ಉಲ್ಟಾ ಹೊಡೆದ ಸೋನು ಗೌಡ: ಮತ್ತೊಂದು ವಿಡಿಯೋ ಲೀಕ್ ಬಗ್ಗೆ ಬೇರೆಯದ್ದೇ ಹೇಳಿ ಕೊನೆಗೆ ಹೇಳಿದ್ದೇನು ಗೊತ್ತೇ??
ಬಿಗ್ ಬಾಸ್ ಶೋ ಶುರುವಾದ ಮೊದಲ ವಾರದಲ್ಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ನಾನು ಯಾರು ಎನ್ನುವ ಟಾಸ್ಕ್ ಒಂದನ್ನು ನೀಡಿದರು. ಈ ಟಾಸ್ಕ್ ನ ಪ್ರಕಾರ, ಮನೆಯ ಸ್ಪರ್ಧಿಗಳು ತಮ್ಮ ಜೀವನದ ಅತ್ಯಂತ ಮುಖ್ಯವಾದ ಘಟನೆಗಳು, ತಮಗೆ ದುಃಖ ನೀಡಿದ ಘಟನೆಗಳನ್ನು ಸಹ ಹೇಳಿಕೊಂಡರು. ಈ ಟಾಸ್ಕ್ ನಲ್ಲಿ ಸೋನು ಗೌಡ ಸಹ ಸೋಷಿಯಲ್ ಮೀಡಿಯಾದಲ್ಲಿ ತಾವು ನೋಡಿದ ಟ್ರೋಲ್ ಗಳು, ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳ ಬಗ್ಗೆ ಮಾತನಾಡಿ, ಶಾಕಿಂಗ್ ವಿಚಾರ ಶೇರ್ ಮಾಡಿಕೊಂಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಹೇಳಿರುವ ಪ್ರಕಾರ, ಮೂರು ವರ್ಷ ಪರಿಚಯವಿದ್ದ ಹುಡುಗ, ಎಂಎಸ್ಸಿ ಮುಗಿಸಿ ಅಮೆರಿಕಾಗೆ ಹೋದ ನಂತರ, ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ, ಪ್ರೊಪೋಸ್ ಮಾಡಿ ಸೋನು ಸಹ ಒಪ್ಪಿಕೊಂಡಿದ್ದಾರೆ. ರಿಲೇಶನ್ಷಿಪ್ ಶುರುವಾದ ಬಳಿಕ, ಆ ಹುಡುಗ ವಿಡಿಯೋ ಕಾಲ್ ಮಾಡಲು ಹೇಳಿ, ಅದರ ವಿಡಿಯೋವನ್ನು ರೆಕಾರ್ಡ್ ಮಾಡಿ, ಸೋನು ಗೆ ಬ್ಲ್ಯಾಕ್ ಮೇಲ್ ಮಾಡಿ, ನೀನು ಯಾರನ್ನು ಮದುವೆ ಆಗೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿ, ಆ ವಿಡಿಯೋ ಶೇರ್ ಮಾಡಿದ್ದಾನೆ, ಇದರಿಂದ ಸೋನು ಗು ಶಾಕ್ ಆಗಿದ್ದು, ನಂತರ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾನೆ.
ಅದನ್ನು ನೋಡಿ ಸೋನುಗು ಶಾಕ್ ಆಗಿ, ತಮ್ಮ ತಾಯಿಯ ಬಳಿ ಹೋಗಿ, ತನ್ನ ತಪ್ಪನ್ನು ಒಪ್ಪಿಕೊಂಡು ಇನ್ನೊಂದು ಸಾರಿ ಆ ರೀತಿ ಮಾಡುವುದಿಲ್ಲ ಎಂದು ಹೇಳಿ, ಕಣ್ಣೀರು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಂದು ಶಾಕಿಂಗ್ ವಿಚಾರವನ್ನು ಸಹ ರಿವೀಲ್ ಮಾಡಿದ್ದಾರೆ ಸೋನು. ಆ ಹುಡುಗನ ಬಳಿ ಇನ್ನೊಂದು ವಿಡಿಯೋ ಸಹ ಇದ್ದು, ಅದನ್ನು ಯಾವಾಗ ಅದನ್ನ ಲೀಕ್ ಮಾಡುತ್ತಾನೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಸೋನು. ಈ ಘಟನೆ ಇಂದಾಗಿ, ಸೋನು ತನ್ನ ತಂದೆಯ ಮನೆಯವರ ಜೊತೆಗೆ ಮಾತನಾಡಿರಲಿಲ್ಲವಂತೆ. ಬಹಳ ಅವಮಾನ ಅನುಭವಿಸಿದ್ದರಂತೆ ಸೋನು.