಗಿ ಮಕ್ಕಳಾಗಬೇಕು ಎಂದು ಕಮೆಂಟ್ ಮಾಡಿದ್ದು, ಆ ಕಾಮೆಂಟ್ ಗಳನ್ನು ನೋಡಿ ನನಗೆ ತುಂಬಾ ಕೋಪ ಬಂದಿತ್ತು ಎಂದಿದ್ದಾರೆ. 38ನೇ ವಯಸ್ಸಿಗೆ ಮದುವೆಯಾಗದೆ ಇರುವುದರಿಂದ, ನನಗಿಲ್ಲದ ನೋವು ಅವರಿಗೇಕೆ?
ಯಾರೊಬ್ಬರ ಜೀವನದ ಬಗ್ಗೆ ಪ್ರತಿಕ್ರಿಯಿಸುವ ಹಕ್ಕು ಅವರಿಗೆ ಯಾರು ಕೊಟ್ಟರು..”, ಎಂದು ಪ್ರಶ್ನಿಸಿದ್ದಾರೆ ಸದಾ. ಇತ್ತೀಚಿನ ದಿನಗಳಲ್ಲಿ ನಿಶ್ಚಯಿಸಿ ಪ್ರೇಮ ವಿವಾಹ ಮಾಡಿಕೊಂಡವರಲ್ಲಿ ಹಲವರು ಭಾವುಕರಾಗುತ್ತಿದ್ದಾರೆ. 10 ಮದುವೆಗಳಾದರೆ, ಕನಿಷ್ಠ 5 ಮದುವೆಗಳು ಸಂತೋಷವಾಗಿಲ್ಲ. ಮದುವೆಯಾದರೆ ಎಂತಹ ವ್ಯಕ್ತಿಯ ಜೊತೆಗೆ ಆಗಬೇಕು ಎಂಬ ಪ್ರಶ್ನೆಗೆ ತನ್ನ ಮನದಾಳದ ಮಾತನ್ನು ಹೇಳಿದ್ದಾರೆ, “ತನ್ನನ್ನು ಮದುವೆಯಾಗುವವನು ಶ್ರೀಮಂತನಲ್ಲದಿದ್ದರೂ ಪರವಾಗಿಲ್ಲ, ಆದರೆ ಬದುಕಲು ಇತರರನ್ನು ಅವಲಂಬಿಸಬಾರದು..”, ಎಂದು ಸದಾ ಹೇಳಿದ್ದಾರೆ. “ಹುಡುಗತನ್ನ ಅಗತ್ಯಕ್ಕೆ ತಕ್ಕಂತೆ ದುಡಿಯಬೇಕು ಮತ್ತು ಸಂಪೂರ್ಣ ಸಸ್ಯಾಹಾರಿಯಾಗಬೇಕು..” ಎನ್ನುವುದು ಇವರ ಅಭಿಪ್ರಾಯ.