ಪುಷ್ಪ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡಂತಹ ಕಲಾವಿದರು ಯಾರ್ಯಾರು ಗೊತ್ತೆ?? ಇವರೆಲ್ಲರಿಗೂ ಆಫರ್ ಬಂದಿತ್ತು

24

Get real time updates directly on you device, subscribe now.

ಸುಕುಮಾರ್ ಅವರ ಪ್ಯಾನ್ ಇಂಡಿಯಾ ಚಿತ್ರ ಪುಷ್ಪಡಾಲ್ಜ್ ಅಲ್ಲು ಅರ್ಜುನ್ ನಾಯಕನಾಗಿದ್ದಾರೆ, ಇದು ಒಂದು ಸಿನಿಮಾ ಅಲ್ಲ,  ಟ್ರೆಂಡ್ ಸೆಟ್ಟರ್ ಎಂದೇ ಹೇಳಬಹುದು. ನಾಯಕ ವಿಲನ್ ಆಗಿದ್ದರರು ದೊಡ್ಡ ಹಿಟ್ ಆಗಬಹುದು ಎಂಬುದನ್ನು ಸಾಬೀತುಪಡಿಸಿದ ಸಿನಿಮಾ ಇದಾಗಿದೆ. ಮೇಲಾಗಿ ಅಲ್ಲು ಅರ್ಜುನ್ ಈ ಸಿನಿಮಾ ಮೂಲಕ ಬಾಲಿವುಡ್‌ ಗೆ ಎಂಟ್ರಿ ಕೊಟ್ಟು ಹೊಸ ಕ್ರೇಜ್ ಸೃಷ್ಟಿಸಿದ್ದಾರೆ. ಪುಷ್ಪ ಸಿನಿಮಾದ ಹಾಡುಗಳು, ದೃಶ್ಯಗಳು, ಸಂಭಾಷಣೆಗಳು ಮತ್ತು ಅಲ್ಲು ಅರ್ಜುನ್ ಮ್ಯಾನರಿಸಂ ಎಲ್ಲವೂ ಹೊಸದು. ಹಾಗಾಗಿಯೇ ಎಲ್ಲಾ ಭಾಷೆಗಳಲ್ಲಿಯೂ ಬ್ಲಾಕ್ ಬಸ್ಟರ್ ಹಿಟ್ ಆಯಿತು ಪುಷ್ಪ.

ಸಾಮಾನ್ಯ ಜನರಿಂದ ಹಿಡಿದು ಸ್ಟಾರ್ ಕ್ರಿಕೆಟಿಗರವರೆಗೂ ಈ ಸಿನಿಮಾ ಹಾಡುಗಳಿಗೆ ಸ್ಟೆಪ್ಸ್ ಹಾಕಿದ್ದಾರೆ ಅಂದ್ರೆ ಸಿನಿಮಾದ ವ್ಯಾಪ್ತಿ ಎಷ್ಟಿದೆ ಎಂದುಅರ್ಥವಾಗುತ್ತದೆ. ಬಿಡುಗಡೆಯಾದ ಎರಡ್ಮೂರು ತಿಂಗಳ ನಂತರ ಈ ಸಿನಿಮಾ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈಗ  ಪುಷ್ಪಸೀಕ್ವೆಲ್ ಕೂಡ ಭಾರಿ ಬಜೆಟ್ ನಲ್ಲಿ ಬರುತ್ತಿದೆ. ಆದರೆ ಇಷ್ಟು ದೊಡ್ಡ ಹಿಟ್ ಸಿನಿಮಾ ಆಗುವ ಮುನ್ನ ಕೆಲವು ಪಾತ್ರಗಳಿಗೆ ಬೇರೆ ಕಲಾಗಿದರನ್ನು ಆಯ್ಕೆ ಮಾಡಲಾಗಿತ್ತು. ಈ ಮೊದಲು ಈ ಪುಷ್ಪ ಸಿನಿಮಾಗೆ ಸಮಂತಾ ಅವರನ್ನು ನಾಯಕಿ ಎನ್ನಲಾಗಿತ್ತು.  ಆದರೆ ಆ ಸಂದರ್ಭ ಬೇರೆ ರೀತಿ ಇದ್ದ ಕಾರಣದಿಂದ ಸಮಂತಾ ನಿರಾಕರಿಸಿದರು ಆ ಮೂಲಕ ರಶ್ಮಿಕಾಗೆ ಅದೃಷ್ಟ ಖುಲಾಯಿಸಿದೆ.  ಅಲ್ಲದೇ ಬಾಲಿವುಡ್ ನಟಿಯರಾದ ನೋರಾ ಫತೇಹಿ ಮತ್ತು ದಿಶಾ ಪಟಾಣಿ ಅವರನ್ನು ಐಟಂ ಹಾಡಿಗೆ ಪರಿಗಣಿಸಲಾಗಿತ್ತು.

ಅವರು ಹೆಚ್ಚಿನ ಸಂಭಾವನೆಗೆ ಬೇಡಿಕೆಯಿಟ್ಟಾಗ ಸಮಂತಾಗೆ ಆ ಅವಕಾಶ ಸಿಕ್ಕಿತು. ಇದರಲ್ಲಿ ಶೇಕಾವತ್ ಭನ್ವರ್ ಸಿಂಗ್ ಪಾತ್ರಕ್ಕಾಗಿ ವಿಜಯ್ ಸೇತುಪತಿ ಅವರನ್ನು ಸಂಪರ್ಕಿಸಲಾಗಿತ್ತು,  ಆದರೆ ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಮತ್ತು ಡೇಟ್ಸ್ ಇಲ್ಲದ ಕಾರಣ ಅವರು ಫಹದ್ ಫಾಜಿಲ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಅಷ್ಟೇ ಅಲ್ಲದೆ, ಡಾಲಿ ಧನಂಜಯ್ ಮಾಡಿದ ಪಾತ್ರಕ್ಕೆ ನಟ ದರ್ಶನ್ ಅವರನ್ನು ಪರಿಗಣಿಸಲಾಗಿತ್ತು, ಆದರೆ ಡಿಬಾಸ್ ಆ ಪಾತ್ರವನ್ನು ಒಪ್ಪಿಕೊಳ್ಳದ ಕಾರಣ ಧನಂಜಯ್ ಅವರು ನಟಿಸಿದರು. ಇವರೆಲ್ಲರಿಗೂ ಅನಿರೀಕ್ಷಿತವಾಗಿ ಬಂದ ಈ ಸಿನಿಮಾ ಆಫರ್, ದೊಡ್ಡ ಹಿಟ್ ಆಗಿದೆ. ಈ ಪಾತ್ರಗಳನ್ನು ಮಿಸ್ ಮಾಡಿಕೊಂಡವರು ದುರಾದೃಷ್ಟವಂತರು ಎನ್ನುತ್ತಿದ್ದಾರೆ ನೆಟ್ಟಿಗರು.

Get real time updates directly on you device, subscribe now.