ಅಭಿಮಾನಿಗಳು ಪುಟ್ಟ ಮಗುವನ್ನು ಕರೆದುತಂದು ಹೆಸರು ಇಡಿ ಎಂದಾಗ ಶಿವಣ್ಣ ಇಟ್ಟ ಹೆಸರೇನು ಗೊತ್ತೇ??
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮ ಜೊತೆ ಭೌತಿಕವಾಗಿ ಇಲ್ಲ. ಪುನೀತ್ ಅವರು ನಮ್ಮನ್ನು ಅಗಲಿ 10 ತಿಂಗಳು ಕಳೆಯುತ್ತಿದ್ದರು ಸಹ, ಅವರು ಇಲ್ಲ ಎನ್ನುವ ವಿಚಾರವನ್ನು ಒಪ್ಪಿಕೊಳ್ಳಲು ಸಾಧ್ಯ ಆಗುತ್ತಿಲ್ಲ ಎಂದೇ ಹೇಳಬಹುದು. ಎಲ್ಲಾ ಅಭಿಮಾನಿ ದೇವರುಗಳ ಮನಸ್ಸಿನಲ್ಲಿ ಅಪ್ಪು ಸದಾ ಇರುತ್ತಾರೆ. ಅಪ್ಪು ಅವರ ಮಾತುಗಳು, ಅವರ ತೋರಿಸಿಕೊಟ್ಟ ಹಾದಿ ಎಲ್ಲವೂ ಸಹ ನಮ್ಮ ಜೊತೆಯಲ್ಲೇ ಇದೆ. ಅಪ್ಪು ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ, ದಿನೇ ದಿನೇ ಅದು ಬೆಳೆಯುತ್ತಲೇ ಇದೆ ಎಂದು ಹೇಳಬಹುದು.
ಅಪ್ಪು ಅವರ ಅಭಿಮಾನಿಗಳು ತಮ್ಮ ಮಗುವಿಗೆ ತಮ್ಮ ಮೆಚ್ಚಿನ ನಟನ ಹೆಸರನ್ನೇ ಇಡುತ್ತಿರುವುದು ವಿಶೇಷವಾಗಿದೆ. ಇದೀಗ ಅಪ್ಪು ಅವರ ಅಭಿಮಾನಿಯೊಬ್ಬರು, ತಮ್ಮ ಮಗುವಿಗೆ ಅಪ್ಪು ಎಂದೇ ಹೆಸರು ಇಡಬೇಕು ಎನ್ನುವ ಆಸೆಯಲ್ಲಿ, ಬೀದರ್ ಇಂದ ಬೆಂಗಳೂರಿಗೆ ಬಂದು, ಶಿವಣ್ಣ ಅವರ ಭೇಟಿ ಮಾಡಿ, ಶಿವಣ್ಣ ಅವರಿಂದಲೇ ತಮ್ಮ ಮಗುವಿಗೆ ಅಪ್ಪು ಎಂದು ನಾಮಕಾರಣ ಮಾಡಿಸಿದ್ದಾರೆ. ಅಪ್ಪು ಎಂದು ಹೆಸರನ್ನು ಇಟ್ಟುಕೊಂಡ, ಮುದ್ದು ಮಗುವಿನ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಪ್ಪು ಅವರ ಅಭಿಮಾನಿಗಳಾದ ಈ ದಂಪತಿ, ಬೀದರ್ ಇಂದ ಶಿವಣ್ಣ ಅವರ ಮನೆಗೆ ಬಂದಿದ್ದಾರೆ. ಶಿವಣ್ಣ ಅವರನ್ನು ಭೇಟಿ ಮಾಡಿ, ತಮ್ಮ ಮಗುವಿಗೆ ಅಪ್ಪು ಎಂದು ಹೆಸರು ಇಡಬೇಕು ಎಂದುಕೊಂಡಿರುವ ಬಯಕೆಯನ್ನು ತಿಳಿಸಿ, ಜೊತೆಗೆ, ಮಗುವಿಗೆ ಶಿವಣ್ಣ ಅವರೇ ಹೆಸರು ಇಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅಭಿಮಾನಿಗಳ ಆಸೆಯನ್ನು ಕೇಳಿದ ಶಿವಣ್ಣ, ಮಗುವಿಗೆ ಅಪ್ಪು ಎಂದು ಹೆಸರಿಟ್ಟು, ಮುತ್ತು ನೀಡಿದ್ದಾರೆ. ಶಿವಣ್ಣ ಹೆಸರಿಟ್ಟ ಮಗುವಿನ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.