ಸೌತ್ ಮಿಸ್ ಇಂಡಿಯಾ ರೇಸ್ ನಲ್ಲಿ ಮಿಂಚುತ್ತಿರುವ ಈ ಚೆಲುವೆ ಯಾರು ಗೊತ್ತೇ?? ಈಕೆಯ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

26

Get real time updates directly on you device, subscribe now.

“ಕಿಕ್ ಬಾಕ್ಸಿಂಗ್, ಹಾರ್ಸ್ ರೈಡಿಂಗ್, ಡ್ಯಾನ್ಸಿಂಗ್” ಮತ್ತಿತರ ಕಲೆಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ, ‘ಥಿಯೇಟರ್ ಆರ್ಟ್ಸ್’ ಮಾಡಿ ಹಲವು ಕಾರ್ಯಕ್ರಮಗಳನ್ನು ನಡೆಸಿ ಮೆಚ್ಚುಗೆ ಪಡೆದಿರುವ ಸಂಜನಾ ಅಕ್ಸಮ ಅವರು ಮಿಸ್ ಸೌತ್ ಕಿರೀಟವನ್ನು ತಮ್ಮದಾಗಿಸಿಕೊಳ್ಳುವ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಭಾರತದಲ್ಲಿ ವೆಸ್ಟರ್ನ್ ಪಾಪ್ ಸಿಂಗಿಂಗ್ನಲ್ಲಿಯೂ ಪಾರಂಗತರಾಗಿರುವ ಸಂಜನಾ, ಲಂಡನ್‌ನ ಟ್ರಿನಿಟಿ ಮ್ಯೂಸಿಕ್ ಕಾಲೇಜಿನಲ್ಲಿ ಸಂಗೀತದಲ್ಲಿ ಡಿಪ್ಲೊಮಾ ಮಾಡಿದ್ದಾರೆ.

“ಕೈಕೇಯಿ” ಸಿನಿಮಾದಲ್ಲಿ ಜನಪ್ರಿಯ ನಟಿ ಅಮಾನಿ ಜೊತೆ ತೆರೆ ಹಂಚಿಕೊಂಡಿರುವ ಸಂಜನಾ, ತಮ್ಮ ಪ್ರತಿಭೆಗೆ ತಕ್ಕ ಅವಕಾಶಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಇನ್ವೆಸ್ಟ್‌ಮೆಂಟ್ ಬ್ಯಾಂಕರ್. ಆಗಿದ್ದಾರೆ. ಸಂಜನಾ ಅವರ ತಂದೆಯ ಹೆಸರು ರಘುನಾಥ್ ಅಕ್ಸಮಾ, ಇವರ ತಂದೆ ವೃತ್ತಿಯಲ್ಲಿ ಟೆನ್ನಿಸ್ ಆಟಗಾರರಾಗಿದ್ದಾರೆ. ಸಂಜನಾ ಆವ್ತು ಅವರು ಪ್ರಸ್ತುತ ಕಾನೂನು ಶಿಕ್ಷಣ ಓದುತ್ತಿದ್ದಾರೆ, ವಕೀಲ ಮತ್ತು ನಟನಾಗಿ ವೃತ್ತಿಜೀವನವನ್ನು ಸಮತೋಲನ ಮಾಡುವುದು ಅವರ ಗುರಿಯಾಗಿದೆ.

ಅವಕಾಶಗಳ ಮಿತಿಯೇ ಇಲ್ಲದ ಈ ಎರಡು ಕ್ಷೇತ್ರಗಳಲ್ಲಿ ಮಿಂಚಬಲ್ಲೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಸಂಜನಾ. ಪೆಗಾಸಸ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ನಡೆಸಿದ “ಮಿಸ್ ಸೌತ್ ಇಂಡಿಯಾ” ಸಮೀಕ್ಷೆಯಲ್ಲಿ ತನಗೆ ಮತ ನೀಡಿ ಈ ರೇಸ್‌ನಲ್ಲಿ ಮುನ್ನಡೆಯಲು ಸಹಾಯ ಮಾಡುವಂತೆ ಸಂಜನಾ ಮನವಿ ಮಾಡಿದ್ದಾರೆ. ಇವರ ಆಸೆ ಈಡೇರುತ್ತಾ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಈ ಹುಡುಗಿಗೆ ಶುಭವಾಗಲಿ ಎಂದು ನಾವು ಕೂಡ ಹಾರೈಸೋಣ.

Get real time updates directly on you device, subscribe now.