ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಪ್ರೀತಿಯ ಬಗ್ಗೆ ಪಾಠ ಮಾಡಿದ ಸೋನು ಶ್ರೀನಿವಾಸ್ ಗೌಡ: ಪ್ರೀತಿಯ ಬಗ್ಗೆ ಎಲ್ಲರಿಗೂ ಹೇಳಿದ್ದೇನು ಗೊತ್ತೇ??

32

Get real time updates directly on you device, subscribe now.

ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಲ್ಲಿ ತಾವು ನೀಡುವ ಹೇಳಿಕೆಗಳಿಂದ ಭಾರಿ ಸುದ್ದಿಯಲ್ಲಿರುತ್ತಾರೆ. ಸೋನು ನೀಡುವ ಹೇಳಿಕೆಗಳ ಬಗ್ಗೆ ಚರ್ಚೆಗಳು ಸಹ ಜೋರಾಗಿಯೇ ನಡೆಯುತ್ತದೆ. ಮನೆಗೆ ಹೋಗಿ ಮೂರು ದಿನಗಳಲ್ಲಿ ಮನೆಯ ಸ್ಪರ್ಧಿಗಳ ಜೊತೆಗೆ ಜಗಳವನ್ನು ಮಾಡಿಕೊಂಡರು ಸೋನು. ಈ ಹುಡುಗಿ ಮಾತನಾಡುವುದನ್ನು ಕೇಳಿ, ಹಲವರು ಸೋನು ಶ್ರೀನಿವಾಸ್ ಗೌಡ ಇನ್ನು ಚೈಲ್ಡ್ ಹಾಗೆ ಆಡುತ್ತಾರೆ ಎಂದು ಮನೆಯೊಳಗಿನ ಸ್ಪರ್ಧಿಗಳು ಭಾವಿಸುತ್ತಿದ್ದಾರೆ.

ಇನ್ನು ಸೋನು ಮಾತನಾಡುವುದು ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುವುದು ಕೆಲವು ಸದಸ್ಯರ ಅಭಿಪ್ರಾಯ. ಅದು ಇದು ಮಾತನಾಡಿ ಜಗಳ ಅಡುವುದರ ಜೊತೆಗೆ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಲ್ಲಿ ಪ್ರೀತಿಯ ಪಾಠ ಮಾಡಿದ್ದಾರೆ. ಸೋನು ಪ್ರೀತಿ ಪಾಠ ಕೇಳಿ, ಮನೆಯ ಒಳಗಿನ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಪ್ರೀತಿ ಬಗ್ಗೆ ಸೋನು ಹೇಳಿರುವುದು ಹೀಗೆ.. “ಕೆಲವರು ನಿಜವಾಗಿಯೂ ಲವ್ ಮಾಡ್ತಾರೆ. ಇನ್ನು ಕೆಲವರು ಟೈಮ್ ಪಾಸ್ ಗಾಗಿ ಲವ್ ಮಾಡ್ತಾರೆ. ಪ್ರೀತಿ ಮಾಡುವವರ ನಡುವೆ ಜಗಳ ಆದಾಗ, ಅವಳೇ ಬರಲಿ ಅವನೇ ಬರಲಿ ಅಂತ ಈಸಿ ಆಗಿ ತೆಗೆದುಕೊಳ್ಳುತ್ತಾರೆ.

ಕೆಲವರು ಮನಸ್ಸಿನಿಂದ ನಿಜವಾಗಲು ಲವ್ ಮಾಡ್ತಾರೆ. ಪ್ರೇಮಿಗಳ ಮಧ್ಯೆ ಜಗಳ ಆದಾಗ, ಬೇರೆಯವರ ಸಹಾಯ ತೆಗೆದುಕೊಂಡು ಸರಿಪಡಿಸಿಕೊಳ್ಳುತ್ತಾರೆ. ಗಂಭೀರವಾಗಿ ಲವ್ ಮಾಡುತ್ತಿರುವವರು ಮನೆಯವರಿಗೆ ಪ್ರೀತಿ ವಿಚಾರ ಹೇಳಿ ಮದುವೆಯಾಗಲು ನಿರ್ಧಾರ ಮಾಡುತ್ತಾರೆ..” ಎಂದಿದ್ದಾರೆ ಸೋನು. ಆಗ ಜಯಶ್ರೀ ಆರಾಧ್ಯ, “ನನಗೆ ಪ್ರತಿ ಸಾರಿ ಲವ್ ಆದಾಗಲು ನನ್ನ ಅಮ್ಮನ ಜೊತೆಗೆ ಹೇಳಿಕೊಳ್ಳುತ್ತಿದ್ದೆ. ಆದರೆ ನನಗೆ ಮದುವೆ ಆಗಲೇ ಇಲ್ಲ..” ಎಂದು ಹೇಳಿದ್ದಾರೆ. ಆಗ ಸೋನು, “ನೀವು ಸೀರಿಯಸ್ ಆಗಿ ಲವ್ ಮಾಡಿದ್ರಿ, ಆಗ ಬ್ರೇಕಪ್ ಆಗುತ್ತೆ ನಿಮಗೆ ಗೊತ್ತಿರಲಿಲ್ಲ..” ಎಂದು ಹೇಳಿದ್ದಾರೆ. ಸೋನು ಹೇಳಿದ ಈ ಮಾತುಗಳನ್ನು ಕೇಳಿ, ಮನೆಯವರ ನಕ್ಕಿದ್ದು, ನೀನು ಹೇಳಿದ ಮಾತು ಅರ್ಥ ಆಯಿತು ಎಂದು ರಾಕೇಶ್ ತಮಾಷೆ ಮಾಡಿದ್ದಾರೆ.

Get real time updates directly on you device, subscribe now.