ತೆಲುಗಿನಲ್ಲಿ ಕೃತಿ ಶೆಟ್ಟಿ ರವರಿಗೆ ಮತ್ತೊಂದು ಶಾಕ್: ಕನ್ನಡದ ಕುವರಿಗೆ ಅದೃಷ್ಟ ಮುಗಿದು ಹೋಯಿತೇ?? ಟಾಪ್ ನಟಿಯಾಗಿ ಮಿಂಚಿದ್ದ ಈಕೆಯ ಭವಿಷ್ಯವೇ ಅಂತ್ಯವೇ??

14

Get real time updates directly on you device, subscribe now.

ಚಿತ್ರರಂಗದಲ್ಲಿ ಕೆಲವೊಮ್ಮೆ ಯಶಸ್ಸು ಬಂದಂತೆ ಅದೇ ವೇಗದಲ್ಲಿ ಕೆರಿಯರ್ ಹಾಳಾಗಲು ಸಹ ಪ್ರಾರಂಭವಾಗುತ್ತದೆ. ಸೋಲು ಒಂದು ಸಿನಿಮಾಗಾದರೆ ರವಾಗಿಲ್ಲ. ಆದರೆ ಹೆಚ್ಚು ಸೋಲು ಕಾಣಲು ಶುರುವಾದರೆ, ವೃತ್ತಿಜೀವನವು ಅಪಾಯದ ವಲಯದಲ್ಲಿದೆ ಎಂದು ಅರ್ಥ.ಕೃತಿ ಶೆಟ್ಟಿ ಈಗ ಅದೇ ಹಂತದಲ್ಲಿದ್ದಾರೆ. ಟಾಲಿವುಡ್ ನಲ್ಲಿ ಚೊಚ್ಚಲ ಚಿತ್ರದ ಯಶಸ್ಸಿನೊಂದಿಗೆ ಬಿರುಗಾಳಿಯ ವೇಗದಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದಾರೆ ಕೃತಿ. ಎರಡನೇ ಸಿನಿಮಾದಿಂದಲೇ ಸ್ಟಾರ್ ಹೀರೋಗಳ ಎದುರು ನಟಿಸುವ ಅವಕಾಶ ಗಿಟ್ಟಿಸಿಕೊಂಡು ಇಂಡಸ್ಟ್ರಿಯಲ್ಲಿ ಮೋಸ್ಟ್ ವಾಂಟೆಡ್ ಸುಂದರಿಯರ ಪಟ್ಟಿಗೆ ಸೇರಿಕೊಂಡರು.

ಉಪ್ಪೇನದಲ್ಲಿ ಕ್ಲಾಸಿಯಾಗಿ ಕಂಡರೂ ಗ್ಲಾಮರಸ್ ಪಾತ್ರಗಳಿಗೂ ಸೂಟ್ ಆಗಬಹುದು ಎನ್ನುವುದನ್ನು ನಾನಿ ಅವರ ಶ್ಯಾಮ್ ಸಿಂಘಾ ರಾಯ್ ಚಿತ್ರದಲ್ಲಿ ಸಾಬೀತುಪಡಿಸಿದರು.ಆ ನಂತರ ಈ ವರ್ಷದ ಆರಂಭದಲ್ಲಿ ಬಂಗಾರ್ರಾಜು ಚಿತ್ರದ ಮೂಲಕ ಉತ್ತಮ ಯಶಸ್ಸು ಕಂಡದು. ಸರಪಂಚ್ ನಾಗಲಕ್ಷ್ಮಿ ಪಾತ್ರದಲ್ಲಿ ನಟಿಸಿ ಉತ್ತಮ ಅಂಕ ಗಳಿಸಿದರು ಕೃತಿ. ಬೇರೆ ಭಾಷೆಗಳಲ್ಲಿ ತನ್ನ ಕೆಲಸ ಮುಂದುವರೆಸುವ ಆಲೋಚನೆಯಿಂದ, ರಾಮ್ ಅವರೊಡನೆ ದಿ ವಾರಿಯರ್ ಎಂಬ ದ್ವಿಭಾಷಾ ಚಲನಚಿತ್ರವನ್ನು ಮಾಡಿದರು. ಈ ಸಿನಿಮಾದ ಯಶಸ್ಸಿನಿಂದ ಆಕೆ ಕಾಲಿವುಡ್ ನಲ್ಲಿ ಬ್ಯುಸಿಯಾಗಲು ಬಯಸಿದ್ದರು. ಆದರೆ ಈ ಸಿನಿಮಾ ಫ್ಲಾಪ್ ಆದ ಕಾರಣ ಕೃತಿ ಅವರ ಆಶಯಗಳೆಲ್ಲವೂ ಭರವಸೆಯಾಗಿಯೇ ಉಳಿದಿವೆ. ಮಾಚರ್ಲಾ ಸಿನಿಮಾ ಸಹ ಫ್ಲಾಪ್ ಲಿಸ್ಟ್ ಗೆ ಸೇರಿದೆ.

ಸದ್ಯದ ಪರಿಸ್ಥಿತಿಯಲ್ಲಿ ರಿವ್ಯೂ ದೊಡ್ಡ ಬ್ಲಾಕ್ ಬಸ್ಟರ್ ಆಗಿದ್ದರೆ ಮಾತ್ರ ಪ್ರೇಕ್ಷಕರು ಥಿಯೇಟರ್ ಗೆ ಬರುವ ಯೋಚನೆಯಲ್ಲಿದ್ದಾರೆ. ಆ ರೀತಿ ನೋಡುವುದಾದರೆ ಕೃತಿ ಈಗ ಬಹಳ ಕಷ್ಟದ ಸಮಯದಲ್ಲಿದ್ದಾರೆ. ಕೃತಿ ಶೆಟ್ಟಿ ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಇಂದ್ರಗಂಟಿ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ಸೆಪ್ಟೆಂಬರ್‌ ನಲ್ಲಿ ಬಿಡುಗಡೆಯಾಗಲಿದೆ. ವೆಂಕಟ್ ಪ್ರಭು ಹಾಗೂ ಚೈತನ್ಯ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಕೃತಿ. ನಿಜವಾಗಿ ಹೇಳುವುದಾದರೆ, ಕೃತಿ ಅವರ ಭವಿಷ್ಯವು ಈ ಚಿತ್ರಗಳ ಮೇಲೆ ಅವಲಂಬಿತವಾಗಿದೆ. ಅವರ ಮೇಲೆ ಕ್ರೇಜ್ ಹೆಚ್ಚಾಗಿರುವ ಕಾರಣ, ಕೃತಿ ಇತ್ತೀಚೆಗೆ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಈ ಸಮಯದಲ್ಲಿ ಮಾಡಿದ ಎಲ್ಲಾ ಸಿನಿಮಾಗಳು ಫ್ಲಾಪ್ ಆಗುತ್ತಿದ್ದು, ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.