ದರ್ಶನ್ ವಿರುದ್ಧ ಒಂದರ ಮೇಲಂತೆ ಅಸ್ತ್ರ ಪ್ರಯೋಗ: ಗಂಡ ಹೆಂಡತಿ ನಡುವೆ ಸರಿ ಇಲ್ಲ ಎಂದವರಿಗೆ ತಿರುಗೇಟು ಕೊಟ್ಟ ದರ್ಶನ್ ಮಾಡಿದ್ದೇನು ಗೊತ್ತೇ??

7

Get real time updates directly on you device, subscribe now.

ಡಿಬಾಸ್ ದರ್ಶನ್ ಅಂದರೆ ಇಡಿ ಕರ್ನಾಟಕದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ದರ್ಶನ್ ಅವರು ಸಿನಿಮಾವನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಜನರಿಗೆ ಸಹಾಯ ಮಾಡುವ ವಿಚಾರಗಳಿಂದಲೂ ಡಿಬಾಸ್ ದರ್ಶನ್ ಸಾಕಷ್ಟು ಬಾರಿ ಸುದ್ದಿಯಾಗುತ್ತಾರೆ. ಆದರೆ ದರ್ಶನ್ ಅವರು ವೈಯಕ್ತಿಕ ಜೀವನದ ವಿಚಾರಗಳಿಂದ ಸಹ ಹೆಚ್ಚು ಸುದ್ದಿಯಾಗಿದ್ದಾರೆ. ದಾಂಪತ್ಯ ಜೀವನ ಅಷ್ಟೇನು ಚೆನ್ನಾಗಿಲ್ಲ ಎಂದು ಆಗಾಗ ಕಾಂಟ್ರಾವರ್ಸಿ ಆಗುತ್ತಲೇ ಇರುತ್ತದೆ. ಕೆಲವು ವರ್ಷಗಳ ಹಿಂದೆ ಪತ್ನಿಹ ವಿಚಾರದಲ್ಲಿ ದರ್ಶನ್ ಅವರು ಜೈಲಿಗೆ ಸಹ ಹೋಗಿ ಬಂದರು.

ಆದರೆ ಅದೆಲ್ಲವು ಬಹಳ ಹಳೆಯ ವಿಚಾರ. ಡಿಬಾಸ್ ದರ್ಶನ್ ಅವರ ವೈಯಕ್ತಿಕ ಜೀವನದ ವಿಚಾರ ಈಗ ಮತ್ತೊಮ್ಮೆ ಚರ್ಚೆ ಆಗುತ್ತಿದೆ. ದರ್ಶನ್ ಅವರು ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವುದಿಲ್ಲ, ವಿಜಯಲಕ್ಷ್ಮಿ ಅವರು ಮಗನ ಪಾಲನೆ ಪೋಷಣೆ ನೋಡಿಕೊಂಡು ಇರುತ್ತಾರೆ. ದರ್ಶನ್ ಅವರು ಮನೆಯವರ ಜೊತೆಗೆ ಇರುವುದಿಲ್ಲ, ಅವರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳು ಈಗ ಕೇಳಿಬರುತ್ತಿದ್ದು, ಅಂತಹ ಮಾತುಗಳಿಗೆ ದರ್ಶನ್ ಅವರು ಈಗ ಖಡಕ್ ಉತ್ತರ ನೀಡಿದ್ದಾರೆ. ದರ್ಶನ್ ಅವರು ಮತ್ತು ವಿಜಯಲಕ್ಷ್ಮಿ ಅವರು ಈಗ ರಾಜ ರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ಜೊತಯಾಗಿ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ ದರ್ಶನ್ ಅವರು ಪತ್ನಿ ಮತ್ತು ಮಗನ ಜೊತೆಗೆ ಹೆಚ್.ಡಿ ಕೋಟೆ ಸಮೀಪದ ಕಬಿನಿ ಮತ್ತು ಕರ್ನಾಟಕದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಈ ಮೂಲಕ ದರ್ಶನ್ ಅವರು ತಮ್ಮ ಕುಟುಂಬದ ಜೊತೆಗೆ ಚೆನ್ನಾಗಿರುವುದಾಗಿ ತಿಳಿಸಿದ್ದಾರೆ. ದರ್ಶನ್ ಅವರು ಕೆಲವು ತಿಂಗಳುಗಳಿಂದ ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಾಗುತ್ತಲೇ ಇದ್ದಾರೆ, ಇದೀಗ ಅವರು ಅಭಿನಯಿಸಿರುವ ಕ್ರಾಂತಿ ಸಿನಿಮಾ ಬಿಡುಗಡೆಗೆ ಸಿದ್ಧವಿದ್ದು, ಇವರ ವೈಯಕ್ತಿಕ ಜೀವನದ ಬಗ್ಗೆ ಇಂತಹ ಗಾಸಿಪ್ ಒಂದು ಕೇಳಿ ಬಂದಿತ್ತು. ಅದಕ್ಕೀಗ ಉತ್ತರ ಸಹ ಸಿಕ್ಕಿದೆ.

Get real time updates directly on you device, subscribe now.