ಮದುವೆಯಾಗಿದ್ದ ಪುರುಷನನ್ನು ಪ್ರೀತಿಸಿ ಮದುವೆಯಾಗಿದ್ದ ಪ್ರಿಯಾಮಣಿಗೆ ಶಾಕ್: ವಿಚ್ಚೇದನ ಪಡೆಯುವುದು ಫಿಕ್ಸ್: ಕಾರಣ ಏನು ಅಂತೇ ಗೊತ್ತೇ??
ಒಂದು ಕಾಲದಲ್ಲಿ ತನ್ನ ಚೆಲುವಿನಿಂದ ಹುಡುಗರ ಎದೆಯಲ್ಲಿ ರೈಲುಗಾಡಿ ಓಡುವಂತೆ ಮಾಡಿದ ಸುಂದರ ಮುದ್ದು ಮುದ್ದು ನಟಿ ಪ್ರಿಯಾಮಣಿ. ಈ ನಡುವೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಪ್ರಿಯಾಮಣಿ ಒಂದೆಡೆ ಸಿನಿಮಾಗಳಲ್ಲಿ ನಟಿಸಿ ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಮತ್ತೊಂದೆಡೆ ಹಿರಿತೆರೆಯಲ್ಲಿ ತಮ್ಮ ಕೆಲಸ ಮುಂದುವರೆಸಿದ್ದಾರೆ. ನಾಯಕಿಯಾಗಿ ಸಂಭಾವನೆ ಪಡೆಯುವ ಸಮಯದಲ್ಲಿ ಪ್ರಿಯಾಮಣಿ ಅವರು ಮುಸ್ತಫಾ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಆದರೆ ಅವರಿಗೆ ಆಗಲೇ ಮದುವೆಯಾಗಿತ್ತು. ಆದರೆ, ಪ್ರಿಯಾಮಣಿಗೆ ಮುಸ್ತಫಾ ಮೇಲಿನ ಪ್ರೀತಿಯಿಂದಾಗಿ ಇಬ್ಬರೂ ಪ್ರೀತಿಸಿ ಮದುವೆಯಾದರು.
ಆದರೆ ಕಾರಣಾಂತರಗಳಿಂದ ಪ್ರಿಯಾಮಣಿ ದಾಂಪತ್ಯ ಮುರಿದುಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಇದರಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆ ಎಂಬುದಕ್ಕೆ ಸ್ಪಷ್ಟತೆ ಇಲ್ಲವಾದರು ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಕ್ಕಳ ವಿಚಾರವಾಗಿ ಇವರಿಬ್ಬರು ಜಗಳ ಮಾಡಿಕೊಂಡಿದ್ದಾರೆ ಎಂಬುದು ಒಳಗಿನ ಮಾತು. ಈ ನಡುವೆ ತರುಣ್ ಮತ್ತು ಪ್ರಿಯಾಮಣಿ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ನವ ವಸಂತಂ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರಿಗೂ ಪ್ರೀತಿ ಹುಟ್ಟಿತು. ಆದರೆ ತರುಣ್ ತಾಯಿ ಕೂಡ ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಿಯಾಮಣಿ ಸದ್ಯ ಬೆರಳೆಣಿಕೆಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 2003ರಲ್ಲಿ ಬೆಳ್ಳಿತೆರೆಗೆ ಪರಿಚಯವಾದ ಪ್ರಿಯಾಮಣಿ ಇಂದಿಗೂ ತಮ್ಮ ಛಾಪನ್ನು ಮುಂದುವರಿಸಿದ್ದಾರೆ. ತಮ್ಮ ಸೌಂದರ್ಯ ಮತ್ತು ನಟನೆಯಿಂದ ರಾಷ್ಟ್ರಪ್ರಶಸ್ತಿ ಹಾಗೂ ಸಾಕಷ್ಟು ಅಭಿಮಾನಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಿಯಾಮಣಿ ಸಿನಿಮಾ ಮಾತ್ರವಲ್ಲದೆ ವೆಬ್ ಸಿರೀಸ್ ನಲ್ಲೂ ಫೇಮಸ್. ಇವರು ನಟಿಸಿದ ದಿ ಫ್ಯಾಮಿಲಿ ಮ್ಯಾನ್ ಎರಡು ಸೀಸನ್ ಗಳು ದೇಶಾದ್ಯಂತ ಒಳ್ಳೆಯ ಹೆಸರು ಗಳಿಸಿತು. ಪ್ರಿಯಾಮಣಿ ಅನೇಕ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಮತ್ತು ಶಾರುಖ್ ಖಾನ್ ರಂತಹ ಸ್ಟಾರ್ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಈ ನಡುವೆ ಮುಸ್ತಫಾ ರಾಜ್ ಅವರನ್ನು ವಿವಾಹವಾದ ಪ್ರಿಯಾಮಣಿ ಪ್ರಸ್ತುತ ಚಲನಚಿತ್ರಗಳು ಮತ್ತು ವೆಬ್ ಸೀರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ.