ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ ರವರು ಧರಿಸುತ್ತಿರುವ ಬೆಲೆ ಎಷ್ಟು ಗೊತ್ತೇ?? ಈ ಡ್ರೆಸ್ ಬೆಲೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ.

37

Get real time updates directly on you device, subscribe now.

ಪುಷ್ಪ ಸಿನಿಮಾ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣ ಅವರ ರೇಂಜ್ ಬಡಲಾಗಿದೆ ಎಂದರೆ ತಪ್ಪಾಗುವುದಿಲ್ಲ. ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಸಿನಿಮಾ ಜರ್ನಿ ಶುರುಮಾಡಿ, ನಂತರ ತೆಲುಗು ತಮಿಳು ಹಾಗೂ ಈಗ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ಕ್ಸಾರೆ ಬಾಲಿವುಡ್ ಇಂದ ರಶ್ಮಿಕಾ ಅವರಿಗೆ ಬಿಗ್ ಆಫರ್ ಗಳು ಬರುತ್ತಿವೆ ಎನ್ನುವುದು ಗೊತ್ತಿರುವ ವಿಚಾರ. ಈಗಾಗಲೇ ಹಿಂದಿಯಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ ರಶ್ಮಿಕಾ. ಬಾಲಿವುಡ್ ಕಡೆಗೆ ಹೆಚ್ಚು ಗಮನ ಹರಿಸಿರುವ ಈ ನಟಿ, ಮುಂಬೈಗೆ ವಾಸ್ತವ್ಯ ಬದಲಾಯಿಸಿದ್ದಾರೆ..

ಬಾಲಿವುಡ್ ನ ದೊಡ್ಡ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸ ಮಾಡುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಇದೀಗ ರಶ್ಮಿಕಾ ಅವರು ಬಾಲಿವುಡ್ ನಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವ ಕಾರಣ, ಅಲ್ಲಿನ ಲೈಫ್ ಸ್ಟೈಲ್ ಗೆ ತಕ್ಕ ಹಾಗೆ ಚೇಂಜ್ ಆಗುತ್ತಿದ್ದಾರೆ. ರಶ್ಮಿಕಾ ಅವರು ಈಗ ಬ್ರಾಂಡೆಡ್ ಬಟ್ಟೆಗಳನ್ನು ಮಾತ್ರ ಧರಿಸುತ್ತಿದ್ದಾರೆ, ಸ್ಟಾರ್ ನಟರು ಮತ್ತು ಸ್ಟಾರ್ ನಿರ್ಮಾಪಕರ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಇತ್ತೀಚೆಗೆ ಮುಂಬೈನ ಸ್ಟಾರ್ ಹೋಟೆಲ್ ಒಂದರ ಬಳಿ ರಶ್ಮಿಕಾ ಮಂದಣ್ಣ ಪಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದು, ಅವರ ಧರಿಸಿದ್ದ ಬಟ್ಟೆ ಎಲ್ಲರ ಗಮನ ಸೆಳೆದಿದೆ. ಬಿಳಿ ಮತ್ತು ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದರು ರಶ್ಮಿಕಾ.

ಅದಕ್ಕೆ ದೊಗಳೇ ಪ್ಯಾಂಟ್ ಹಾಗೂ, ಸ್ಟೈಲಿಶ್ ಲುಕ್ ನಲ್ಲಿ ಕಾಣಲು ಕೂಲಿಂಗ್ ಗ್ಲಾಸ್ ಮತ್ತು ಕ್ಯಾಪ್ ಧರಿಸಿದ್ದರು. ರಶ್ಮಿಕಾ ಅವರು ಅಂದು ಧರಿಸಿದ್ದ ಈ ಬಟ್ಟೆ ಬಹಳ ಫೇಮಸ್ ಆದ ಗುಚ್ಚಿ ಬ್ರಾಂಡ್ ನ ಬಟ್ಟೆ ಆಗಿದ್ದು, ನೋಡಲು ಬಹಳ ಸರಳವಾಗಿ ಕಂಡರು ಸಹ, ಇದರ ಬೆಲೆ ಸಾವಿರದಲ್ಲಿಲ್ಲ ಬದಲಾಗಿ ಲಕ್ಷದಲ್ಲಿದೆ. ರಶ್ಮಿಕಾ ಅವರು ಧರಿಸಿರುವ ಈ ಬಟ್ಟೆಯ ಬೆಲೆ ಬರೊಬ್ಬರಿ 1.20 ಲಕ್ಷ ರೂಪಾಯಿ ಎನ್ನಲಾಗಿದೆ. ರಶ್ಮಿಕಾ ಅಭಿಮಾನಿಗಳು ಸಹ ಈ ಬಟ್ಟೆಯ ಬೆಲೆ ಕೇಳಿ ಶಾಕ್ ಆಗಿರುವುದು ಖಂಡಿತ. ಮುಂಬೈಗೆ ವಾಸ್ತವ್ಯ ಶಿಫ್ಟ್ ಮಾಡಿರುವ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

Get real time updates directly on you device, subscribe now.