ಹುಟ್ಟುತ್ತಲೇ ಸಾವಿರಾರು ಕೋಟಿಯ ಒಡತಿ, ನಂತರ ಎನ್ಟಿಆರ್ ಪತ್ನಿ ಆದರೆ ಕೂಡ ನನ್ನ ಕೋರಿಕೆ ತೀರುತಿಲ್ಲ ಎಂದ ಎನ್ಟಿಆರ್ ಪತ್ನಿ. ಏನು ಅಂತೇ ಗೊತ್ತೇ??

69

Get real time updates directly on you device, subscribe now.

ಟಾಲಿವುಡ್ ನ ಟಾಪ್ ಹೀರೋಗಳಲ್ಲಿ ಎನ್.ಟಿ.ಆರ್ ಕೂಡ ಒಬ್ಬರು. RRR ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಇಮೇಜ್ ಪಡೆದರು. ಸಿನಿಮಾಗಳ ಮೂಲಕ ಎನ್.ಟಿ.ಆರ್ ಎಷ್ಟು ಜನಪ್ರಿಯತೆ ಗಳಿಸಿದ್ದಾರೆ, ಆದರೆ ಅವರ ಪತ್ನಿ ಪ್ರಣತಿ ಚಿತ್ರರಂಗ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ ಎನ್ನಬಹುದು. ಮೇ 5, 2011 ರಂದು, ಎನ್.ಟಿ.ಆರ್ ಹಾಗೂ ಲಕ್ಷ್ಮಿ ಪ್ರಣತಿ ಅವರ ವಿವಾಹವು ಬಹಳ ವಿಜೃಂಭಣೆಯಿಂದ ನಡೆಯಿತು. ತಮ್ಮ ವೈವಾಹಿಕ ಜೀವನದ 11 ವರ್ಷಗಳನ್ನು ಅತ್ಯಂತ ಸಂತೋಷದಿಂದ ಕಳೆದಿರುವ ಎನ್.ಟಿ.ಆರ್ ಒಂದು ಕಡೆ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ, ಇನ್ನೊಂದು ಕಡೆ ಕುಟುಂಬದೊಂದಿಗೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

ಕೆಲವೊಮ್ಮೆ ಎನ್.ಟಿ.ಆರ್ ಅವರು ತಮ್ಮ ಕುಟುಂಬದೊಂದಿಗೆ ಹೊರಗಡೆ ಹೋಗುತ್ತಾರೆ, ಇದನ್ನೂ ಬಹಳ ರಹಸ್ಯವಾಗಿ ಮಾಡಲಾಗುತ್ತದೆ. ಎನ್.ಟಿ.ಆರ್ ಹಾಗೂ ಪ್ರಣತಿ ದಂಪತಿಗೆ ಅಭಯ್ ರಾಮ್, ಭರತ್ ರಾಮ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಎನ್‌.ಟಿ.ಆರ್ ಹಾಗು ಲಕ್ಷ್ಮಿ ಪ್ರಣತಿ ಮದುವೆಯ ಹಿಂದೆ ಸಾಕಷ್ಟು ಕಥೆ ಇದೆ, ಅವರದ್ದು ಅರೇಂಜ್ಡ್ ಮ್ಯಾರೇಜ್. ಮೇ 5, 2011 ರಂದು ವಿವಾಹವಾದರು. ಪ್ರಣತಿ ಬೇರೆ ಯಾರೂ ಅಲ್ಲ, ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಸೊಸೆಯ ಮಗಳು. ಲಕ್ಷ್ಮಿ ಪ್ರಣತಿ ಅವರು ಖ್ಯಾತ ಕೈಗಾರಿಕೋದ್ಯಮಿ ನಾರ್ಣೆ ಶ್ರೀನಿವಾಸ ರಾವ್ ಅವರ ಮಗಳು.

ಹರಿಕೃಷ್ಣ ಅವರು ಎನ್‌.ಟಿ.ಆರ್‌ ಅವರ ಮದುವೆಗೆ ಹುಡುಗಿಯನ್ನು ನೋಡುತ್ತಿರುವಾಗಲೇ ಪ್ರಮುಖ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರೊಬ್ಬರು ಮಗಳ ಮದುವೆಗೆ ಪ್ರಯತ್ನ ಆರಂಭಿಸಿದ್ದರು. ಆದರೆ ಸತ್ಯ ಏನೆಂದರೆ ಚಂದ್ರಬಾಬು ಅವರಿಗೆ ಈ ವಿಷಯ ತಿಳಿದ ತಕ್ಷಣ ಎನ್.ಟಿ.ಆರ್ ಅವರುತಮ್ಮ ಕುಟುಂಬದ ಅಳಿಯನಾಗಬೇಕು ಎಂದು ಬಹಳ ಇಷ್ಟವಾಗಿ, ತಕ್ಷಣ ತಮ್ಮ ಮಗಳ ಜೊತೆಗೆ ಜ್ಯೂನಿಯರ್ ಎನ್.ಟಿ.ಆರ್ ಅವರ ಮದುವೆ ನಿಶ್ಚಯಿಸಿದರು. ಲಕ್ಷ್ಮಿ ಪ್ರಣತಿ ಅವರಿಗೆ ತಾರಕ್‌ ಅವರಿಗಿಂತ ಮಕ್ಕಳೆಂದರೆ ತುಂಬಾ ಇಷ್ಟ.

ಆದರೆ ಲಕ್ಷ್ಮಿ ಪ್ರಣತಿ ಎನ್‌.ಟಿಆ.ರ್ ಆಸೆ ಈಡೇರಿಲ್ಲವಂತೆ. ದಂಪತಿಗೆ ಹೆಣ್ಣು ಮಗು ಬೇಕು ಎಂದು ಆಸೆ ಇತ್ತು, ಮಹಾಲಕ್ಷ್ಮಿಯಂತೆ ಮನೆ ಸುತ್ತಬೇಕು ಎಂದು ಆಸೆಪಟ್ಟರು. ಆದರೆ, ಆ ದೇವರು ಆ ಆಸೆಯನ್ನು ಈಡೇರಿಸಲಿಲ್ಲ. ಈ ವಿಚಾರದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಎನ್.ಟಿ.ಆರ್ ಅವರು, “ಲಕ್ಷ್ಮಿ ಪ್ರಣತಿಗೆ ಹೆಣ್ಣು ಮಗು ಆಗಬೇಕು ಅಂತ ತುಂಬಾ ಆಸೆ ಇತ್ತು ಆದರೆ ಎರಡನೇ ಬಾರಿಯು ಗಂಡು ಮಗುವಾದಾಗ ನಮಗೆ ಕೊಂಚ ನಿರಾಸೆಯಾಯಿತು, ಲಕ್ಷ್ಮಿ ಪ್ರಣತಿ ಹೆಣ್ಣು ಮಗುವಿಗಾಗಿ ಮೂರನೇ ಮಗುವಿಗು ಸಿದ್ಧಳಾದಳು. ಆದರೆ ಅವಳ ಆರೋಗ್ಯ ಸರಿಯಿಲ್ಲದ ಕಾರಣ ಬೇಡ ಎಂದು ನಿರ್ಧಾರ ಮಾಡಿದೆವು.” ಎಂದು ಹೇಳಿದ್ದಾರೆ ಜ್ಯೂನಿಯರ್ ಎನ್.ಟಿ.ಆರ್

Get real time updates directly on you device, subscribe now.