ಸಾಯುವ ಮುನ್ನ ನಟಿ ಸೌಂದರ್ಯ ರವರು ಹೇಳಿದ ಕೊನೆಯ ಮಾತುಗಳೇನು ಗೊತ್ತೇ?? ಹೀಗ್ಯಾಕೆ ಹೇಳಿದ್ರು ಸೌಂದರ್ಯ??
ಸುಂದರವಾದ ಅಭಿನೇತ್ರಿ, ನಟನೆಯಲ್ಲಿ ಅತ್ಯುತ್ತಮ, ಈಕೆ ನಟನೆಯ ಶಿಖರ. ಜಗತ್ತು ಎಂದಿಗೂ ಮರೆಯದ ಮಹಾನ್ ನಟಿಯನ್ನು ಇವರಲ್ಲಿ ನೋಡಿದ್ದಾರೆ. ಚೆಲುವು ಮಾತ್ರವಲ್ಲದೆ, ತನ್ನ ನಟನೆ ಹಾಗೂ ಮುಖಭಾವದಿಂದ ಕೋಟಿ ಕೋಟಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಆಕೆ ತಮ್ಮ 12 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 120 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಹೆಲಿಕಾಪ್ಟರ್ ಅಪಘಾತದಲ್ಲಿ ಆಕೆ ಸಾವನ್ನಪ್ಪಿದ್ದರು ಎನ್ನುವುದು ನೋವಿನ ವಿಚಾರ.ಆಕೆ ಮತ್ಯಾರು ಅಲ್ಲ, ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಸೌಂದರ್ಯ.
ಆಕೆಯ ಸಾವು ಇಂದಿಗೂ ನಿಗೂಢವಾಗಿದೆ. ನಿಜವಾಗಿ ಏನಾಯಿತು ಎಂಬುದನ್ನು ಇಂದು ತಿಳಿದುಕೊಳ್ಳೋಣ. ಮದುವೆಯ ನಂತರ ನಟಿ ಸೌಂದರ್ಯ 2004 ರ ಮೊದಲು ಬಿಜೆಪಿ ಪಕ್ಷಕ್ಕೆ ಸೇರಿದ್ದರು. ಬಳಿಕ 2004ರಲ್ಲಿ ಚುನಾವಣೆಯ ಕಾವು ಶುರುವಾಯಿತು. ಬಿಜೆಪಿ ಮತ್ತು ಟಿಡಿಪಿ ಒಟ್ಟಿಗೆ ಸ್ಪರ್ಧಿಸಿದವು. ಕಾಂಗ್ರೆಸ್, ಟಿ.ಆರ್.ಎಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದಾಗ, ಕರೀಂನಗರ ಸಂಸದರಾಗಿ ಸಿ.ಎಚ್.ವಿದ್ಯಾಸಾಗರ್ ಸ್ಪರ್ಧಿಸಿದರು. ನಟಿ ಸೌಂದರ್ಯ ಅವರ ಪರವಾಗಿ ಪ್ರಚಾರ ಮಾಡುವಂತೆ ಆಡಳಿತ ಆದೇಶ ನೀಡಿತು. ಹಾಗಾಗಿ ಅಂದು ಪ್ರಚಾರಕ್ಕೆ ತೆರಳಿದರು. ಸೌಂದರ್ಯ ಅವರು ಅಣ್ಣ ಅಮರ್ ನಾಥ್, ಅತ್ತಿಗೆ ನಿರ್ಮಲಾ, ಮತ್ತು ಅತ್ತಿಗೇಯ ಸ್ನೇಹಿತ ರಮೇಶ್ ಅವರ ಜೊತೆ ವಿಮಾನ ನಿಲ್ದಾಣವ ತಲುಪಿದರು.
ಅಣ್ಣನ ಮಗನನ್ನು ಅತ್ತಿಗೆ ನಿರ್ಮಲಾ ಅವರಿಗೆ ಒಪ್ಪಿಸಿದ ಸೌಂದರ್ಯ ಅವರು, ಅಣ್ಣ ಅಮರ್ ನಾಥ್ ಮತ್ತು ರಮೇಶ್ ಅವರ ಜೊತೆ ಒಳಗೆ ಹೋಗಲು ರೆಡಿಯಾಗಿದ್ದರು, ಒಳಗೆ ಹೋದ ಬಳಿಕ ಎಲ್ಲರಿಗು ಬರುತ್ತೇನೆ ಎಂದು ಹೇಳಿದರು. ಹೆಲಿಕಾಪ್ಟರ್ ಹತ್ತುವ ಮುಂಚೆಯೇ, ಅತ್ತಿಗೆ ಮತ್ತು ಮಗುವಿಗೆ ಟಾಟಾ ಹೇಳಿದರು. ಅದೇ ಸೌಂದರ್ಯ ಅವರ ಕೊನೆಯ ಮಾತುಗಳು. ಹೆಲಿಕಾಪ್ಟರ್ ಟೇಕಾಫ್ ಆದ ಮೂರು ನಿಮಿಷದಲ್ಲಿ ಭಾರಿ ಸದ್ದು ಮಾಡುತ್ತ ನೆಲಕ್ಕೆ ಬಿದ್ದಿತು. ಅಷ್ಟು ವೇಗದಲ್ಲಿ ಹೆಲಿಕಾಪ್ಟರ್ ಸುಮಾರು ಐದು ಅಡಿ ಆಳಕ್ಕೆ ಬಿದ್ದಿತು, ಬೆಂಕಿಯಲ್ಲಿ ನಾಲ್ವರು ಸುಟ್ಟು ಕರಕಲಾದರು, ಈ ದುರ್ಘಟನೆಯಿಂದ ನಟಿ ಸೌಂದರ್ಯ ಮರಳಿ ಬಾರದ ಲೋಕಕ್ಕೆ ಹೋದರು.