ನಿವೇದಿತಾ ರವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರಂತೆ ಚಂದನ್: ಹೆಂಡತಿನ ಮೀಟ್ ಮಾಡೋಕೆ ಕೂಡ ಆಗ್ತಿಲ್ಲ ಎಂದದ್ದು ಯಾಕೆ ಗೊತ್ತೇ??
ಬಿಗ್ ಬಾಸ್ ರಿಯಾಲಿಟಿ ಶೋ ಇಂದ ಭೇಟಿಯಾಗಿ ಇಂದು ದಂಪತಿಗಳಾಗಿ ಜೀವನ ಸಾಗಿಸುತ್ತಿರುವ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ಇವರಿಬ್ಬರು ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟು, ಅಲ್ಲಿಯೇ ಸ್ನೇಹಿತರಾದವರು. ದಿನಗಳು ಸಾಗುತ್ತಾ ಸ್ನೇಹ ಪ್ರೀತಿಯಾಗಿ, 2020ರಲ್ಲಿ ದಾಂಪತ್ಯ ಜವವನಕ್ಕೆ ಕಾಲಿಟ್ಟರು ಈ ಜೋಡಿ. ಇವರಿಬ್ಬರು ಈಗ ತಮ್ಮ ಕೆರಿಯರ್ ವಿಚಾರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ.
ಚಂದನ್ ಶೆಟ್ಟಿ ಅವರ ಗಾಯಕ ಹಾಗೂ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವುದರ ಜೊತೆಗೆ, ಎಲ್ರು ಕಾಲೆಳಿತದೆ ಕಾಲ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ. ಎಲ್ರು ಕಾಲೆಳಿತದೆ ಕಾಲ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದ್ದು, ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ನಿವೇದಿತಾ ಗೌಡ ಅವರು ಇತ್ತೀಚೆಗೆ ಮಿಸೆಸ್ ಇಂಡಿಯಾ ಪೀಪಲ್ ಚಾಯ್ಸ್ ಅವಾರ್ಡ್ ಗೆದ್ದು ಬಂದಿದ್ದಾರೆ. ಹಾಗೆಯೇ ಗಿಚ್ಚಿ ಗಿಲಿ ಗಿಲಿ ಶೋ, ಹಾಗೂ ತಮ್ಮ ಯೂಟ್ಯೂಬ್ ಚಾನೆಲ್ ವಿಡಿಯೋ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ ನಿವೇದಿತಾ ಗೌಡ.
ಇತ್ತ ಸಿನಿಮಾ ಕೆಲಸಗಳಲ್ಲಿ ಚಂದನ್ ಸಹ ಬ್ಯುಸಿ ಇದ್ದಾರೆ. ತಮ್ಮ ಸಿನಿಮಾದ ಪ್ರೆಸ್ ಮೀಟ್ ಗೆ ಬಂದಿದ್ದ ಚಂದನ್ ಶೆಟ್ಟಿ ಸಿನಿಮಾ ಹೇಗೆ ಮೂಡಿ ಬಂದಿದೆ, ನಟನೆ ಮಾಡುವುದು ಹೇಗಿತ್ತು ಎನ್ನುವ ಬಗ್ಗೆ ಮಾತನಾಡಿ, ಬಳಿಕ ನಿವೇದಿತಾ ಗೌಡ ಬಗ್ಗೆ ಮಾತನಾಡಿ, ಅವಳು ಬ್ಯುಸಿ ಇದ್ದಾಳೆ, ನಾನು ಕೆಲಸಗಳಲ್ಲಿ ಬ್ಯುಸಿ ಇರುತ್ತೇನೆ. ಅವಳಿಗೆ ಶೂಟಿಂಗ್ ಇದ್ದಾಗ ನಾನು ಮನೆಯಲ್ಲಿ, ನನಗೆ ಕೆಲಸ ಇದ್ದಾಗ ಅವಳು ಮನೆಯಲ್ಲಿ ಹೀಗೆ, ಸಿಗೋಡೆ ಕಷ್ಟ ಆಗಿದೆ, ವಾರದಲ್ಲಿ ಒಂದೆರಡು ದಿನ ಸಿಗ್ತಿವಿ, ಆಗ ರೀಲ್ಸ್ ಮಾಡೋದು ಸಿನಿಮಾ ಹೋಗೋದು, ಲಾಂಗ್ ಡ್ರೈವ್ ಹೋಗೋದು, ಹೀಗೆ ಜೀವನ ನಡೀತಿದೆ. ನಿವಿನ ಮಿಸ್ ಮಾಡಿಕೊಳ್ಳುತ್ತೇನೆ.. ಎಂದು ಹೇಳಿದ್ದಾರೆ ಚಂದನ್ ಶೆಟ್ಟಿ.