ಬಿಗ್ ಬಾಸ್ ನಲ್ಲಿ ಮತ್ತೊಂದು ಟ್ವಿಸ್ಟ್: ಸಾನ್ಯ ಹಾಗೂ ಸೋಮಣ್ಣ ರವರ ನಡುವಿನ ಜಗಳಕ್ಕೆ ಸುದೀಪ್ ಕೊಟ್ಟ ಖಡಕ್ ಪ್ರತಿಕ್ರಿಯೆ ಏನು ಗೊತ್ತೇ??
ಬಿಗ್ ಬಾಸ್ ಮನೆಯಲ್ಲಿ ಈಗ ಮತ್ತೊಂದು ವಿಚಾರ ಹಾಟ್ ಟಾಪಿಕ್ ಆಗಿದೆ, ಅದು ಸಾಂಗ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಅವರ ಸ್ನೇಹದ ವಿಚಾರ. ಇವರಿಬ್ಬರು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈ ವಿಚಾರವನ್ನು ದೊಡ್ಡದಾಗಿ ಮಾಡಿದವರು ಸೋಮಣ್ಣ ಮಾಚಿಮಾಡ ಅವರು. ಕ್ಯಾಪ್ಟನ್ಸಿ ಟಾಸ್ಕ್ ಬಂದಾಗ, ಸಾನ್ಯಾ ಕ್ಯಾಪ್ಟನ್ ಆಗಲು ಅರ್ಹರಲ್ಲ ಎಂದು ಚರ್ಚೆ ಬಂದಾಗ, ಸೋಮಣ್ಣ ಅವರು ಸಾನ್ಯಾ ಆಟಗಾರ ಇಬ್ಬರು ಸಹ ಸದಾ ಅಂಟಿಕೊಂಡೇ ಇರುತ್ತಾರೆ, ಜೊತೆಯಾಗಿ ಮಾತನಾಡಿಕೊಳ್ಳುವುದೇ ಹೆಚ್ಚು ಸಾನ್ಯಾ ಕ್ಯಾಪ್ಟನ್ ಆಗಲು ಅರ್ಹರಲ್ಲ ಎಂದು ಸೋಮಣ್ಣ ಹೇಳಿದರು.
ಈ ಮಾತಿನ ಬಳಿಕ, ಸಾನ್ಯಾ ಮತ್ತು ರೂಪೇಶ್ ಇಬ್ಬರು ಸಹ, ಸೋಮಣ್ಣ ಅವರ ಬಳಿ ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಈ ವಿಚಾರಕ್ಕೆ ಕ್ಲಾರಿಟಿ ಕೊಡುವ ಪ್ರಯತ್ನ ಮಾಡಿದರು. ಆದರೆ ಸೋಮಣ್ಣ ಅವರು ಇವರ ಮಾತುಗಳನ್ನು ಕೇಳದೆ, ಅವರು ಅಂದುಕೊಂಡಿದ್ದೆ ಸರಿ ಎನ್ನುವ ಹಾಗೆ ಮಾತನಾಡಿದರು. ಇದೇ ವಿಚಾರ ನಿನ್ನೆಯ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವತ ಮುಂದೆ ಸಹ ಚರ್ಚೆಯಾಗಿದೆ. ಸುದೀಪ್ ಅವರು ಈ ವಿಷಯ ಶುರು ಮಾಡಿದಾಗ, ಸಾನ್ಯಾ ರೂಪೇಶ್ ಮಾತನಾಡಿ, ಈಗ ಮಾತನಾಡಬೇಕು ಅಂದ್ರೆ ಸೋಮಣ್ಣ ನೋಡಿದ್ರೆ ಅಂತ ಭಯ ಆಗುತ್ತೆ. ಅದರಿಂದ ಜಾಸ್ತಿ ಮಾತಾಡುವುದು ಕಡಿಮೆ ಆಯಿತು ಎಂದು ಇಬ್ಬರು ಹೇಳಿದರು.
ಆಗ ಸುದೀಪ್ ಅವರು ಈ ವಿಚಾರದ ಬಗ್ಗೆ ಮಾತನಾಡಿ, “ಸೋಮಣ್ಣ ಅವರು ಹೇಳಿದ್ದು ಸರಿ, ನೀವು ಅವರ ಬಳಿ ಹೋಗಿ ಕ್ಲಾರಿಟಿ ಕೊಟ್ಟಿದ್ದು ಸರಿ, ನಿಮ್ಮಲ್ಲಿ ಚರ್ಚೆ ಮಾಡಿದ್ದು ಸರಿ, ಸೋಮಣ್ಣ ಅವರು ಊಹೆ ಮಾಡಿದ್ದು ಕೂಡ ಸರಿ, ಆದರೆ ಯಾರೋ ಒಬ್ಬರು ಮಾತನಾಡುತ್ತಾರೆ ಅಂತ, ಸುಮ್ಮನೆ ಮಾತನಾಡದೆ ಇರುವುದು ಸರಿ ಅಲ್ಲ..” ಎಂದು ಹೇಳುವ ಮೂಲಕ ಸುದೀಪ್ ಅವರು ಈ ವಿಚಾರಕ್ಕೆ ಕ್ಲಾರಿಟಿ ನೀಡಿದ್ದಾರೆ. ಈ ಮೂಲಕ ಇಬ್ಬರು ಮಾಡಿದ್ದು ತಪ್ಪಲ್ಲ ಎಂದು ಕ್ಲಾರಿಟಿ ನೀಡಿದ್ದಾರೆ ಸುದೀಪ್. ನಿಮಗೆ ಯಾರ ಜೊತೆಗೆ ಕಂಫರ್ಟ್ ಇದೆ ಅವರೊಡನೆ ಸಮಯ ಕಳೆಯಿರಿ, ಬಿಗ್ ಬಾಸ್ ಮನೆಯಲ್ಲಿ ಬೇಸರ ಮಾಡಿಕೊಳ್ಳದೆ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.