ಲೆಕ್ಕಾಚಾರಗಳೆಲ್ಲವೂ ಉಲ್ಟಾ: ಮನೆಯಿಂದ ಸ್ಪೂರ್ತಿ ಗೌಡ ರವರು ಹೊರಹೋಗಲು ಕಾರಣವೇನು ಗೊತ್ತೇ??
ಬಿಗ್ ಬಾಸ್ ಮನೆಯಲ್ಲಿ ಎರಡನೇ ಎಲಿಮಿನೇಷನ್ ಮುಗಿದಿದ್ದು, ಈ ವಾರದ ಎಲಿಮಿನೇಷನ್ ನಲ್ಲಿ ಯಾರು ಊಹಿಸದ ಸ್ಪರ್ಧಿ ಬಿಗ್ ಮನೆಯಿಂದ ಹೊರಬಂದಿದ್ದಾರೆ. ಎರಡನೇ ವಾರ ಮನೆಯಿಂದ ಹೊರಬಂದಿರುವುದು ಸ್ಫೂರ್ತಿ ಗೌಡ, ಇವರು ಇಷ್ಟು ಬೇಗ ಎಲಿಮಿನೇಟ್ ಆಗುತ್ತಾರೆ ಎಂದು ಯಾರು ಸಹ ಭಾವಿಸಿರಲಿಲ್ಲ. ಸ್ಟ್ರಾಂಗ್ ಸ್ಪರ್ಧಿ ಆಗಿದ್ದ ಸ್ಪೂರ್ತಿ ಗೌಡ ಇಷ್ಟು ಬೇಗ ಮನೆಯಿಂದ ಹೊರಬರಲು ಕಾರಣ ಏನು? ತಿಳಿಸುತ್ತೇವೆ ನೋಡಿ.
ಎರಡನೇ ವಾರ ಮನೆಯಿಂದ ಹೊರಹೋಗಲು 9 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಸೋನು ಗೌಡ, ಸ್ಪೂರ್ತಿ ಗೌಡ, ಅಕ್ಷತಾ ಕುಕ್ಕಿ, ನಂದಿನಿ, ರಾಕೇಶ್, ಆರ್ಯವರ್ಧನ್, ಸಾನ್ಯಾ ಅಯ್ಯರ್, ಜಯಶ್ರೀ ಹಾಗೂ ಸೋಮಣ್ಣ ನಾಮಿನೇಟ್ ಆಗಿದ್ದರು. ಈ ಒಂಬತ್ತು ಜನರಲ್ಲಿ ಎಲಿಮಿನೇಟ್ ಆಗಿರುವುದು ಸ್ಪೂರ್ತಿ ಗೌಡ. ಈ ವಾರ ಸ್ಪೂರ್ತಿ ಗೌಡ ಸರಿಯಾಗಿ ಪರ್ಫಾರ್ಮ್ ಮಾಡಲಿಲ್ಲ. ತಮಗೆ ಅವಕಾಶ ಸಿಗಲಿಲ್ಲ ಎಂದು ಸಣ್ಣ ವಿಷಯವನ್ನು ದೊಡ್ಡದಾಗಿ ಮಾಡಿದ ಸ್ಪೂರ್ತಿ, ಅವಕಾಶ ಸಿಕ್ಕಾದ ಅದನ್ನು ಬಳಸಿಕೊಳ್ಳಲಿಲ್ಲ. ಜೊತೆಗೆ ಈ ವಾರ ಆಕೆ ಹಠವಾದಿಯಾಗಿದ್ದರು. ಕಳಪೆ ಪ್ರದರ್ಶನ ನೀಡಿ ಜೈಲು ಸೇರಿದ್ದರು.
ಜೊತೆಗೆ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಅನ್ನಿಸುತ್ತಿದೆ ಎಂದು ಸಹ ಹೇಳಿದ್ದರು ಸ್ಪೂರ್ತಿ. ಈ ಎಲ್ಲಾ ಕಾರಣಗಳಿಂದ ಸ್ಪೂರ್ತಿ ಗೌಡ ಈ ವಾರ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಬಿಗ್ ಬಾಸ್ ಓಟಿಟಿ ಶೋ ಶುರುವಾಗಿ ಎರಡೇ ವಾರದಲ್ಲಿ ನಾಲ್ಕು ಜನ ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ, ಮೊದಲ ವಾರ ಲೋಕಿ ಅವರು ಅನಾರೋಗ್ಯದಿಂದ ಬಿಗ್ ಮನೆಯಿಂದ ಹೊರ ಹೋದರು, ಕಿರಣ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋದರು, ಎರಡನೇ ವಾರ ಅರ್ಜುನ್ ರಮೇಶ್ ಅವರು ಸಹ ಇಂಜೂರಿ ಕಾರಣದಿಂದ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದು, ಸ್ಪೂರ್ತಿ ಗೌಡ ಎಲಿಮಿನೇಟ್ ಆಗಿದ್ದಾರೆ.