ಸಮಂತಾ ಮತ್ತೆ ಮುಂದಕ್ಕೆ ಬಂದರೆ ಏನು ಮಾಡುತ್ತೀರಿ ಎಂದಾಗ ಷಾಕಿಂಗ್ ಉತ್ತರ ನೀಡಿದ ನಾಗ ಚೈತನ್ಯ. ಹೇಳಿದ್ದೇನು ಗೊತ್ತೇ??
ಟಾಲಿವುಡ್ ನ ಮುದ್ದಾದ ಜೋಡಿ ನಾಗ ಚೈತನ್ಯ ಸಮಂತಾ ಕಳೆದ ವರ್ಷ ಅಕ್ಟೋಬರ್ 2 ರಂದು ಅನಿರೀಕ್ಷಿತವಾಗಿ ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ. ಇವರಿಬ್ಬರ ವಿಚ್ಛೇದನ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಿಚ್ಛೇದನದ ನಂತರ, ಅವರ ಬಗೆಗಿನ ಯಾವುದೇ ಸುದ್ದಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ನಾಗ ಚೈತನ್ಯ ಮೇಲೆ ಸಮಂತಾ ಪರೋಕ್ಷವಾಗಿ ಕಿಡಿಕಾರಿದ್ದರು. ಈ ಬಗ್ಗೆ ಚೈತನ್ಯ ಅಭಿಮಾನಿಗಳು ಸಮಂತಾ ಅವರನ್ನು ಟ್ರೋಲ್ ಮಾಡಿದ್ದಾರೆ. ಆದರೆ ಚೈತನ್ಯ ಅವರು ಸಮಂತಾ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಚೈತನ್ಯ ಅವರು ರಾಪಿಡ್ ಫೈರ್ ರೌಂಡ್ ನಲ್ಲಿ ಸಮಂತಾ ಭೇಟಿಯಾದರೆ ಏನು ಮಾಡುತ್ತೀರಾ? ಎಂದು ಆಂಕರ್ ಕೇಳಿದರು..
ಆಕೆಗೆ ಹಾಯ್ ಹೇಳುತ್ತೇನೆ ಎಂದ ಚೈತನ್ಯ, ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ, ಎರಡರ ನಡುವೆ ಸ್ಪಷ್ಟವಾದ ತಡೆಗೋಡೆಗಳನ್ನು ಹಾಕಿದ್ದಾರೆ. ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಈ ಸಿನಿಮ ಪ್ರಚಾರದ ಭಾಗವಾಗಿ ನಾಗ ಚೈತನ್ಯ ಈ ಕಮೆಂಟ್ ಗಳನ್ನು ಮಾಡಿದ್ದಾರೆ. “ಇತ್ತೀಚೆಗೆ, ನಾವು ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದೇವೆ. ಆ ಬಗ್ಗೆ ಎಲ್ಲರಿಗೂ ಮುಕ್ತವಾಗಿ ಹೇಳಿದ್ದೆವು. ಅಗಲಿದ ನಂತರ ಅವರು ಯಾರ ಜೀವನವನ್ನು ನೋಡಿಕೊಳ್ಳುತ್ತಿದ್ದಾರೆ?
ನಾವು ವಿಚ್ಛೇದಿತರಾಗಿದ್ದರೂ, ಪರಸ್ಪರ ಗೌರವವ ಹೊಂದಿದ್ದೇವೆ. ನಾನು ಯಾವಾಗಲೂ ಸಮಂತಾ ಅವರನ್ನು ಗೌರವಿಸುತ್ತೇನೆ. ಸ್ಯಾಮ್ ಮಾಡುವ ಪ್ರತಿಯೊಂದು ಕೆಲಸವನ್ನು ನಾನು ಎದುರು ನೋಡುತ್ತಿದ್ದೇನೆ. ನಾವು ಬೇರ್ಪಟ್ಟ ನಂತರ, ನನ್ನ ಮೂರು ಸಿನಿಮಾಗಳು ಬಿಡುಗಡೆಯಾದವು. ಆದರೆ ಎಲ್ಲರೂ ನಮ್ಮ ವಿಚ್ಛೇದನದ ಬಗ್ಗೆಯೇ ಮಾತನಾಡುತ್ತಿದ್ದಾರೆ,’’ ಎಂದಿದ್ದಾರೆ ಚೈತನ್ಯ. ಮೊದಲು ಯೇ ಮಾಯ ಚೇಸಾವೇ ಸಿನಿಮಾದಲ್ಲಿ ನಟಿಸಿದ್ದ ನಾಗಚೈತನ್ಯ ಸಮಂತಾ ಜೋಡಿ ಮದುವೆಯ ನಂತರ ಮಜಿಲಿ ಸಿನಿಮಾದಲ್ಲಿ ನಟಿಸಿದ್ದರು. ನಂತರ ಇಬ್ಬರು ಸಹ ವೃತ್ತಿಜೀವನದ ಮೇಲೆ ಗಮನ ಹರಿಸಿದರು. ವಿಚ್ಛೇದನದ ನಂತರ ನಾಗಚೈತನ್ಯ ಮತ್ತು ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.