ಸುದೀಪ್ ಅಭಿಮಾನಿಗಳಿಗೆ ಶಾಕ್ ಸುದ್ದಿ: ಇದ್ದಕ್ಕಿದ್ದ ಹಾಗೆ ವಿಕ್ರಾಂತ್ ರೋಣ ಟಿಕೆಟ್ ಬೆಲೆ ಇಳಿಕೆ. ಕೊನೆಗೆ ಕಲೆಕ್ಷನ್ ಕಥೆ ಏನಾಗಿದೆ ಗೊತ್ತೇ??
ಬಾದ್ ಶಾ ಸುದೀಪ್ ಅವರು ಅಭಿನಯಿಸಿರುವ ಬಹನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಜುಲೈ 28ರಂದು ವಿಶ್ವಾದ್ಯಂತ ತೆರೆಕಂಡಿದೆ. 3ಡಿ ಯಲ್ಲಿ ಕಿಚ್ಚ ಸುದೀಪ್ ಅವರನ್ನು ವಿಕ್ರಾಂತ್ ರೋಣನಾಗಿ ನೋಡಿ,ಅಭಿಮಾನಿಗಳು ಮತ್ತು ಸಿನಿಪ್ರಿಯರು ಫಿದಾ ಆಗಿದ್ದಾರೆ. ಬಿಡುಗಡೆಯಾದ ನಾಲ್ಕೇ ದಿನಕ್ಕೆ ವಿಕ್ರಾಂತ್ ರೋಣ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದ ವಿಚಾರವನ್ನು ನಿರ್ಮಾಪಕ ಜ್ಯಾಕ್ ಮಂಜು ಹೇಳಿಕೊಂಡು ಸಂತೋಷ ವ್ಯಕ್ತಪಡಿಸಿದ್ದರು. ಇದೀಗ ಇದ್ದಕ್ಕಿದ್ದ ಹಾಗೆ ವಿಕ್ರಾಂತ್ ರೋಣ ಸಿನಿಮಾದ ಟಿಕೆಟ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.
ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಆಗಿ 10 ದಿನಗಳು ಕಳೆಯುತ್ತಿದ್ದು, ಅಭಿಮಾನಿಗಳು ಮತ್ತು ಸಿನಿಪ್ರಿಯರು ವಿಕ್ರಾಂತ್ ರೋಣ 3ಡಿ ವರ್ಷನ್ ಅನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ, 3ಡಿ ವರ್ಷನ್ ಗೆ ಒಳ್ಳೆಯ ರೆಸ್ಪಾನ್ಸ್ ಸಹ ಸಿಗುತ್ತಿದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಸಿನಿಮಾ ನೋಡಿದವರು ವಿಷುವಲ್ ಟ್ರೀಟ್ ಅನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾದ ಕಥೆ, ಸುದೀಪ್ ಅವರ ಅಭಿನಯ ಎಲ್ಲವೂ ಅದ್ಭುತವಾಗಿದೆ ಎನ್ನುವ ಅಭಿಪ್ರಾಯ ಸಿನಿಮಾ ನೋಡಿದವರ ಕಡೆಯಿಂದ ಬಂದಿದೆ. ಇದೀಗ ನಿರ್ಮಾಪಕರು ಸಿನಿಮಾ ಚೆನ್ನಾಗಿ ಸಾಗುತ್ತಿರುವ ಸಮಯದಲ್ಲೇ ಟಿಕೆಟ್ ದರ ಇಳಿಸಿ ಇದಕ್ಕೆ ಕಾರಣವನ್ನು ಸಹ ತಿಳಿಸಿದ್ದಾರೆ.
3ಡಿ ಸಿನಿಮಾ ಮಾಡಿರುವುದು ಹೆಚ್ಚಿನ ವೀಕ್ಷಕರು ಸಿನಿಮಾ ನೋಡಲಿ, ಹೆಚ್ಚಿನ ಜನರಿಗೆ ಸಿನಿಮಾ ತಲುಪಲಿ ಎನ್ನುವ ಉದ್ದೇಶದಿಂದ. ಹಾಗಾಗಿ ಲಾಭಾವನ್ನು ಪಕ್ಕಕ್ಕಿಟ್ಟು ಈಗ ಟಿಕೆಟ್ ದರವನ್ನು ಕಡಿಮೆ ಮಾಡಿದ್ದೇವೆ, ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ 100ರೂಪಾಯಿ ಟಿಕೆಟ್, ಮಲ್ಟಿಪ್ಲೆಕ್ಸ್ ಗಳಲ್ಲಿ 150 ರೂಪಾಯಿಗೆ ಜನರು ಸಿನಿಮಾ ನೋಡಬಹುದು. ಕೆಲವು ಮಲ್ಟಿಪ್ಲೆಕ್ಸ್ ಗಳು ಥಿಯೇಟರ್ ಗಳು ಇನ್ನು ಟಿಕೆಟ್ ಬೆಲೆ ಕಡಿಮೆ ಮಾಡಿಲ್ಲ, ಅವರಿಗೆಲ್ಲಾ ಇಮೇಲ್ ಕಳಿಸಿದ್ದೇವೆ.. ಎಂದು ನಿರ್ಮಾಪಕ ಜ್ಯಾಕ್ ಮಂಜು ತಿಳಿಸಿದ್ದಾರೆ.ವಿಕ್ರಾಂತ್ ರೋಣ ಸಿನಿಮಾಗೆ ಪೈರೆಸಿ ಕಾಟ ಸಹ ಇದ್ದು, ಅದೆಲ್ಲವನ್ನು ಬಿಟ್ಟು ಜನರು ಥಿಯೇಟರ್ ಬಂದು 3ಡಿ ಅಲ್ಲಿ ಸಿನಿಮಾ ನೋಡಲಿ ಎನ್ನುವ ಉದ್ದೇಶದಿಂದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ.