ಕೊನೆಗೂ ತನ್ನ ಬಾಯ್ ಫ್ರೆಂಡ್ ಕುರಿತು ಎಲ್ಲವನ್ನು ಹೊರಗಿಟ್ಟು ಸತ್ಯ ಒಪ್ಪಿಕೊಂಡ ಅಧ್ಯಕ್ಷ ಹುಡುಗಿ ಹೆಬ್ಬ ಪಟೇಲ್: ಯಾರು ಅಂತೇ ಗೊತ್ತೇ??
ನಟಿ ಹೆಬ್ಬಾ ಪಟೇಲ್ ಹುಡುಗರ ಹಾಟ್ ನಟಿಯರಲ್ಲಿ ಒಬ್ಬರು. ಕುಮಾರಿ 21 ಎಫ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಮುದ್ದಾದ ನಟಿ ತಮ್ಮ ಸೌಂದರ್ಯದಿಂದಲೇ ಹಾಟ್ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ಅಧ್ಯಕ್ಷ ಸಿನಿಮಾದಲ್ಲಿ ನಟಿಸಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದ ಹೆಬ್ಬಾ ಪಟೇಲ್ ಗೆ ನಿರೀಕ್ಷಿತ ಸ್ಟಾರ್ ಪಟ್ಟ ಸಿಗುತ್ತಿಲ್ಲ. ಸದ್ಯ ಈ ಸ್ಟಾರ್ ಬ್ಯೂಟಿ ಒಡೆಲಾ ರೈಲ್ವೇ ಸ್ಟೇಷನ್, ಸಮನವಾಲ, ವಲ್ಲನ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೆಬ್ಬಾ ಪಟೇಲ್ ಮುಂಬರುವ ಚಿತ್ರಗಳೊಂದಿಗೆ ಮತ್ತೆ ಫಾರ್ಮ್‌ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.
ಆದರೆ ಇತ್ತೀಚೆಗಷ್ಟೇ ಖಾಸಗಿ ವಾಹಿನಿಯೊಂದಕ್ಕೆ ಹೆಬ್ಬಾ ಪಟೇಲ್ ಸಂದರ್ಶನ ನೀಡಿದ್ದು, ಡೇಟಿಂಗ್, ಪ್ರೀತಿ, ಮದುವೆ ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. “ಈ ಹಿಂದೆ ನಾನು ಅವರೊಂದಿಗೆ ಡೇಟಿಂಗ್ ಮಾಡಿದ್ದೇನೆ ಆದರೆ ಅವರು ಇಂಡಸ್ಟ್ರಿಯವರಲ್ಲ..” ಎಂದು ಹೆಬ್ಬಾ ಪಟೇಲ್ ಹೇಳಿದ್ದಾರೆ. “ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಆತನೊಂದಿಗೆ ಸಂಬಂಧ ಮುರಿದುಕೊಂಡೆ..” ಎಂದಿದ್ದಾರೆ ಹೆಬ್ಬಾ. ಆಗ ಬ್ಯುಸಿಯಾಗಿದ್ದೆ, ಅದರ ಬಗ್ಗೆ ಹೆಚ್ಚು ಯೋಚನೆ ಮಾಡದೆ ಈಗ ಒಂಟಿಯಾಗಿದ್ದೇನೆ ಎಂದು ಸಹ ಹೇಳಿದ್ದಾರೆ.

ಭಾವಿ ಪತಿ ಹೇಗಿರಬೇಕು ಎಂದು ಕೇಳಿದಾಗ, “ನಾನು ತುಂಬಾ ಮಾತನಾಡುತ್ತೇನೆ, ಆದ್ದರಿಂದ ನನಗೆ ಕಡಿಮೆ ಮಾತನಾಡುವ ಹುಡುಗ ಬೇಕು” ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಸೆನ್ಸಿಟಿವ್ ಹಾಸ್ಯ ಸ್ವಭಾವ ಹೊಂದಿರಬೇಕು, ಅತಿಯಾದ ಆತ್ಮವಿಶ್ವಾಸ ಹೊಂದಿರಬಾರದು, ನನ್ನನ್ನು ವಿಶೇಷವಾಗಿ ನೋಡಿಕೊಳ್ಳಬೇಕು ಎಂದಿದ್ದಾರೆ. ಹೆಬ್ಬಾ ಪಟೇಲ್ ಅವರ ಇತ್ತೀಚಿನ ಸಿನಿಮಾ ಗೀತಾ ಇದೇ ತಿಂಗಳ 26 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಈ ಸಿನಿಮಾದಲ್ಲಿ ಜನಪ್ರಿಯ ನಟ ಸುನೀಲ್ ಕೂಡ ನಟಿಸುತ್ತಿದ್ದಾರೆ. ಈ ಬ್ಯೂಟಿಫುಲ್ ಸ್ಟಾರ್ ಒಂದೆಡೆ ಸಿನಿಮಾ, ಇನ್ನೊಂದೆಡೆ ವೆಬ್ ಸೀರಿಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.