ನಟಿಯಾಗಿ, ಈಗ ನಿರ್ಮಾಪಕಿಯಾಗಿ ಮಿಂಚುತ್ತಿರುವ ಚಾರ್ಮಿ ರವರ ಒಟ್ಟು ಆಸ್ತಿಯ ಮೌಲ್ಯವೆಷ್ಟು ಗೊತ್ತೇ?? ಇಷ್ಟೊಂದು ಹೇಗೆ ಸಾಧ್ಯ ಎಂದ ನೆಟ್ಟಿಗರು
ತೆಲುಗು ಚಿತ್ರರಂಗದಲ್ಲಿ ನಟಿ ಚಾರ್ಮಿ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಆಕಸ್ಮಿಕವಾಗಿ ಕೆರಿಯರ್ ಗೆ ಫುಲ್ ಸ್ಟಾಪ್ ಇಟ್ಟ ನಟಿ ಚಾರ್ಮಿ ಈಗ ನಿರ್ಮಾಪಕಿ. ನಿರ್ದೇಶಕ ಪೂರಿ ಜಗನ್ನಾಥ್ ಜೊತೆ ಲೈಗರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಇಲ್ಲದಿದ್ದರು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಬಗ್ಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಅದಕ್ಕಾಗಿಯೇ ಅವರ ಸುತ್ತ ಹಲವು ರೂಪದರ್ಶಿಗಳು ಕಾಣಸಿಗುತ್ತಾರೆ. ಚಾರ್ಮಿ ತಮ್ಮ ವೃತ್ತಿ ಜೀವನದಲ್ಲಿ ಮಂತ್ರ, ಅನುಕೂಲ ಏಕ್ ರೋಜಾ, ಮಾಸ್, ರಾಖಿ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಉತ್ತಮ ಖ್ಯಾತಿಯನ್ನು ಗಳಿಸಿದರು.
ತೆಲುಗಿನಲ್ಲಿ ಮಾತ್ರವಲ್ಲದೆ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಚಾರ್ಮಿ 20 ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಪ್ರಸ್ತುತ ಚಾರ್ಮಿ ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಹಲವಾರು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಪೂರಿ ಅವರು ಮಾಡುತ್ತಿರುವ ಪ್ರತಿ ಚಿತ್ರದಲ್ಲೂ ಚಾರ್ಮಿ ಇರಲೇಬೇಕು.. ಚಾರ್ಮಿ ಪಕ್ಕದಲ್ಲಿದ್ದರೆ ಚೆನ್ನಾಗಿ ಬರುತ್ತೆ ಎಂಬ ನಂಬಿಕೆ ಪೂರಿ ಅವರಿಗಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಎರಡು ದಶಕಗಳಲ್ಲಿ ಚಾರ್ಮಿ ನಾಯಕಿಯಾಗಿ, ನಿರ್ಮಾಪಕಿಯಾಗಿ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದೇ ಇಂಡಸ್ಟ್ರಿಯಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.
ಚಾರ್ಮಿ ನಾಯಕಿಯಾಗಿದ್ದ ಕಾಲದಲ್ಲಿ ಪ್ರತಿ ಸಿನಿಮಾಗೆ ಸುಮಾರು ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದರು. 2019ರ ಲೆಕ್ಕಾಚಾರದ ಪ್ರಕಾರ ಚಾರ್ಮಿ ಅವರ ನಿವ್ವಳ ಮೌಲ್ಯ 2 ಮಿಲಿಯನ್ ಡಾಲರ್. ಅಲ್ಲದೆ ಚಾರ್ಮಿ ಬಳಿ ಲಕ್ಷ ಮೌಲ್ಯದ 3 ಕಾರುಗಳಿದ್ದು ಅದರಲ್ಲಿ 68 ಲಕ್ಷ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಎಕ್ಸ್ 3 ಸಿರೀಸ್, ಸುಮಾರು 2.5 ಕೋಟಿ ಖರ್ಚು ಮಾಡಿ ಬಿಎಂಡಬ್ಲ್ಯು 730 ಎಲ್.ಡಿ ಕಾರನ್ನು ಖರೀದಿಸಿದ್ದಾರೆ. 37 ಲಕ್ಷ ರೂಪಾಯಿಯ ಟೊಯೊಟಾ ಇನ್ನೋವಾ ಕ್ರಿಸ್ಟಾ ಖರೀದಿಸಿದ್ದಾರೆ. ಮುಂಬೈನಲ್ಲಿ ಮೂರ್ನಾಲ್ಕು ಅಪಾರ್ಟ್ ಮೆಂಟ್ ಕೂಡ ಹೊಂದಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್ ಗಚ್ಚಬೌಲಿಯಲ್ಲಿರುವ ಗೋಲ್ಡ್ ಎಡ್ಜ್ ಅಪಾರ್ಟ್ ಮೆಂಟ್ ನಲ್ಲು ಫ್ಲಾಟ್ ಖರೀದಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.