ತನ್ನ 75 ನೇ ಸಿನೆಮಾಗೆ ನಯನತಾರ ಪಡೆಯುತ್ತಿರುವ ಸಂಭಾವನೆ ಕೇಳಿದರೆ ಒಂದು ಕ್ಷಣ ನಿಂತಲ್ಲೇ ನಿಂತು ಬಿಡ್ತೀರಾ. ಎಷ್ಟು ಗೊತ್ತೇ??
ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರು ಪಡೆದಿರುವವರು ನಟಿ ನಯನತಾರ, ಇವರಿಗೆ ಇಲ್ಲಿ ಭಾರಿ ಕ್ರೇಜ್ ಇದೆ. ಎಲ್ಲಾ ಸ್ಟಾರ್ ಕಲಾವಿದರ ಜೊತೆಗೆ ಅಭಿನಯಿಸಿರುವ ನಯನತಾರ ಅವರು ಈಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ನಟ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾಗೆ ನಯನತಾರ ಅವರು ನಾಯಕಿಯಾಗಿರುವ ವಿಚಾರ ಎಲ್ಲರಿಗು ಗೊತ್ತೇ ಇದೆ. ಈ ಸಿನಿಮಾವನ್ನು ದಕ್ಷಿಣದ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.
ಸೌತ್ ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರ. ಒಂದು ಸಿನಿಮಾಗೇ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಇವರಿಗೆ ಕಳೆದ ತಿಂಗಳು ಮದುವೆ ಆದ ವಿಚಾರ ಗೊತ್ತೇ ಇದೆ, ತಮಿಳು ನಿರ್ದೇಶಕ ವಿಜ್ಞೇಶ್ ಶಿವನ್ ಅವರೊಡನೆ ನಯನತಾರ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆಯಾದ ಬಳಿಕ ನಟಿಯರಿಗೆ ಡಿಮ್ಯಾಂಡ್ ಕಡಿಮೆ ಆಗುವುದು, ಅವರ ಸಂಭಾವನೆ ಸಹ ಕಡಿಮೆ ಆಗುವುದು ಸಾಮಾನ್ಯವಾಗಿ ಕಂಡು ಬರುವಂಥ ವಿಚಾರಗಳು. ಆದರೆ ನಯನತಾರ ಅವರ ವಿಚಾರದಲ್ಲಿ ಇದು ಉಲ್ಟಾ ಆಗಿದೆ.
ಮದುವೆ ಬಳಿಕ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ನಟಿ ನಯನತಾರ. ಇದೀಗ ತಮ್ಮ 75ನೇ ಸಿನಿಮಾಗೆ ಬರೋಬ್ಬರಿ 10 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಈ ಮೂಲಕ ನಯನತಾರ ಎಲೈಟ್ ಕ್ಲಬ್ ಗೆ ಸೇರಿದ ದಕ್ಷಿಣ ಭಾರತ ಚಿತ್ರರಂಗದ ಮೊದಲ ನಟಿ ಎನ್ನಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್. ಇವರು ಒಂದು ಸಿನಿಮಾಗೆ 10 ಕೋಟಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ. ಇದೇ ಸಾಲಿಗೆ ಈಗ ನಯನತಾರ ಅವರು ಸಹ ಸೇರ್ಪಡೆಯಾಗಿದ್ದಾರೆ.