ಮೊದಲ ಬಾರಿಗೆ ಜೊತೆ ಜೊತೆಯಲಿ ವಿವಾದದ ಕುರಿತು ಅಚ್ಚರಿಯ ಪ್ರತಿಕ್ರಿಯೆ ನೀಡಿದ ಮೇಘ ಶೆಟ್ಟಿ. ಹೇಳಿದ್ದೇನು ಗೊತ್ತೇ??
ಜೀಕನ್ನಡ ವಾಹಿನಿಯ ಬಹಳ ಫೇಮಸ್ ಆದ ಧಾರವಾಹಿ ಜೊತೆ ಜೊತೆಯಲಿ. ಇದೀಗ ಈ ಧಾರವಾಹಿ ತಂಡದಲ್ಲಿ ಸಮಸ್ಯೆ ಉಂಟಾಗಿದೆ. ಧಾರಾವಾಹಿಯ ನಾಯಕ ಅನಿರುದ್ಧ್ ಅವರು ತಂಡದ ಜೊತೆಗೆ ಕಿರಿಕ್ ಮಾಡಿಕೊಂಡು, ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಭಾರಿ ವೈರಲ್ ಆಗಿದೆ. ಈ ಬಗ್ಗೆ ಜೊತೆ ಜೊತೆಯಲಿ ನಿರ್ಮಾಪಕ ಮತ್ತು ನಿರ್ದೇಶಕ ಆರೂರು ಜಗದೀಶ್ ಅವರು ಸಹ ಬೇಸರ ಮಾಡಿಕೊಂಡು, ಧಾರವಾಹಿ ತಂಡ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಅನಿರುದ್ಧ್ ಅವರ ಪಾತ್ರಕ್ಕೆ ಬೇರೆ ನಟರ ಹೆಸರುಗಳು ಸಹ ಕೇಳಿ ಬರುತ್ತಿದೆ.
ಈ ಹಿಂದೆ 2020ರ ಕರೊನಾ ಲಾಕ್ ಡೌನ್ ಸಮಯದಲ್ಲಿ ನಟಿ ಮೇಘಾ ಶೆಟ್ಟಿ ಅವರು ಸಹ ತಂಡದ ಜೊತೆಗೆ ಕಿರಿಕ್ ಮಾಡಿಕೊಂಡು, ಜೊತೆ ಜೊತೆಯಲಿ ಇಂದ ಹೊರಬರುವುದಾಗಿ ಹೇಳಿದ್ದರು, ಬಳಿಕ ಮೇಘಾ ಶೆಟ್ಟಿ ಅವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿ, ತಂಡಕ್ಕೆ ಕ್ಷಮೆ ಕೇಳಿ ಮತ್ತೆ ಸೇರಿಕೊಂಡರು. ಇದೀಗ ಅನಿರುದ್ಧ್ ಅವರ ವಿಚಾರದಲ್ಲೂ ಇದೇ ರೀತಿ ಆಗಿದೆ. ಅನಿರುದ್ಧ್ ಅವರು ಸುದ್ದಿಗೋಷ್ಠಿ ಕರೆದು ತಮ್ಮ ಕಡೆಯ ಮಾತುಗಳನ್ನು ಹೇಳಿದರು, ತಂಡ ಕರೆದರೆ ನಾನು ಮತ್ತೆ ಹೋಗೋಕೆ ಸಿದ್ಧ ಎಂದು ಹೇಳಿದರು. ಇತ್ತ ಧಾರವಾಹಿ ತಂಡ ಅನಿರುದ್ಧ್ ಅವರಿಂದ ಈ ಹಿಂದೆ ಕೂಡ ಕಿರಿಕ್ ಆಗಿತ್ತು, ಆದರೆ ಅವುಗಳು ಸರಿ ಆಗಿದ್ದವು. ಈ ಬಾರಿ ಮಿತಿ ಮೀರಿ ಹೋಗಿದೆ ಎಂದು ಹೇಳಿದ್ದಾರೆ.
ನಿರ್ಮಾಪಕರು ವಾಹಿನಿ ಮತ್ತು ತಂಡದ ಜೊತೆಗೆ ಮಾತನಾಡಿ, ಅನಿರುದ್ಧ್ ಅವರನ್ನು ಧಾರವಾಹಿಯಿಂದ ಕೈಬಿಡುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ವಿಚಾರ 2 ದಿನಗಳಿಂದ ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ನಾಯಕಿ ಮೇಘಾ ಶೆಟ್ಟಿ ಅವರು ಇದೀಗ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲವೂ ಸರಿ ಹೋಗುತ್ತದೆ ಎನ್ನುವ ಭರವಸೆಯಲ್ಲಿ ಇದ್ದಾರೆ ಮೇಘಾ. “ಎರಡು ದಿನಗಳಿಂದ ನಾನು ಟಿವಿ ನೋಡಿಲ್ಲ, ಯಾರು ಏನು ಹೇಳಿಕೆ ಕೊಟ್ಟಿದ್ದಾರೆ ಅಂತ ನನಗೆ ಮಾಹಿತಿ ಇಲ್ಲ. ಈ ಹಿಂದೆ ಕೂಡ ಇಂಥಹ ಸಮಸ್ಯೆ ಆಗಿಲ್ಲ, ಈಗಲೂ ಕೂಡ ಏನು ಆಗಿಲ್ಲ. ಎಲ್ಲಾ ಚೆನ್ನಾಗೆ ಇದೆ, ಸ್ವಲ್ಪ ಸಮಯ ಕೊಡಬೇಕು, ಎಲ್ಲಾ ಸರಿ ಹೋಗುತ್ತದೆ..” ಎಂದು ಹೇಳಿದ್ದಾರೆ ಮೇಘಾ ಶೆಟ್ಟಿ. ಮೇಘಾ ಅವರು ಹೇಳಿದ ಹಾಗೆ ಎಲ್ಲವೂ ಸರಿಹೋಗುತ್ತಾ ಎಂದು ಕಾಡುನೋಡಬೇಕಿದೆ.